ETV Bharat / state

ಆಧುನಿಕ ಅವಳಿ ನಗರಗಳಾಗಿ ರಾಮನಗರ - ಚನ್ನಪಟ್ಟಣ ಅಭಿವೃದ್ಧಿ : ಡಾ.ಸಿ.ಎನ್.ಅಶ್ವತ್ಥನಾರಾಯಣ

author img

By

Published : Apr 6, 2021, 7:46 PM IST

"ಈಗಾಗಲೇ ಸಮಗ್ರ ಅಭಿವೃದ್ಧಿ ಯೋಜನಾ ವರದಿ ಸಿದ್ಧಪಡಿಸಲು 37 ಲಕ್ಷ ರೂ. ಕೊಡಲಾಗಿದೆ. ಆರೇಳು ತಿಂಗಳಲ್ಲಿ ಈ ಕೆಲಸ ಆಗಲಿದೆ. ಈ ಮೂಲಕ ಸುಸಜ್ಜಿತ ನಗರಗಳ ನಿರ್ಮಾಣಕ್ಕೆ ನಾಂದಿ ಹಾಡಲಿದ್ದೇವೆ" ಎಂದು DCM ಅಶ್ವತ್ಥನಾರಾಯಣ ಹೇಳಿದ್ದಾರೆ.

DCM MEETING WITH OFFICERS
DCM MEETING WITH OFFICERS

ಬೆಂಗಳೂರು: ರಾಜಧಾನಿ ಬೆಂಗಳೂರು ಹಾಗೂ ಅರಮನೆ ನಗರಿ ಮೈಸೂರು ಮಾರ್ಗದ ಆಯಕಟ್ಟಿನ ಜಾಗದಲ್ಲಿರುವ ರಾಮನಗರ ಮತ್ತು ಚನ್ನಪಟ್ಟಣಗಳನ್ನು ಅತ್ಯಾಧುನಿಕ ಸೌಲಭ್ಯಗಳುಳ್ಳ ಆಧುನಿಕ ಅವಳಿ ನಗರಗಳನ್ನಾಗಿ ಅಭಿವೃದ್ಧಿಪಡಿಸಲು ಸರ್ಕಾರ ಮುಂದಾಗಿದೆ.

ರಾಮನಗರ ಜಿಲ್ಲೆಯ ಉಸ್ತುವಾರಿ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು, ವಿಕಾಸಸೌಧದಲ್ಲಿ ಇಂದು ಸಂಜೆ ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ಜತೆ ಮಾತುಕತೆ ನಡೆಸಿದರು.

ಬೆಂಗಳೂರು ಅಭಿವೃದ್ಧಿಯ ಮಾದರಿ ಇಟ್ಟುಕೊಂಡು ಇವೆರಡೂ ಪಟ್ಟಣಗಳನ್ನು ಅಭಿವೃದ್ಧಿಪಡಿಸುವುದು ಸರಕಾರದ ಉದ್ದೇಶವಾಗಿದೆ. ಅತ್ಯುತ್ತಮ ಮೂಲಸೌಕರ್ಯ, ಒಳಚರಂಡಿ ಹಾಗೂ ಕುಡಿವ ನೀರು ಸರಬರಾಜು ವ್ಯವಸ್ಥೆ, ಆಕರ್ಷಕ ವಿಶಾಲ ಉದ್ಯಾನಗಳ ನಿರ್ಮಾಣ, ಎಲ್ಲ ರಸ್ತೆಗಳು ಇತಿಹಾಸ ದಾಖಲಿಸಿವುದು, ಕ್ರೀಡಾಂಗಣಗಳ ನಿರ್ಮಾಣ ಸೇರಿದಂತೆ ಅಗತ್ಯವಾದ ಎಲ್ಲ ಕೆಲಸಗಳನ್ನು ಕಾಲಮಿತಿಯೊಳಗೆ ಕೈಗೊಂಡು ಮುಗಿಸುವ ಬಗ್ಗೆ ಡಿಸಿಎಂ ಅಧಿಕಾರಿಗಳ ಜತೆ ಚರ್ಚೆ ನಡೆಸಿದರು.

ಸಭೆಯ ನಂತರ ಈ ಬಗ್ಗೆ ಮಾಹಿತಿ ನೀಡಿದ ಡಿಸಿಎಂ, "ಈಗಾಗಲೇ ಸಮಗ್ರ ಅಭಿವೃದ್ಧಿ ಯೋಜನಾ ವರದಿ ಸಿದ್ಧಪಡಿಸಲು 37 ಲಕ್ಷ ರೂ. ಕೊಡಲಾಗಿದೆ. ಆರೇಳು ತಿಂಗಳಲ್ಲಿ ಈ ಕೆಲಸ ಆಗಲಿದೆ. ಈ ಮೂಲಕ ಸುಸಜ್ಜಿತ ನಗರಗಳ ನಿರ್ಮಾಣಕ್ಕೆ ನಾಂದಿ ಹಾಡಲಿದ್ದೇವೆ" ಎಂದರು.

