ETV Bharat / state

ಅದ್ಧೂರಿ ಮಹಾಗಣಪತಿ ಶೋಭಾಯಾತ್ರೆಗೆ ದಾವಣಗೆರೆ ಸಜ್ಜು: ಕೇಸರಿಮಯವಾದ ಬೆಣ್ಣೆ ನಗರಿ

ಗಣಪತಿ ಶೋಭಾಯಾತ್ರೆಯಲ್ಲಿ ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ದಾವಣಗೆರೆ ಜಿಲ್ಲಾ ಪೊಲೀಸ್‌ ಇಲಾಖೆ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಂಡಿದೆ.

Davanagere preparation for Mahaganapati discharge
ಆರನೇ ವರ್ಷದ ಹಿಂದೂ ಮಹಾಗಣಪತಿ ನಿಮಜ್ಜನಕ್ಕೆ ದಾವಣಗೆರೆ ಕೇಸರಿಮಯವಾಗಿರುವುದು.
author img

By ETV Bharat Karnataka Team

Published : Oct 13, 2023, 9:58 PM IST

ದಾವಣಗೆರೆ: ಆರನೇ ವರ್ಷದ ಹಿಂದೂ ಮಹಾಗಣಪತಿ ನಿಮಜ್ಜನಕ್ಕೆ ದಾವಣಗೆರೆ ಸಜ್ಜಾಗಿದೆ. ಶನಿವಾರ ನಡೆಯುವ ಅದ್ಧೂರಿ ನಿಮಜ್ಜನ ಕಾರ್ಯಕ್ರಮಕ್ಕೆ ಜನಸಾಗರವೇ ಹರಿದುಬರಲಿದೆ. ಇಡೀ ದಾವಣಗೆರೆ ಕೇಸರಿ ಬಾವುಟಗಳಿಂದ ಕಂಗೊಳಿಸುತ್ತಿದೆ.

ನಗರದ ಪಿ.ಬಿ.ರಸ್ತೆಯಲ್ಲಿ ನಿಲ್ಲಿಸಿದ ಕೇಸರಿ ಧ್ವಜ, ಫ್ಲೆಕ್ಸ್‌ಗಳು ಶೋಭಯಾತ್ರೆಗೆ ಆಗಮಿಸುವವರನ್ನು ಸ್ವಾಗತಿಸುತ್ತಿವೆ. ಇದಲ್ಲದೆ ನಗರದ ಪ್ರಮುಖ ರಸ್ತೆಗಳ ಆರಂಭದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಹಾಗೂ ವೀರ ಮದಕರಿ ನಾಯಕರ ಫ್ಲೆಕ್ಸ್‌ಗಳಿಂದ ಸ್ವಾಗತ ಕಮಾನುಗಳನ್ನು ನಿರ್ಮಿಸಲಾಗಿದೆ. ಪಿ.ಬಿ.ರಸ್ತೆಯ ಬೀದಿದೀಪಗಳಿಗೆ ಬೃಹತ್ ಗಾತ್ರದ ಕೇಸರಿ ಬಟ್ಟೆಗಳನ್ನು ಕಟ್ಟಲಾಗಿದೆ.

ಶೋಭಾಯಾತ್ರೆಗೆ ದಾವಣಗೆರೆಗೆ ಆಗಮಿಸುವ ಭಕ್ತರಿಗೆ ನೀರು, ಉಪಹಾರದ ವ್ಯವಸ್ಥೆ ಮಾಡಲಾಗಿದೆ. ಕೆಲವು ದಾನಿಗಳು ಮೆರವಣಿಗೆ ಸಾಗುವ ಮಾರ್ಗದಲ್ಲಿ ಕುಡಿಯುವ ನೀರು, ಉಪಹಾರ,ಮಜ್ಜಿಗೆಯ ವ್ಯವಸ್ಥೆ ಮಾಡಿದ್ದಾರೆ. ಬೆಳಗ್ಗೆ 10.30ಕ್ಕೆ ಆರಂಭವಾಗುವ ಶೋಭಾಯಾತ್ರೆ, ಹೈಸ್ಕೂಲ್‌ ಮೈದಾನದಿಂದ ಹೊರಟು, ಎವಿಕೆ ಕಾಲೇಜ್ ರಸ್ತೆ, ಅಂಬೇಡ್ಕರ್‌ ವೃತ್ತ, ಜಯದೇವ ವೃತ್ತ, ಲಾಯರ್‌ ರೋಡ್‌ ಮೂಲಕ ಪಿ.ಬಿ.ರಸ್ತೆಯಲ್ಲಿ ಸೇರಿ ಅಲ್ಲಿಂದ ಗಾಂಧಿ ವೃತ್ತ, ಸಂಗೊಳ್ಳಿ ರಾಯಣ್ಣ ವೃತ್ತ ತಲುಪಿ ಸಮಾಪ್ತಿಗೊಳ್ಳಲಿದೆ.

