ETV Bharat / state

ಬಿಜೆಪಿ ಸರ್ಕಾರದಲ್ಲಿ ಡಿಸಿಎಂ ಹುದ್ದೆ​​​: ಹೈಕಮಾಂಡ್-ಬಿಎಸ್​ವೈ ನಡುವೆ ಶೀತಲ ಸಮರ? - cold war

ಸಚಿವ ಸಂಪುಟ ವಿಸ್ತರಣೆ ನಂತರ ಶಾಸಕರ ಅಸಮಾಧಾನವನ್ನೇ ಶಮನಮಾಡಲಾಗದ ರಾಜ್ಯ ಬಿಜೆಪಿ ಸರ್ಕಾರದಲ್ಲಿ ಉಪ ಮುಖ್ಯಮಂತ್ರಿ ಹುದ್ದೆ ನೀಡುವ ಸಂಬಂಧ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಹೈಕಮಾಂಡ್ ನಡುವೆ ಶೀತಲ ಸಮರ ನಡೆದಿದೆ ಎನ್ನಲಾಗ್ತಿದೆ.

ಯಡಿಯೂರಪ್ಪ
author img

By

Published : Aug 24, 2019, 11:40 PM IST

ಬೆಂಗಳೂರು: ಸಚಿವ ಸಂಪುಟ ವಿಸ್ತರಣೆ ನಂತರ ಶಾಸಕರ ಅಸಮಾಧಾನವನ್ನೇ ಶಮನಮಾಡಲಾಗದ ರಾಜ್ಯ ಬಿಜೆಪಿ ಸರ್ಕಾರದಲ್ಲಿ ಉಪ ಮುಖ್ಯಮಂತ್ರಿ ಹುದ್ದೆ ನೀಡುವ ಸಂಬಂಧ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಹೈಕಮಾಂಡ್ ನಡುವೆ ಶೀತಲ ಸಮರ ನಡೆದಿದೆ.

ಡಿಸಿಎಂ ಆಕಾಂಕ್ಷಿಗಳು ಬಹಳಷ್ಟಿರುವುದರಿಂದ ಯಾರಿಗೂ ಉಪ ಮುಖ್ಯಮಂತ್ರಿ ಹುದ್ದೆ ನೀಡುವುದು ಬೇಡ ಎಂದು ಸಿಎಂ ಯಡಿಯೂರಪ್ಪನವರು ಪಟ್ಟು ಹಿಡಿದಿದ್ದಾರೆ. ಆದರೆ ಕನಿಷ್ಠ ಮೂರು ಜನ ಸಚಿವರಿಗೆ ಡಿಸಿಎಂ ಪದವಿ ನೀಡಲೇಬೇಕೆಂದು ಹೈಕಮಾಂಡ್ ಪಟ್ಟುಹಿಡಿದಿದ್ದು, ಇದು ಮುಖ್ಯಮಂತ್ರಿಗಳ ನೆಮ್ಮದಿ ಕೆಡಿಸಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.

ಉಪ ಮುಖ್ಯಮಂತ್ರಿ ಹುದ್ದೆ ಸೃಷ್ಟಿಸಿ ಎರಡನೇ ಹಂತದ ನಾಯಕತ್ವಕ್ಕೆ ಪ್ರಾಮುಖ್ಯತೆ ನೀಡಬೇಕೆಂದು ಹೈಕಮಾಂಡ್, ಮುಖ್ಯಮಂತ್ರಿ ಯಡಿಯೂರಪ್ಪನವರ ಮೇಲೆ ಒತ್ತಡ ಹೇರತೊಡಗಿದೆ‌ . ಡಿಸಿಎಂ ಹುದ್ದೆಗೆ ಸಾಕಷ್ಟು ಪೈಪೋಟಿ ಇರುವುದರಿಂದ ಯಾರನ್ನೇ ಉಪ ಮುಖ್ಯಮಂತ್ರಿಯಾಗಿ ನೇಮಕ ಮಾಡಿದರೂ ಅದು ಉಳಿದವರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಹಾಗಾಗಿ ಡಿಸಿಎಂ ನೇಮಕದ ಉಸಾಬರಿಯೇ ಬೇಡ ಎಂದು ಮುಖ್ಯಮಂತ್ರಿ ಯಡಿಯೂರಪ್ಪನವರು ವಾದ ಮುಂದಿಟ್ಟಿದ್ದಾರೆ. ಆದರೆ ಇದಕ್ಕೆ ಬಿಜೆಪಿ ಹೈಕಮಾಂಡ್ ಸಹಮತ ವ್ಯಕ್ತಪಡಿಸುತ್ತಿಲ್ಲ ಎನ್ನಲಾಗಿದೆ.

