ಬೆಂಗಳೂರು: ದಸರಾ ಮೆರವಣಿಗೆಯಲ್ಲಿ ಪಾಲ್ಗೊಳ್ಳುತ್ತಿದ್ದ ದ್ರೋಣ ಆನೆ ಸಾವು ಪ್ರಕರಣಕ್ಕೆ ಸಂಬಂಧಿಸದಂತೆ ಹೈಕೋರ್ಟ್ ಸರ್ಕಾರ ಹಾಗೂ ಅರಣ್ಯ ಇಲಾಖೆಗೆ ನೋಟಿಸ್ ನೀಡಿದೆ.
ಪ್ರಕರಣ ಸಂಬಂಧ ಹೈಕೊರ್ಟ್ಗೆ ರಿಟ್ ಅರ್ಜಿ ಸಲ್ಲಿಸಲಾಗಿತ್ತು. ಅರ್ಜಿಯನ್ನು ಹೈಕೋರ್ಟ್ ರಜೆದಿನ ದ್ವೀಸದಸ್ಯ ಪೀಠದ ನ್ಯಾ. ಮೈಕಲ್ ಕುನ್ನಾ ಹಾಗೂ ಹೆಚ್.ಟಿ.ನರೇಂದ್ರ ಪ್ರಸಾದ್ ವಿಚಾರಣೆ ನಡೆಸಿದರು. ವಿಚಾರಣೆ ನಂತರ ಹೈಕೋರ್ಟ್ ಸರ್ಕಾರ ಹಾಗೂ ಅರಣ್ಯ ಇಲಾಖೆಗೆ ನೋಟಿಸ್ ನೀಡಿ ಪ್ರಕರಣ ಸಂಬಂಧಿಸಿದ ಪ್ರಮಾಣಪತ್ರ ಸಲ್ಲಿಸಲು ಸೂಚನೆ ನೀಡಿದೆ.
ಪ್ರಕರಣದ ಹಿನ್ನಲೆ:
ಏಪ್ರಿಲ್ 26 ರಂದು 37 ವರ್ಷದ ದ್ರೋಣ ಕಾಯಿಲೆಗೆ ತುತ್ತಾಗಿ ನಾಗರಹೊಳೆಯ ಅಭಯಾರಣ್ಯದ ಮತ್ತಿಗೊಡು ಶಿಬಿರದಲ್ಲಿ ಸಾವನ್ನಪ್ಪಿದ್ದ. ಈ ಆನೆ ನಾಡಿಗೆ ನುಗ್ಗುತ್ತಿದ್ದ ಕಾಡಾನೆಗಳನ್ನು ಹಿಡಿಯುವಲ್ಲಿ ನಿಸ್ಸೀಮನಾಗಿದ್ದು, ಇಂತಹ ಆನೆ ಹೃದಯಾಘಾತದಿಂದ ಸಾವನ್ನಪ್ಪಿದ್ದ ಬಗ್ಗೆ ವೈದ್ಯರು ಶಂಕೆ ವ್ಯಕ್ತಪಡಿಸಿದ್ದರು.
ಹೀಗಾಗಿ ಈ ಬಗ್ಗೆ ಹಿರಿಯ ವಕೀಲ ಅಮೃತೇಶ್ ಕೋರ್ಟ್ಗೆ ರಿಟ್ ಅರ್ಜಿ ಸಲ್ಲಿಸಿದ್ದರು. ಅರ್ಜಿಯಲ್ಲಿ ಮತ್ತಿಗೋಡು ಶಿಬಿರದಲ್ಲಿ ಆನೆಗಳಿಗೆ ಸೂಕ್ತವಾದ ವ್ಯವಸ್ತೆಗಳಿಲ್ಲ. ಅಲ್ಲಿಗೆ ಸೂಕ್ತ ವ್ಯದ್ಯರ ನೇಮಕ ಮಾಡಬೇಕು. ಆನೆಗಳಿಗೆ ಬೇಕಾದ ಸೂಕ್ತ ಪೌಷ್ಠಿಕ ಆಹಾರ ಓದಗಿಸಬೇಕು ಎಂದು ತಿಳಿಸಿದ್ದರು.