ETV Bharat / state

ಬಿಬಿಎಂಪಿ ಆಯವ್ಯಯದಲ್ಲಿ ನಮಗೆ ಅನ್ಯಾಯವಾಗಿದೆ ಎಂದು ದಲಿತ ಸಂಘಟನೆಗಳ ಪ್ರತಿಭಟನೆ

2020-21 ನೇ ಸಾಲಿನ ಬಿಬಿಎಂಪಿ ಆಯವ್ಯಯದಲ್ಲಿ ದಲಿತರಿಗೆ 800 ಕೋಟಿಗಳಿಗೂ ಅಧಿಕ ಹಣವನ್ನು ಮೀಸಲಿಡಬೇಕಾಗಿತ್ತು. ಆದ್ರೆ ಕೇವಲ 400 ಕೋಟಿಯನ್ನು ಮೀಸಲಿಟ್ಟು ಬಿಬಿಎಂಪಿ ದಲಿತರಿಗೆ ಅನ್ಯಾಯ ಮಾಡಿದೆ ಎಂದು ಹಿಂದುಳಿದ ಸಂಘಟನೆಗಳು ಪ್ರತಿಭಟನೆ ಮಾಡಿವೆ.

Dalit organizations protest that BBMP
ದಲಿತ ಸಂಘಟನೆಗಳ ಪ್ರತಿಭಟನೆ
author img

By

Published : May 29, 2020, 10:19 PM IST

ಬೆಂಗಳೂರು : ದಲಿತರು ಹಾಗೂ ಹಿಂದುಳಿದ ವರ್ಗಗಳ ಅಭ್ಯುದಯಕ್ಕೆ ಹಾಗೂ ಪ್ರತಿ ಆಯವ್ಯಯದಲ್ಲೂ ಶೇ. 24.10 ರಷ್ಟು ಹಣವನ್ನು ಮೀಸಲಿಡಬೇಕು ಎನ್ನುವ ಕಾನೂನನ್ನು 2020-21 ನೇ ಸಾಲಿನ ಬಿಬಿಎಂಪಿ ಆಯವ್ಯಯದಲ್ಲಿ ಪಾಲಿಸಲಾಗಿಲ್ಲ. 800 ಕೋಟಿಗಳಿಗೂ ಅಧಿಕ ಹಣವನ್ನು ಮೀಸಲಿಡಬೇಕಾಗಿದ್ದ ಆಯವ್ಯಯದಲ್ಲಿ ಕೇವಲ 400 ಕೋಟಿ ರೂ.ಗಳನ್ನು ದಲಿತರ ಅಭಿವೃದ್ದಿ ಅನುದಾನವನ್ನು ಮೀಸಲಿಟ್ಟಿದ್ದು, ಕಾನೂನು ಪಾಲಿಸದೇ ಇರುವ ಬಿಬಿಎಂಪಿ ಬಜೆಟ್​ಅನ್ನು ಅನುಷ್ಠಾನಗೊಳಿಸಲು ಅವಕಾಶ ನೀಡಬಾರದು ಎಂದು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ದೌರ್ಜನ್ಯ ನಿಯಂತ್ರಣ ಸಮಿತಿ ಹಾಗೂ ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯಾಧ್ಯಕ್ಷ ಡಾ. ಸಿ ಎಸ್‌ ರಘು ಆಗ್ರಹಿಸಿದ್ದಾರೆ.

ಈ ಬಗ್ಗೆ ಸ್ಪಷ್ಟಿಕರಣ ನೀಡುವಂತೆ ಆಗ್ರಹಿಸಿ ಬಿಬಿಎಂಪಿ ಆಯುಕ್ತರಾದ ಅನಿಲ್‌ ಕುಮಾರ್​​ಗೆ ಪತ್ರ ಬರೆದಿದ್ದು, ಇದಕ್ಕೆ ಆಯುಕ್ತರು ಸ್ಪಷ್ಟ ಉತ್ತರ ನೀಡದೇ ಜಾರಿಕೊಳ್ಳುವ ಪ್ರಯತ್ನ ಮಾಡಿದ್ದಾರೆ. ಅಲ್ಲದೆ, ಆಯವ್ಯಯವನ್ನು ಪರಿಷ್ಕರಣೆ ಮಾಡದೇ ಅನುಷ್ಠಾನಗೊಳಿಸಲು ಮುಂದಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಸಕ್ತ ಸಾಲಿನ ಆಯವ್ಯಯವನ್ನು ಅನುಷ್ಠಾನಗೊಳಿಸಲು ಅವಕಾಶ ನೀಡದಂತೆ ಆಗ್ರಹಿಸಿ ಇಂದು ಡಾ ಸಿ ರಘು ನೇತೃತ್ವದ ತಂಡ, ನ್ಯಾಯಮೂರ್ತಿ ನಾಗಮೋಹನದಾಸ್‌ ಆಯೋಗ, ಪರಿಶಿಷ್ಟ ಜಾತಿ ಹಾಗೂ ಪಂಡಗಳ ಆಯೋಗ ಮುಖ್ಯ ಕಾರ್ಯದರ್ಶಿಗಳಿಗೆ ದೂರು ನೀಡಿತು.