ಮಾಜಿ ಡಿಸಿಎಂಗಳಾದ ಆರ್.ಅಶೋಕ್, ಕೆ.ಎಸ್.ಈಶ್ವರಪ್ಪ ಡಿಸಿಎಂ ಹುದ್ದೆಯ ಪ್ರಮುಖ ಆಕಾಂಕ್ಷಿಗಳಾಗಿದ್ದಾರೆ. ಇವರ ಜತೆಗೆ ಗೋವಿಂದ ಕಾರಜೋಳ ಅವರಿಗೆ ದಲಿತ ಕೋಟಾದಲ್ಲಿ, ನೂತನ ಸಚಿವ ಆರ್.ಅಶ್ವತ್ಥ ನಾರಾಯಣ ಅವರಿಗೆ ಒಕ್ಕಲಿಗ ಕೋಟಾದಲ್ಲಿ, ಲಕ್ಷ್ಮಣ ಸವದಿಗೆ ಲಿಂಗಾಯತ ಕೋಟಾದಲ್ಲಿ ನೀಡುವಂತೆ ಸಿಎಂಗೆ ಒತ್ತಡ ಇದೆ ಎನ್ನಲಾಗುತ್ತದೆ.

ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಹೈಕಮಾಂಡ್ ನೀಡಿದ ಆಶ್ವಾಸನೆಯಂತೆ ವಾಲ್ಮೀಕಿ ಸಮುದಾಯದ ನಾಯಕರಾದ ತಮಗೆ ಉಪ ಮುಖ್ಯಮಂತ್ರಿ ಜವಾವ್ದಾರಿ ನೀಡಬೇಕೆಂದು ಸಚಿವ ಶ್ರೀರಾಮುಲು ಒತ್ತಡ ಹಾಕುತ್ತಿದ್ದಾರೆ. ಈ ಬೆಳವಣಿಗೆ ನಡುವೆ ವಾಲ್ಮೀಕಿ ಸಮುದಾಯದ ಶ್ರೀಗಳು ಸಹ ತಮ್ಮ ಸಮುದಾಯಕ್ಕೆ ಡಿಸಿಎಂ ಪೋಸ್ಟ್ ನೀಡಲೇಬೇಕೆಂದು ಆಗ್ರಹಪಡಿಸುತ್ತಿದ್ದಾರೆ. ಇವರಲ್ಲದೆ ಭವಿಷ್ಯದಲ್ಲಿ ಬಿಜೆಪಿ ಸರ್ಕಾರದಲ್ಲಿ ಅನರ್ಹ ಶಾಸಕರು ಸಚಿವರಾದರೆ ಅವರಲ್ಲಿ ರಮೇಶ್ ಜಾರಕಿಹೊಳಿ, ಹೆಚ್.ವಿಶ್ವನಾಥ್ ಸಹ ಉಪ ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿಗಳಾಗಿದ್ದಾರೆ.

ಡಿಸಿಎಂ ಹುದ್ದೆ ಹೆಚ್ವಿನ ಪವರ್ ಸೆಂಟರ್​​ಗಳನ್ನು ಸೃಷ್ಟಿಸಿ ಸುಗಮ ಆಡಳಿತಕ್ಕೆ ಅಡಚಣೆಯಾಗಲಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪನವರು ವಾದಿಸುತ್ತಿದ್ದಾರಾದರೂ ಹೈಕಮಾಂಡ್ ಈ ವಾದವನ್ನು ಕೇಳುತ್ತಿಲ್ಲ ಎನ್ನಲಾಗಿದೆ. ಈ ವಿದ್ಯಮಾನದಿಂದ ಹೈಕಮಾಂಡ್ ಆದೇಶಕ್ಕೆ ಒಪ್ಪಿ ಡಿಸಿಎಂ ಜವಾಬ್ದಾರಿಯನ್ನು ಸಚಿವರಿಗೆ ನೀಡಿದರೆ ಮತ್ತೊಂದು ಅಸಮಾಧಾನ ಎದುರಿಸಬೇಕಲ್ಲ ಎಂದು ಮುಖ್ಯಮಂತ್ರಿ ಯಡಿಯೂರಪ್ಪಚಿಂತೆಗೀಡಾಗಿದ್ದಾರೆಂದು ಹೇಳಲಾಗ್ತಿದೆ.