ಡಿಜೆ ಕಲಾ ತಂಡಗಳ ವ್ಯವಸ್ಥೆ: ಶೋಭಾಯಾತ್ರೆಯಲ್ಲಿ ಪಾಲ್ಗೊಳ್ಳುವರಿಗೆ ಹೆಜ್ಜೆ ಹಾಕಲು ಡಿಜೆ ಹಾಗೂ ಕಲಾತಂಡಗಳ ವ್ಯವಸ್ಥೆಯಾಗಿದೆ. ಹಿಂದೂ ಮಹಾಗಣಪತಿ ಟ್ರಸ್ಟ್‌ (ರಿ) ವತಿಯಿಂದ ಪ್ರತಿಷ್ಠಾಪಿಸಿರುವ ಆರನೇ ವರ್ಷದ ಹಿಂದೂ ಮಹಾಗಣಪತಿಯ ನಿಮಜ್ಜನೆಯ ಶೋಭಾಯಾತ್ರೆ ಮೆರವಣಿಗೆಗೆ ಮಹಿಳೆಯರು ಮತ್ತು ಪುರುಷರಿಗೆ ಪ್ರತ್ಯೇಕವಾಗಿ ಒಟ್ಟು ಐದು ಡಿಜೆ, ನಾನಾ ಕಲಾ ತಂಡಗಳು ಮೆರುಗು ನೀಡಲಿವೆ. ಶೋಭಾಯಾತ್ರೆಯಲ್ಲಿ ಕಾಂಗ್ರೆಸ್ ಹಿರಿಯ ಶಾಸಕ ಡಾ. ಶಾಮನೂರು ಶಿವಶಂಕರಪ್ಪ, ಗಣಿ ಮತ್ತು ಭೂವಿಜ್ಞಾನ ಸಚಿವ ಸಚಿವ ಎಸ್‌.ಎಸ್‌.ಮಲ್ಲಿಕಾರ್ಜುನ್‌, ಕಣ್ವಕುಪ್ಪೆ ಗವಿಮಠದ ಶ್ರೀಗಳು, ದಾವಣಗೆರೆ ಸಂಸದ ಜಿ.ಎಂ.ಸಿದ್ದೇಶ್ವರ, ಮಾಜಿ ಸಚಿವ ಎಸ್‌.ಎ.ರವೀದ್ರನಾಥ್‌ ಮತ್ತಿತರರು ಭಾಗವಹಿಸಲಿದ್ದಾರೆ.

ಬಿಗಿ ಪೊಲೀಸ್ ಬಂದೋಬಸ್ತ್: ಶೋಭಾಯಾತ್ರೆಯಲ್ಲಿ ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ದಾವಣಗೆರೆ ಜಿಲ್ಲಾ ಪೊಲೀಸ್‌ ಇಲಾಖೆ ಮುಂಜಾಗ್ರತಾ ಕ್ರಮ ಕೈಗೊಂಡಿದೆ. ನಗರದ ಸೂಕ್ಷ್ಮ ಹಾಗೂ ಅತಿ ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗುತ್ತಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಎಡಿಜಿಪಿ ಅಲೋಕ್‌ ಕುಮಾರ್‌, ಎಸ್ಪಿ ಉಮಾ ಪ್ರಶಾಂತ್ ಜಿಲ್ಲಾ ಪೊಲೀಸ್‌ ಕಚೇರಿಯಲ್ಲಿ ಸಾರ್ವಜನಿಕರ ಸಭೆ ನಡೆಸಿದ್ದಾರೆ. ಪೊಲೀಸ್ ಸಿಬ್ಬಂದಿಯೊಂದಿಗೆ ಇಂದು ರೂಟ್ ಮಾರ್ಚ್ ಮಾಡಿ ಪೊಲೀಸರು ಶಕ್ತಿ ಪ್ರದರ್ಶಿಸಿದರು.

ಇದನ್ನೂಓದಿ: ವರ್ಷದ ಕೊನೆಯ ಸೂರ್ಯಗ್ರಹಣ: ಜಗತ್ತಿನ ಎಲ್ಲೆಲ್ಲಿ ಗೋಚರ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.