ಬೆಂಗಳೂರು : ಜನಸಾಮಾನ್ಯರು 3ನೇ ಅಲೆಯ ಕುರಿತು ಎಚ್ಚರಿಕೆಯಿಂದಿರಬೇಕು. ಮಾಸ್ಕ್ ಧರಿಸುವುದು, ಅಂತರ ಕಾಪಾಡಿಕೊಳ್ಳುವುದರ ಜೊತೆಗೆ ಬಹುಮುಖ್ಯವಾಗಿ ಲಸಿಕೆ ಪಡೆಯಬೇಕು ಎಂದು ಡಿಸಿಎಂ ಅಶ್ವತ್ಥ್ ನಾರಾಯಣ್ ಮನವಿ ಮಾಡಿದ್ದಾರೆ.
ವೈದ್ಯಕೀಯ ಕ್ಷೇತ್ರಕ್ಕೆ ಬೇಕಿರುವ ಮೂಲಸೌಕರ್ಯ, ವೈದ್ಯ-ವೈದ್ಯಕೀಯೇತ್ತರ, ಆಕ್ಸಿಜನ್ ಸ್ಟೋರೇಜ್, ಜನರೇಷನ್ ಹೀಗೆ ಎಲ್ಲವನ್ನೂ ನಾವು ವ್ಯವಸ್ಥೆ ಮಾಡುತ್ತಿದ್ದೇವೆ. ಈ ನಿಟ್ಟಿನಲ್ಲಿ ಸರ್ಕಾರವು 3ನೇ ಅಲೆಯನ್ನು ತಡೆಯಲು ಸರ್ವ ಪ್ರಯತ್ನ ಮಾಡುತ್ತಿದೆ ಎಂದಿದ್ದಾರೆ.
ರಾಜ್ಯದಲ್ಲಿ ಎದುರಾಗಿರುವ ಲಸಿಕೆ ಕೊರತೆ ಕುರಿತು ಪ್ರತಿಕ್ರಿಯಿಸಿ, ದೇಶದಲ್ಲಿ ತಯಾರಾಗುವ ಲಸಿಕೆಯನ್ನು ಸುಮಾರು 32 ಕೋಟಿಗೂ ಹೆಚ್ಚು ಜನರಿಗೆ ನೀಡಲಾಗಿದೆ. ಆಗಸ್ಟ್ ತಿಂಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಒದಗಿಸುವ ಕೆಲಸ ಆಗ್ತಿದೆ.
ಮುಂದಿನ ತಿಂಗಳು ಸುಮಾರು 120 ಕೋಟಿಯಷ್ಟು ವ್ಯಾಕ್ಸಿನ್ ಡೋಸೇಜ್ ಲಭ್ಯವಾಗಲಿದೆ. ಹೀಗಾಗಿ, ಇರುವ ಇತಿಮಿತಿ ಮೀರಿ ಲಸಿಕಾ ಕಾರ್ಯಕ್ರಮ ಪೂರ್ಣಗೊಳಿಸುವ ಕೆಲಸ ಮಾಡಲಾಗುತ್ತಿದೆ ಎಂದರು.