Intro:ಕಮಲ ಸರಕಾರದಲ್ಲಿ ಡಿಸಿಎಂ ಫೈಟ್ : ಹೈಕಮಾಂಡ್ ಹಠಕ್ಕೆ
ಸಿಎಂ ಬಿಎಸ್ ವೈ ವಿರೋಧ ...?

ಬೆಂಗಳೂರು :

ಸಚಿವ ಸಂಪುಟ ವಿಸ್ತರಣೆ ನಂತರ ಶಾಸಕರ ಅಸಮಾಧಾನ ವನ್ನೇ ಶಮನಮಾಡಲಾಗದ ರಾಜ್ಯ ಬಿಜೆಪಿ ಸರಕಾರದಲ್ಲಿ ಉಪ ಮುಖ್ಯಮಂತ್ರಿ ಹುದ್ದೆ ನೀಡುವ ಸಂಬಂಧ ಮುಖ್ಯಮಂತ್ರಿ ಯಡಿಯೂರಪ್ಪ ಹಾಗು ಹೈಕಮಾಂಡ್ ನಡುವೆ ಶೀತಲ ಸಮರ ನಡೆದಿದೆ.

ಡಿಸಿಎಂ ಆಕಾಂಕ್ಷಿಗಳು ಬಹಳಷ್ಟಿರುವುದರಿಂದ ಯಾರಿಗೂ ಉಪಮುಖ್ಯಮಂತ್ರಿ ಹುದ್ದೆ ನೀಡುವುದು ಬೇಡ ಎನ್ನುವುದು ಸಿಎಂ ಯಡಿಯೂರಪ್ಪನವರು ಪಟ್ಟು ಹಿಡಿದಿದ್ದಾರೆ. ಆದರೆ ಕನಿಷ್ಟ ಮೂರು ಜನ ಸಚಿವರಿಗೆ ಡಿಸಿಎಂ ಪದವಿ ನೀಡಲೇಬೇಕೆಂದು ಹೈಕಮಾಂಡ್ ಪಟ್ಟುಹಿಡಿದಿದ್ದು ಇದು ಮುಖ್ಯಮಂತ್ರಿಗಳ ನೆಮ್ಮದಿ ಕೆಡಿಸಿದೆ.

Body: ಉಪಮುಖ್ಯಮಂತ್ರಿ ಹುದ್ದೆ ಸೃಷ್ಟಿಸಿ ಎರಡನೇ ಹಂತದ ನಾಯಕತ್ವಕ್ಕೆ ಪ್ರಾಮುಖ್ಯತೆ ನೀಡಬೇಕೆಂದು ಹೈಕಮಾಂಡ್ ಮುಖ್ಯಮಂತ್ರಿ ಯಡಿಯೂರಪ್ಪನವರ ಮೇಲೆ ಒತ್ತಡ ಹೇರತೊಡಗಿದೆ‌ . ಡಿಸಿಎಂ ಹುದ್ದೆಗೆ ಸಾಕಷ್ಟು ಪೈಪೋಟಿ ಇರುವುದರಿಂದ ಯಾರನ್ನೇ ಉಪ ಮುಖ್ಯಮಂತ್ರಿ ಯಾಗಿ ನೇಮಕ ಮಾಡಿದರೆ ಅದು ಉಳಿದವರ ಅಸಮಾಧಾನಕ್ಕೆ ಕಾರಣ ವಾಗುತ್ತದೆ ಹಾಗಾಗಿ ಡಿಸಿಎಂ ನೇಮಕದ ಉಸ್ತುವಾರಿಯೇ ಬೇಡ ಎಂದು ಮುಖ್ಯಮಂತ್ರಿ ಯಡಿಯೂರಪ್ಪನವರು ವಾದ ಮುಂದಿಟ್ಟಿದ್ದಾರೆ. ಆದರೆ ಇದಕ್ಕೆ ಬಿಜೆಪಿ ಹೈಕಮಾಂಡ್ ಸಹಮತ ವ್ಯಕ್ತ ಪಡಿಸುತ್ತಿಲ್ಲ ಎನ್ನಲಾಗಿದೆ.

