ETV Bharat / state

ಶಿರಾ-ಆರ್​ಆರ್‌ನಗರದಲ್ಲಿ ಪ್ರಬುದ್ಧ ಫಲಿತಾಂಶ : ಡಿಸಿಎಂ ಲಕ್ಷ್ಮಣ ಸವದಿ

ಈ ಎರಡು ಫಲಿತಾಂಶಗಳ ಮೂಲಕ ಮತದಾರರು ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳಿಗೆ ತಕ್ಕ ಪಾಠ ಕಲಿಸಿರುವುದರಿಂದ, ಇನ್ನಾದ್ರೂ ಮುಂದೆ ಈ ಪಕ್ಷಗಳು ನೆಗೆಟಿವ್ ಪಾಲಿಟಿಕ್ಸ್ ಕೈಬಿಡುವಂತಾಗಲಿ..

Lakshmana Savadi
ಲಕ್ಷ್ಮಣ ಸವದಿ
author img

By

Published : Nov 10, 2020, 4:00 PM IST

ಬೆಂಗಳೂರು : ಶಿರಾ ಮತ್ತು ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರಗಳಲ್ಲಿ ನಡೆದ ಉಪ ಚುನಾವಣೆಗಳಲ್ಲಿ ಜಯಸಾಧಿಸುವ ಮೂಲಕ ಬಿಜೆಪಿಯು ಮತ್ತೊಮ್ಮೆ ಅಗ್ನಿಪರೀಕ್ಷೆಯಲ್ಲಿ ಯಶಸ್ವಿಯಾಗಿ ದಾಖಲೆ ನಿರ್ಮಿಸಿರುವುದು ಸಂತೋಷದ ಸಂಗತಿ ಎಂದು ಡಿಸಿಎಂ ಲಕ್ಷ್ಮಣ ಸವದಿ ಸಂತಸ ವ್ಯಕ್ತಪಡಿಸಿದ್ದಾರೆ.

ಉಪ ಚುನಾವಣೆ ಫಲಿತಾಂಶದ ಬಗ್ಗೆ ಪ್ರತಿಕ್ರಿಯಿಸಿದ ಅಲರು, ಕೇಂದ್ರದಲ್ಲಿ ಮೋದಿಜಿ ಅವರ ಸರ್ಕಾರದ ಸಾಧನೆ ಮತ್ತು ರಾಜ್ಯದಲ್ಲಿ ಬಿ ಎಸ್ ಯಡಿಯೂರಪ್ಪ ಅವರ ನೇತೃತ್ವದಲ್ಲಿ ನಮ್ಮ ಸರ್ಕಾರ ಕೈಗೊಂಡ ಜನಹಿತ ಕಾರ್ಯಕ್ರಮಗಳು ಜನತೆಗೆ ಸಮಾಧಾನ ತಂದಿವೆ ಎಂಬುದು ಈ ಚುನಾವಣಾ ಫಲಿತಾಂಶದ ಮೂಲಕ ಸಾಬೀತಾಗಿದೆ ಎಂದರು.

ರಾಜರಾಜೇಶ್ವರಿನಗರ ಮತ್ತು ಶಿರಾ ಉಪಚುನಾವಣೆಯನ್ನು ಅಸ್ತ್ರವಾಗಿ ಇಟ್ಟುಕೊಂಡು ಕಾಂಗ್ರೆಸ್ ಮುಖಂಡರು ರಾಜ್ಯ ಸರ್ಕಾರದ ಆಡಳಿತವನ್ನು ಅಸ್ಥಿರಗೊಳಿಸಲು ಹುನ್ನಾರ ನಡೆಸಿದ್ದರು.

ಆದರೆ, ಈ ಎರಡೂ ಕ್ಷೇತ್ರಗಳ ಮತದಾರರು ಈ ಕುತಂತ್ರಕ್ಕೆ ತಕ್ಕ ಪಾಠ ಕಲಿಸಿ ನಮ್ಮ ಸರ್ಕಾರದ ಸಕರಾತ್ಮಕ, ಜನಪರ ಕಾರ್ಯಕ್ರಮಗಳಿಗೆ ಬೆಂಬಲ ಸೂಚಿಸಿರುವುದು ಉತ್ತಮ ರಾಜಕೀಯ ಬೆಳವಣಿಗೆ ಎಂದರು.

ಈ ಎರಡು ಫಲಿತಾಂಶಗಳ ಮೂಲಕ ಮತದಾರರು ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳಿಗೆ ತಕ್ಕ ಪಾಠ ಕಲಿಸಿರುವುದರಿಂದ, ಇನ್ನಾದ್ರೂ ಮುಂದೆ ಈ ಪಕ್ಷಗಳು ನೆಗೆಟಿವ್ ಪಾಲಿಟಿಕ್ಸ್ ಕೈಬಿಡುವಂತಾಗಲಿ.

ಅಭಿವೃದ್ಧಿಪರವಾದ ಈ ಉತ್ತಮ ಫಲಿತಾಂಶವನ್ನು ನೀಡಿದ ಪ್ರಬುದ್ಧ ಮತದಾರರಿಗೆ ಮತ್ತು ವಿಜಯಿಯಾದ ಮುನಿರತ್ನ ಮತ್ತು ರಾಜೇಶ್‌ಗೌಡ ಅವರಿಗೆ ನನ್ನ ಹಾರ್ದಿಕ ಅಭಿನಂದನೆಗಳು ಎಂದು ತಿಳಿಸಿದ್ದಾರೆ.

ಕೇವಲ ಕರ್ನಾಟಕ ಮಾತ್ರವಲ್ಲ ಬಿಹಾರ ಚುನಾವಣೆಯ ಫಲಿತಾಂಶವೂ ಕೂಡ ಬಿಜೆಪಿ ಮತ್ತು ಮಿತ್ರಪಕ್ಷಗಳ ಪರ ವ್ಯಕ್ತವಾಗಿದೆ. ಇನ್ನೂ ಕೆಲವು ರಾಜ್ಯಗಳ ಉಪಚುನಾವಣೆಗಳಲ್ಲಿಯೂ ಬಿಜೆಪಿ ಮುಂದಿರುವುದು ಮೋದಿ ಸರ್ಕಾರದ ಜನಪ್ರಿಯತೆಗೆ ಸಾಕ್ಷಿ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.