ಬೆಂಗಳೂರು: ಮಧ್ಯಪ್ರದೇಶದಲ್ಲಿ ಆಪರೇಷನ್ ಕಮಲ ಮಾಡುವ ಮೂಲಕ ಕಾಂಗ್ರೆಸ್ ಶಾಸಕರನ್ನು ಸೆಳೆಯಲಾಗಿದೆ ಎಂಬ ವಿಚಾರವನ್ನು ಡಿಸಿಎಂ ಅಶ್ವತ್ಥ್ ನಾರಾಯಣ್ ತಳ್ಳಿ ಹಾಕಿದ್ದಾರೆ.
ಮಧ್ಯಪ್ರದೇಶದ ಮೂವರು ಕೈ ಶಾಸಕರು ಚಿಕ್ಕಮಗಳೂರಿನಲ್ಲಿದ್ದಾರೆ ಎನ್ನುವ ಆರೋಪದ ಬಗ್ಗೆ ವಿಧಾನಸೌಧಲ್ಲಿ ಪ್ರತಿಕ್ರಿಯಿಸಿದ ಅವರು, ಇದು ಸತ್ಯ ಅಲ್ಲ, ನಾನು ಬಹಳ ಸ್ಪಷ್ಟವಾಗಿ ಹೇಳುತ್ತೇನೆ. ಯಾವುದೇ ರಾಜ್ಯದ ಶಾಸಕರು ಸಹ ಕರ್ನಾಟಕಕ್ಕೆ ಬಂದಿಲ್ಲ ಎಂದು ಸ್ಪಷ್ಟಪಡಿಸಿದರು.
ನಮಗೆ ಗೊತ್ತಿರುವಂತೆ ಯಾವ ಶಾಸಕರೂ ಚಿಕ್ಕಮಗಳೂರಿನಲ್ಲಿ ಇಲ್ಲ, ಯಾವ ರಾಜ್ಯದ ಶಾಸಕರೂ ಕರ್ನಾಟಕದಲ್ಲಿ ಉಳಿದುಕೊಂಡಿಲ್ಲ ಎಂದರು.