ಪ್ರಾಧಿಕಾರಗಳಿಗೆ ಇನ್ನಷ್ಟು ಶಕ್ತಿ:

ರಾಮನಗರ ಮತ್ತು ಚನ್ನಪಟ್ಟಣ ಅಭಿವೃದ್ಧಿ ಪ್ರಾಧಿಕಾರಗಳಿಗೆ ಇನ್ನಷ್ಟು ಶಕ್ತಿ ತುಂಬಲಾಗುವುದು. ಎರಡೂ ಪಟ್ಟಣಗಳ ಆಮೂಲಾಗ್ರ ಅಭಿವೃದ್ಧಿಗೆ ಏನೆಲ್ಲ ಅಗತ್ಯವೋ ಎಲ್ಲವನ್ನೂ ಸರಕಾರ ಒದಗಿಸುತ್ತಿದೆ ಎಂದ ಅವರು, ಚನ್ನಪಟ್ಟಣದಲ್ಲಿ ಇನ್ನೊಂದು ಬಸ್‌ ನಿಲ್ದಾಣದ ಅಗತ್ಯವಿದೆ ಎಂಬ ಬೇಡಿಕೆ ಬಂದಿದೆ. ಅದನ್ನೂ ತ್ವರಿತವಾಗಿ ಕಾರ್ಯಗತ ಮಾಡಲಾಗುವುದು ಎಂದರು.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಸ್ವಚ್ಛ ಭಾರತ ಪರಿಕಲ್ಪನೆಯಂತೆ ಅವಳಿ ನಗರಗಳ ಸ್ವಚ್ಛತೆಯ ಬಗ್ಗೆ ಆದ್ಯತೆ ನೀಡಲಾಗುವುದು. ಕಸ ವಿಂಗಡಣೆ ಮತ್ತು ವಿಲೇವಾರಿಗೆ ಒತ್ತು ನೀಡುವುದರ ಜತೆಗೆ, ನಗರಗಳ ಸೌಂದರ್ಯ ಸಂರಕ್ಷಣೆಗೆ ಅಗತ್ಯವಾದ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗುವುದು. ವಿಶಾಲವಾದ ಉದ್ಯಾನಗಳನ್ನು ನಿರ್ಮಾಣ ಮಾಡುವುದರ ಜತೆಗೆ, ಅವುಗಳ ನಿರ್ವಹಣೆಗೂ ಪ್ರತ್ಯೇಕ ವ್ಯವಸ್ಥೆ ಮಾಡಲಾಗುವುದು ಎಂದು ಡಿಸಿಎಂ ತಿಳಿಸಿದರು.

ಮುಖ್ಯವಾಗಿ, ಎರಡೂ ಕಡೆ ಒಳಚರಂಡಿ ವ್ಯವಸ್ಥೆಯನ್ನು ಸಂಪೂರ್ಣವಾಗಿ ಜಾರಿ ಮಾಡಲಾಗುವುದು. ಬೆಂಗಳೂರು ಮಾದರಿಯಲ್ಲಿ ಒಳಚರಂಡಿ ವ್ಯವಸ್ಥೆ ಮಾಡಲಾಗುವುದು. ಇನ್ನು, ನದಿ ಮೂಲಗಳಿಂದ ರಾಮನಗರ - ಚನ್ನಪಟ್ಟಣ ಮಾತ್ರವಲ್ಲದೇ ಜಿಲ್ಲೆಯ ಎಲ್ಲ ಗ್ರಾಮಗಳ ಎಲ್ಲ ಮನೆಗಳಿಗೂ ಪೈಪ್​​ಗಳ ಮೂಲಕ ಕುಡಿಯುವ ನೀರು ಸರಬರಾಜು ಮಾಡುವ ಯೋಜನೆ ಪ್ರಗತಿಯಲ್ಲಿದೆ ಎಂದು ಹೇಳಿದರು.

ಉಪ ಮುಖ್ಯಮಂತ್ರಿಗಳ ಕಾರ್ಯದರ್ಶಿಯೂ ಆಗಿರುವ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಆಯುಕ್ತ ಪಿ.ಪ್ರದೀಪ, ನಗರ ನೀರು ಸರಬರಾಜು ಒಳಚರಂಡಿ ಮಂಡಳಿ ಮುಖ್ಯ ಇಂಜಿನಿಯರ್‌ ಎಸ್.ಎನ್. ದಿನೇಶ್‌ ಇದ್ದರು. ಸಭೆಯಲ್ಲಿ ಚನ್ನಪಟ್ಟಣ-ರಾಮನಗರ ನಗರ ಸಭೆಗಳ ಆಯುಕ್ತರು, ನಗರಾಭಿವೃದ್ಧಿ ಪ್ರಾಧಿಕಾರಗಳ ಆಯುಕ್ತರು, ತಾಂತ್ರಿಕ ಅಧಿಕಾರಿಗಳು ಹಾಗೂ ನಗರಸಭೆಗಳ ಅಧಿಕಾರಿಗಳೂ ಹಾಜರಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.