ನಂತರ ಮಾತನಾಡಿದ ಡಾ ಸಿ ಎಸ್‌ ರಘು, ದೇಶದ ಸಂವಿಧಾನದಲ್ಲೇ ದಲಿತರ ಶೈಕ್ಷಣಿಕ, ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ದಿಗಾಗಿ ಆಯವ್ಯಯದಲ್ಲಿ ಶೇ. 24.10 ರಷ್ಟು ಮೀಸಲಿಡುವುದನ್ನು ಕಡ್ಡಾಯಗೊಳಿಸಲಾಗಿದೆ. ಆದರೆ, ಇದರ ಬಗ್ಗೆ ಜಾಣ ಮರೆವು ತೋರಿಸುತ್ತಿರುವ ಬಿಬಿಎಂಪಿ 800 ಕೋಟಿ ರೂಪಾಯಿಗಳಿಗೂ ಹೆಚ್ಚು ಹಣವನ್ನು ಮೀಸಲಿಡುವ ಜಾಗದಲ್ಲಿ ಕೇವಲ 400 ಕೋಟಿ ರೂಪಾಯಿಗಳನ್ನು ಮೀಸಲಿಟ್ಟಿದೆ. ಇದು ದೇಶದ ಸಂವಿಧಾನ ಹಾಗೂ ಕಾನೂನಿನ ವಿರುದ್ದವಾಗಿದೆ. ಮೂಲಭೂತ ಅಂಶಗಳನ್ನೇ ಪಾಲಿಸದೇ ಇರುವ ಆಯವ್ಯಯವನ್ನು ಅನುಷ್ಠಾನಕ್ಕೆ ಅವಕಾಶ ಮಾಡಿಕೊಡಬಾರದು.

Dalit organizations protest that BBMP
ದಲಿತ ಸಂಘಟನೆಗಳ ಪ್ರತಿಭಟನೆ

ಈ ಬಗ್ಗೆ ಆಯುಕ್ತರಾದ ಅನಿಲ್‌ ಕುಮಾರ್‌ ಅವರಿಗೆ ಸ್ಪಷ್ಟಣೆ ಕೋರಿ ಬರೆದಿರುವ ಪತ್ರಕ್ಕೆ ಉತ್ತರವಾಗಿ ಎಸ್‌.ಟಿ, ಎಸ್‌.ಸಿ ವರ್ಗದ ಕಲ್ಯಾಣ ಕಾರ್ಯಕ್ರಮಗಳಿಗೆ ಮೀಸಲಿಡಬೇಕಾದ ಅನುದಾದಲ್ಲಿ ವ್ಯತ್ಯಾಸವುಂಟಾದಲ್ಲಿ ಸದರಿ ವ್ಯತ್ಯಾಸವನ್ನು ಪಾಲಿಕೆಯ ಪರಿಷ್ಕೃತ ಆಯವ್ಯಯದಲ್ಲಿ ಅಳವಡಿಕೊಳ್ಳವುದಾಗಿ ಉಡಾಫೆಯ ಉತ್ತರವನ್ನು ನೀಡಿದ್ದಾರೆ. ಸಂವಿಧಾನದ ಮೂಲ ಅಂಶಗಳನ್ನೇ ಗಾಳಿಗೆ ತೂರುವಂತಹ ಕ್ರಮಕ್ಕೆ ಮುಂದಾಗಿರುವುದರ ವಿರುದ್ದ ಇಂದು ನ್ಯಾಯಮೂರ್ತಿ ನಾಗಮೋಹನ ದಾಸ್‌ ಆಯೋಗ, ಪರಿಶಿಷ್ಟ ಜಾತಿ ಹಾಗೂ ಪಂಡಗಳ ಆಯೋಗ ಮತ್ತು ಮುಖ್ಯ ಕಾರ್ಯದರ್ಶಿಗಳಿಗೆ ದೂರ ನೀಡಿದ್ದೇವೆ ಎಂದರು.

ರಾಜ್ಯ ಸರ್ಕಾರ ಈ ಆಯವ್ಯಯಕ್ಕೆ ಅನುಮೋದನೆ ನೀಡುವ ಮುನ್ನ ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ಕಲ್ಯಾಣ ನಿಧಿಗೆ ಮೀಸಲಿಟ್ಟಿರುವ ನಿಧಿಯ ಬಗ್ಗೆ ಸರಿಯಾದ ತನಿಖೆ ಮಾಡಬೇಕಾಗಿತ್ತು. ಆದರೆ, ಈ ಬಗ್ಗೆ ರಾಜ್ಯ ಸರ್ಕಾರವು ಉದಾಸೀನ ಮನೋಭಾವನೆಯನ್ನು ತೋರಿಸಿದೆ. ತಕ್ಷಣ ಈ ಆಯವ್ಯಯವನ್ನು ಪರಿಷ್ಕರಣೆ ಮಾಡಬೇಕು. ಇಲ್ಲದೆ ಇದ್ದಲ್ಲಿ ಮುಖ್ಯಮಂತ್ರಿಗಳ ಗೃಹ ಕಚೇರಿ ಹಾಗೂ ಬಿಬಿಎಂಪಿ ಕಚೇರಿಯ ಎದುರು ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗುವುದು. ಹಾಗೆಯೇ, ರಾಜ್ಯಾದ್ಯಂತ ದಲಿತ ವಿರೋಧಿ ಸರ್ಕಾರದ ಬಗ್ಗೆ ಜನಜಾಗೃತಿಯನ್ನು ಮೂಡಿಸಲಾಗುವುದು ಎಂದು ಡಾ ಸಿ ಎಸ್‌ ರಘು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.