ETV Bharat / state

ಎಸ್ ಬದಲು ಎಕ್ಸ್... ಲಕ್ಷ್ಮಣ ಸವದಿ ನಾಮಫಲಕದಲ್ಲಿ ಯಡವಟ್ಟು

author img

By

Published : Aug 28, 2019, 8:01 PM IST

Updated : Aug 28, 2019, 11:32 PM IST

ಒಂದಲ್ಲ ಒಂದು ವಿಷಯಕ್ಕೆ ಸುದ್ದಿಯಾಗುತ್ತಲೇ ಇರುವ ನೂತನ ಡಿಸಿಎಂ ಲಕ್ಷ್ಮಣ ಸವದಿ, ಈಗ ನಾಮಫಲಕ ವಿಚಾರಕ್ಕೆ ಸುದ್ದಿಯಾಗಿದ್ದು, ಉಪಮುಖ್ಯ ಮಂತ್ರಿಗಳಿಗೆ ವಿಕಾಸ ಸೌಧದಲ್ಲಿ ನೀಡಲಾಗಿರುವ ಕಚೇರಿಯ ನಾಮಫಲಕದಲ್ಲಿ ಸವದಿ ಹೆಸರನ್ನು ತಪ್ಪಾಗಿ ಬರೆಯಲಾಗಿದೆಯಂತೆ. ಆದ್ದರಿಂದ ಕಚೇರಿ ಪ್ರವೇಶ ಮಾಡಿದ ಮೊದಲ ದಿನವೇ ನಾಮಫಲಕ ತೆರವುಗೊಳಿಸುವಂತಾಗಿದೆ.

ಸವದಿ ನಾಮಫಲಕದಲ್ಲಿ ಎಡವಟ್ಟು

ಬೆಂಗಳೂರು: ಲಕ್ಷ್ಮಣ ಸವದಿ ಪಾಲಿಗೆ ಅಧಿಕಾರದ ಜೊತೆ ಅಪಸ್ವರವೂ ಜೊತೆಯಾಗಿಯೇ ಬರುತ್ತಿದೆ. ಒಂದಲ್ಲ ಒಂದು ಸುದ್ದಿಗೆ ಗ್ರಾಸವಾಗಿರುವ ಸವದಿ ಈಗ ಇನ್ನೊಂದು ವಿಚಾರದಲ್ಲಿ ಸುದ್ದಿಯಾಗಿದ್ದಾರೆ.

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸೋತು, ಬಿಎಸ್ ಯಡಿಯೂರಪ್ಪ ನೇತೃತ್ವದ ಸಂಪುಟದಲ್ಲಿ ಸಚಿವರಾದಾಗಲೇ ಸವದಿ ವಿರುದ್ದ ದೊಡ್ಡಮಟ್ಟದ ಅಪಸ್ವರ ಕೇಳಿಬಂದಿತ್ತು. ಇದಾದ ಬಳಿಕ ಅವರು ಉಪಮುಖ್ಯಮಂತ್ರಿ ಎಂದು ಘೋಷಣೆಯಾದಾಗ ಅಪಸ್ವರ ಇನ್ನಷ್ಟು ಹೆಚ್ಚಾಗಿತ್ತು. ಬಿಜೆಪಿಯಲ್ಲಿ ಇವರನ್ನು ವಿರೋಧಿಸಿದವರೇ ಇಲ್ಲ ಎನ್ನುವ ಸ್ಥಿತಿ ತಲುಪಿದ್ದ ಸಂದರ್ಭದಲ್ಲಿಯೇ. ಸಚಿವ ಸವದಿಗೆ ನೀಡಲಾಗಿದ್ದ ವಿಕಾಸಸೌಧದ ಕೊಠಡಿಯ ನಾಮಫಲಕದಲ್ಲಿ ದೊಡ್ಡ ಯಡವಟ್ಟಾಗಿದೆ.

ಸವದಿ ನಾಮಫಲಕದಲ್ಲಿ ಯಡವಟ್ಟು

ಲಕ್ಷ್ಮಣ ಸವದಿ ಹೆಸರಿನ ನಾಮಫಲಕದಲ್ಲಿ ಕನ್ನಡ ಸರಿಯಾಗಿದ್ದರೂ ಆಂಗ್ಲ ಪದ ಬರೆಯುವಾಗ ಎಡವಟ್ಟಾಗಿದೆ. LAKSHMAN ಆಗಬೇಕಿದ್ದ ಅವರ ಹೆಸರು ಯಡವಟ್ಟಿನಿಂದಾಗಿ LAKXHMAN ಎಂದಾಗಿದೆ. ಅಲ್ಲಿಗೆ ಅವರ ಹೆಸರನ್ನು ನಾಲ್ಕನೇ ಶಬ್ದ S ಬದಲು X ಎಂದು ಆಗಿದೆ. ಫಲಕ ಬರೆಯುವವರ ಯಡವಟ್ಟು, ಮತ್ತು ವಿಧಾನಸೌಧ ಸಿಬ್ಬಂದಿ ತಪ್ಪಿನಿಂದಾಗಿ ಈ ಪ್ರಮಾದವಾಗಿದೆ ಎನ್ನಲಾಗುತ್ತಿದೆ.