ಮಾಜಿ ಡಿಸಿಎಂಗಳಾದ ಆರ್ ಅಶೋಕ್, ಕೆ.ಎಸ್ ಈಶ್ವರಪ್ಪ ಡಿಸಿಎಂ ಹುದ್ದೆಯ ಪ್ರಮುಖ ಆಕಾಂಕ್ಷಿಗಳಾಗಿದ್ದಾರೆ. ಇವರ ಜತೆಗೆ ಗೋವಿಂದ ಕಾರಜೋಳ ಅವರಿಗೆ ದಲಿತ ಕೋಟಾದಲ್ಲಿ, ನೂತನ ಸಚಿವ ಆರ್ ಅಶ್ವತ್ಥ ನಾರಾಯಣ ಅವರಿಗೆ ಒಕ್ಕಲಿಗ ಕೋಟಾದಲ್ಲಿ , ಲಕ್ಷ್ಮಣ ಸವದಿಗೆ ಲಿಂಗಾಯತ ಕೋಟಾದಲ್ಲಿ ನೀಡುವಂತೆ ಸಿಎಂ ಗೆ ಒತ್ತಡ ಇದೆ ಎನ್ನಲಾಗುತ್ತದೆ.

ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಹೈಕಮಾಂಡ್ ನೀಡಿದ ಆಶ್ವಾಸನೆಯಂತೆ ವಾಲ್ಮೀಕಿ ಸಮುದಾಯದ ನಾಯಕರಾದ ತಮಗೆ ಉಪಮುಖ್ಯಮಂತ್ರಿ ಜವಾವ್ದಾರಿ ನೀಡಬೇಕೆಂದು ಸಚಿವ ಶ್ರೀರಾಮುಲು ಒತ್ತಡ ಹಾಕುತ್ತಿದ್ದಾರೆ. ಈ ಬೆಳವಣಿಗೆ ನಡುವೆ ವಾಲ್ಮೀಕಿ ಸಮುದಾಯದ ಶ್ರೀ ಗಳು ಸಹ ತಮ್ಮ ಸಮುದಾಯಕ್ಕೆ ಡಿಸಿಎಂ ಪೋಸ್ಟ್ ನೀಡಲೇಬೇಕೆಂದು ಆಗ್ರಹಪಡಿಸುತ್ತಿದ್ದಾರೆ.

ಇವರಲ್ಲದೆ ನಾಳೆ ಭವಿಷ್ಯದಲ್ಲಿ ಬಿಜೆಪಿ ಸರಕಾರದಲ್ಲಿ ಅನರ್ಹ ಶಾಸಕರು ಸಚಿವರಾದರೆ ಅವರಲ್ಲಿ ರಮೇಶ್ ಜಾರಕಿಹೊಳಿ, ಹೆಚ್ ವಿಶ್ವನಾಥ್ ಸಹ ಉಪಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿಗಳಾಗಿದ್ದಾರೆ.

ಡಿಸಿಎಂ ಹುದ್ದೆ ಹೆಚ್ವಿನ ಪವರ್ ಸೆಂಟರ್ ಗಳನ್ನು ಸೃಷ್ಟಿಸಿ ಸುಗಮ ಆಡಳಿತಕ್ಕೆ ಅಡಚಣೆ ಯಾಗಲಿದೆ ಎಂದು ಎಂದು ಮುಖ್ಯಮಂತ್ರಿ ಯಡಿಯೂರಪ್ಪನವರು ವಾದಿಸುತ್ತಿದ್ದಾರಾದರೂ ಹೈಕಮಾಂಡ್ ಈ ವಾದವನ್ನು ಕೇಳುತ್ತಿಲ್ಲ ಎನ್ನಲಾಗಿದೆ. ಈ ವಿದ್ಯಮಾನದಿಂದ ಹೈಕಮಾಂಡ್ ಆದೇಶಕ್ಕೆ ಒಪ್ಪಿ ಡಿಸಿಎಂ ಜವಾಬ್ದಾರಿಯನ್ನು ಸಚಿವರಿಗೆ ನೀಡಿದರೆ ಮತ್ತೊಂದು ಅಸಮಾಧಾನ ಎದುರಿಸಬೇಕಲ್ಲ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ನವರು ಚಿಂತೆಗೀಡಾಗಿದ್ದಾರೆಂದು ಹೇಳಲಾಗಿದೆ.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.