ETV Bharat / state

ಜಿಗಣಿ ರಸ್ತೆ ವಿಸ್ತರಣೆ ಕಾಮಗಾರಿ ಪರಿಶೀಲಿಸಿದ ಗೋವಿಂದ ಕಾರಜೋಳ - ಆನೇಕಲ್ ಲೇಟೆಸ್ಟ್ ನ್ಯೂಸ್​

ಆನೇಕಲ್ಲಿನ ಜಿಗಣಿಯ ರಸ್ತೆ ಅಗಲೀಕರಣ ಮತ್ತು ಕೆಆರ್​ಡಿಸಿಎಲ್ ಉದ್ದೇಶಿತ ರಸ್ತೆ ಕಾಮಗಾರಿಗೆ ಉಪಮುಖ್ಯಮಂತ್ರಿ ಹಾಗೂ ಲೋಕೊಪಯೋಗಿ ಸಚಿವ ಗೋವಿಂದ ಕಾರಜೋಳ ಚಾಲನೆ ನೀಡಿ ಪರಿಶೀಲನೆ ನಡೆಸಿದರು.

DCM Govind Karjol visits anekallu
ಜಿಗಣಿ ರಸ್ತೆ ಅಗಲೀಕರಣ ಕಾಮಗಾರಿ ಪರಿಶೀಲಿಸಿದ ಗೋವಿಂದ ಕಾರಜೋಳ
author img

By

Published : May 23, 2020, 6:19 PM IST

ಆನೇಕಲ್​: ಜಿಗಣಿಯ ರಸ್ತೆ ವಿಸ್ತರಣೆ ಮತ್ತು ಕೆಆರ್​ಡಿಸಿಎಲ್ ಉದ್ದೇಶಿತ ರಸ್ತೆ ಕಾಮಗಾರಿಗೆ ಉಪಮುಖ್ಯಮಂತ್ರಿ ಹಾಗೂ ಲೋಕೋಪಯೋಗಿ ಸಚಿವ ಗೋವಿಂದ ಕಾರಜೋಳ ಚಾಲನೆ ನೀಡಿ ಪರಿಶೀಲನೆ ನಡೆಸಿದರು.

ಬೆಂಗಳೂರು ದಕ್ಷಿಣ ಭಾಗದ ಶಾಸಕ ಎಂ.ಕೃಷ್ಣಪ್ಪ ಜಿಗಣಿಯಲ್ಲಿನ ರಸ್ತೆ ಸಂಚಾರ ಕುರಿತು ಮನವಿ ಮಾಡಿದ ಬೆನ್ನಲ್ಲೇ ಡಿಸಿಎಂ ಭೇಟಿ ನೀಡಿದ್ದು, ಈ ನಡುವೆ ಕೆಲ ರಸ್ತೆ ಕಾಮಗಾರಿಗಳನ್ನು ಪರಿಶೀಲಿಸಿದರು.

ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಶೀಘ್ರವೇ ಭೂ ಸ್ವಾಧೀನ ಹಾಗೂ ರಸ್ತೆಯಂಚಿನ ಕಟ್ಟಡಗಳಿಗೆ ಪರಿಹಾರ ಒದಗಿಸಿಕೊಟ್ಟರೆ, ರಸ್ತೆ ಕಾಮಗಾರಿ ಚಾಲನೆಗೊಳ್ಳಲಿದೆ. ಇದಕ್ಕಾಗಿ ಇಂದು ತಾತ್ವಿಕ ಒಪ್ಪಿಗೆ ವ್ಯಕ್ತಪಡಿಸಲಾಗಿದೆ ಎಂದರು.

ಜೊತೆಗೆ ಬನ್ನೇರುಘಟ್ಟ- ಜಿಗಣಿ - ಆನೇಕಲ್ ಮುಖ್ಯರಸ್ತೆ 19ಕಿ.ಮೀ ಉದ್ದದ ರಸ್ತೆಗೆ ಇಂದಿನಿಂದಲೇ ಕಾಮಗಾರಿ ಆರಂಭಗೊಳ್ಳಲು ಸೂಚಿಸಲಾಗಿದೆ. ಕೆಲ ದಿನಗಳಲ್ಲಿಯೇ ಕಾಮಗಾರಿ ಪೂರ್ಣಗೊಳ್ಳಲಿದೆ. ಕೊರೊನಾ ಸಂಕಷ್ಟಕ್ಕೆ ಕಾರ್ಮಿಕರ ಅಲಭ್ಯತೆ ಕಾರಣವಾಗಿತ್ತು ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.