ನಮ್ಮ ತಪ್ಪಲ್ಲ ಅಂದ್ರು ವಿಧಾನಸೌಧ ಸಿಬ್ಬಂದಿ :

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ವಿಧಾನಸೌಧ ಸಿಬ್ಬಂದಿ , ಸಚಿವರ ಆಪ್ತರು ಬರೆದುಕೊಟ್ಟಂತೆ ನಾವು ಬರೆದಿದ್ದೇವೆ. ಇದರಲ್ಲಿ ನಮ್ಮ ತಪ್ಪೇನೂ ಇಲ್ಲ ಎಂದಿದ್ದಾರೆ. ಇಂದು ಬೆಳಗ್ಗೆ ಕಚೇರಿ ಪೂಜೆ ನೆರವೇರಿದ್ದು,ಸಂಜೆ ಹೊತ್ತಿಗೆ ಹೆಸರಿನ ಯಡವಟ್ಟಿನಿಂದಾಗಿ ಕಚೇರಿ ನಾಮಫಲಕ ತೆರವುಗೊಳಿಸುವಂತಾಗಿದೆ. ಸದ್ಯ ವಿಕಾಸ ಸೌಧದ ಮೂರನೇ ಮಹಡಿಯಲ್ಲಿರುವ ಸವದಿ ಕೊಠಡಿಯಲ್ಲಿ ನಾಮಫಲಕವಿಲ್ಲ. ಆದಷ್ಟು ಬೇಗ ಹೊಸ ಬೋರ್ಡ್​ ಅಳವಡಿಸಲಾಗುವುದು ಎಂದು ವಿಧಾನಸೌಧ ಸಿಬ್ಬಂದಿ ತಿಳಿಸಿದ್ದಾರೆ.

Intro:newsBody:ಲಕ್ಷ್ಮಣ್ ಸವದಿ ನಾಮಫಲಕದಲ್ಲಿ ಎಸ್ ಬದಲು ಮೂಡಿದೆ ಎಕ್ಸ್, ಯಡವಟ್ಟಿಗೆ ನಾವು ಹೊಣೆ ಅಲ್ಲ ಅಂದರು ವಿಧಾನಸೌಧ ಸಿಬ್ಬಂದಿ

ಬೆಂಗಳೂರು: ಚುನಾವಣೆಯಲ್ಲಿ ಸೋತು ಸುಣ್ಣವಾಗಿದ್ದ ಲಕ್ಷ್ಮಣ ಸವದಿ ಪಾಲಿಗೆ ಅಧಿಕಾರದ ಜೊತೆ ಅಪಸ್ವರವೂ ಜೊತೆಯಾಗಿಯೇ ಬರುತ್ತಿದೆ. ಒಂದಾದ ಬಳಿಕ ಇನ್ನೊಂದು ಸುದ್ದಿಗೆ ಗ್ರಾಸವಾಗಿರುವ ಲಕ್ಷ್ಮಣ ಸವದಿ ಈಗ ಇನ್ನೊಂದು ವಿಚಾರದಲ್ಲಿ ಸುದ್ದಿಯಾಗಿದ್ದಾರೆ.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸೋತು ಹಾಲಿ ಬಿಎಸ್ ಯಡಿಯೂರಪ್ಪ ಸಂಪುಟದಲ್ಲಿ ಸಚಿವರಾದ ಆಗಲೇ ದೊಡ್ಡಮಟ್ಟದ ಅಪಸ್ವರ ಕೇಳಿಬಂದಿತ್ತು. ಇದಾದ ಬಳಿಕ ಅವರು ಉಪಮುಖ್ಯಮಂತ್ರಿ ಎಂದು ಘೋಷಣೆಯಾದಾಗ ಅಪಸ್ವರ ಇನ್ನಷ್ಟು ಹೆಚ್ಚಾಗಿತ್ತು. ಬಿಜೆಪಿಯಲ್ಲಿ ಇವರನ್ನ ವಿರೋಧಿಸಿದವರೇ ಇಲ್ಲ ಎನ್ನುವ ಸ್ಥಿತಿ ತಲುಪಿದ್ದ ಸಂದರ್ಭದಲ್ಲಿಯೇ. ಅವರಿಗೆ ನೀಡಲಾಗಿದ್ದ ವಿಕಾಸಸೌಧದ ಕೊಠಡಿಯ ನಾಮಫಲಕದಲ್ಲಿ ದೊಡ್ಡ ಯಡವಟ್ಟಾಗಿದೆ.
ಲಕ್ಷ್ಮಣ ಸವದಿ ಅವರ ಹೆಸರಿನ ನಾಮಫಲಕದಲ್ಲಿ ಕನ್ನಡ ಸರಿಯಾಗಿದ್ದರೂ ಆಂಗ್ಲ ಪದ ಬರೆಯುವಲ್ಲಿ ಎಡವಟ್ಟಾಗಿದೆ. LAKSHMAN ಆಗಬೇಕಿದ್ದ ಅವರ ಹೆಸರು ಬರೆಯುವವರ ಎಡವಟ್ಟಿನಿಂದಾಗಿ LAKXHMAN ಎಂದಾಗಿದೆ. ಅಲ್ಲಿಗೆ ಅವರ ಹೆಸರನ್ನು ನಾಲ್ಕನೇ ಶಬ್ದ S ಬದಲು X ಎಂದು ಆಗಿದೆ. ಫಲಕ ಬರೆಯುವವರ ಎಡವಟ್ಟು ಇನ್ನೊಂದು ಸುದ್ದಿಗೆ ಗ್ರಾಸವಾಗಿದ್ದ ಲಕ್ಷ್ಮಣ್ ಸವದಿ ಹೆಸರನ್ನೇ ಬರೆಯುವಲ್ಲಿ ವಿಧಾನಸೌಧ ಸಿಬ್ಬಂದಿ ಎಡವಿದರೆ ಎನ್ನುವ ಅನುಮಾನ ಕಾಡಿದೆ.
ನಮ್ಮ ತಪ್ಪಲ್ಲ
ಈ ಬಗ್ಗೆ ವಿಚಾರಿಸಿದಾಗ ವಿಧಾನಸೌಧ ಸಿಬ್ಬಂದಿ ನೀಡಿದ ಪ್ರತಿಕ್ರಿಯೆ ನಿಜಕ್ಕೂ ಅಚ್ಚರಿ ಮೂಡಿಸುವಂತದ್ದು ಆಗಿತ್ತು. ಸಚಿವರ ಆಪ್ತರು ಬರೆದುಕೊಟ್ಟ ಪ್ರೀತಿಯೇ ನಾವು ಬರೆದಿದ್ದೇವೆ ಇದರಲ್ಲಿ ನಮ್ಮ ತಪ್ಪೇನು ಇಲ್ಲ ಎಂದು ನುಣುಚಿಕೊಂಡಿದ್ದಾರೆ.
ಒಟ್ಟಾರೆ ಇಂದು ಬೆಳಗ್ಗೆ ಕಚೇರಿ ಪೂಜೆ ನೆರವೇರಿಸಿದ ಲಕ್ಷ್ಮಣ್ ಸವದಿ ಸಂಜೆಯ ಹೊತ್ತಿಗೆ ತಮ್ಮ ಹೆಸರಿನ ನಾಮಫಲಕದ ಎಡವಟ್ಟಿನಿಂದಾಗಿ ತೆಗೆಸುವ ಸ್ಥಿತಿ ಎದುರಾಗಿರುವುದು ನಿಜಕ್ಕೂ ವಿಪರ್ಯಾಸ. ವಿಕಾಸ ಸೌಧದ ಮೂರನೇ ಮಹಡಿಯಲ್ಲಿರುವ ಇವರ ಕೊಠಡಿ ಈಗ ಫಲಕ ಇಲ್ಲದಂತಾಗಿದೆ. ಆದಷ್ಟು ಬೇಗ ಹೊಸ ಅಳವಡಿಸಿರುವ ಭರವಸೆಯನ್ನು ವಿಧಾನಸೌಧ ಸಿಬ್ಬಂದಿ ನೀಡಿದ್ದಾರೆ.
ಒಟ್ಟಾರೆ ಸಾಲುಸಾಲು ಅವಾಂತರಗಳೇ ಲಕ್ಷ್ಮಣ್ ಸವದಿ ಅವರನ್ನು ಸುತ್ತಿಕೊಳ್ಲುತ್ತಿದ್ದವು ಮುಂದಿನ ದಿನಗಳಲ್ಲಿ ಇವರ ವಿಚಾರದಲ್ಲಿ ಆಗಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.Conclusion:news
Last Updated : Aug 28, 2019, 11:32 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.