ETV Bharat / state

ಸರ್ಕಾರದ ವಿವಿಧ ತಿದ್ದುಪಡಿ ಕಾಯ್ದೆಗಳ ಜಾರಿ ಖಂಡಿಸಿ ಪ್ರತಿಭಟನೆ - ಸರ್ಕಾರದ ವಿವಿಧ ತಿದ್ದುಪಡಿ ಕಾಯ್ದೆ ಜಾರಿ

ಭೂ ಸುಧಾರಣೆ, ಎಪಿಎಂಸಿ ತಿದ್ದುಪಡಿ ಕಾಯ್ದೆ ಸೇರಿದಂತೆ ಇತ್ತೀಚೆಗೆ ಸುಗ್ರೀವಾಜ್ಞೆ ಮೂಲಕ ರಾಜ್ಯ ಸರ್ಕಾರ ಕೆಲ ಕಾಯ್ದೆಗಳಿಗೆ ತಿದ್ದುಪಡಿ ತಂದಿದೆ. ಇದರಿಂದ ರೈತಾಪಿ ವರ್ಗಕ್ಕೆ ದೊಡ್ಡಮಟ್ಟದ ಹಾನಿ ಉಂಟಾಗಲಿದೆ. ಸರ್ಕಾರ ಇಂತಹ ಕಾಯ್ದೆಗಳನ್ನು ಕೂಡಲೇ ಹಿಂಪಡೆಯಬೇಕು ಎಂದು ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಸದಸ್ಯರು ಬೆಂಗಳೂರಿನ ಮೌರ್ಯ ವೃತ್ತದ ಗಾಂಧಿ ಪ್ರತಿಮೆ ಮುಂಭಾಗ ಪ್ರತಿಭಟನೆ ನಡೆಸಿದರು.

dalit leaders protest
ಸರ್ಕಾರದ ವಿವಿಧ ತಿದ್ದುಪಡಿ ಕಾಯ್ದೆ ಜಾರಿ ಖಂಡಿಸಿ ದಲಿತ ನಾಯಕರ ಪ್ರತಿಭಟನೆ
author img

By

Published : Aug 18, 2020, 4:34 PM IST

ಬೆಂಗಳೂರು: ರಾಜ್ಯ ಸರ್ಕಾರ ಇತ್ತೀಚಿನ ದಿನಗಳಲ್ಲಿ ತಿದ್ದುಪಡಿ ಮಾಡಿರುವ ವಿವಿಧ ಕಾಯ್ದೆಗಳ ಜಾರಿ ಖಂಡಿಸಿ ದಲಿತ ನಾಯಕರು ನಗರದಲ್ಲಿ ಪ್ರತಿಭಟನೆ ನಡೆಸಿದ್ದಾರೆ.

ರಾಜ್ಯದಲ್ಲಿ ಜಾರಿಗೆ ತಂದಿರುವ ಎಪಿಎಂಸಿ ತಿದ್ದುಪಡಿ ಕಾಯ್ದೆ ಹಾಗೂ ಭೂ ಸುಧಾರಣಾ ಕಾಯ್ದೆಯನ್ನು ಖಂಡಿಸುವ ಜತೆಗೆ ರಾಜ್ಯದಲ್ಲಿ ದಲಿತರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳು ಹಾಗೂ ಎಪಿಎಂಸಿ ಖಾಸಗೀಕರಣ ವಿಚಾರವಾಗಿ ಸರ್ಕಾರದ ಕಾರ್ಯವನ್ನು ಅವರು ಖಂಡಿಸಿದರು.

ಸಮಿತಿಯ ಆರ್.ಮೋಹನ್ ರಾಜ್ ಮಾತನಾಡಿ, ವಿವಿಧ ಕಾಯ್ದೆಗಳ ತಿದ್ದುಪಡಿ ಮೂಲಕ ಕಾರ್ಪೊರೇಟ್ ಕಂಪನಿಗಳ ಪ್ರವೇಶಕ್ಕೆ ಸರ್ಕಾರ ಅವಕಾಶ ಮಾಡಿಕೊಡುತ್ತಿದೆ. ಒಂದು ಸಾರಿ ಕಾರ್ಪೊರೇಟ್ ಕಂಪನಿಗಳು ಮಾರುಕಟ್ಟೆ ಪ್ರವೇಶಿಸಿದರೆ ಅಲ್ಲಿ ರೈತರ ಪರಿಸ್ಥಿತಿ ಏನಾಗಲಿದೆ ಎನ್ನುವುದನ್ನು ಸಾಮಾನ್ಯ ನಾಗರಿಕರು ಅರಿಯಬಹುದಾಗಿದೆ. ರಾಜ್ಯ ಸರ್ಕಾರ ಜನವಿರೋಧಿ ಪ್ರೀತಿಯಲ್ಲಿ ಎಪಿಎಂಸಿ ತಿದ್ದುಪಡಿ ಕಾಯ್ದೆ ಹಾಗೂ ಭೂ ಸುಧಾರಣಾ ತಿದ್ದುಪಡಿ ಕಾಯ್ದೆ ಜಾರಿಗೆ ತಂದಿದೆ. ಸರ್ಕಾರಿ ಸ್ವಾಮ್ಯದ ಎಲ್ಲಾ ಸಂಸ್ಥೆಗಳನ್ನು ಖಾಸಗೀಕರಣ ಮಾಡಲಾಗುತ್ತಿದೆ. ಈ ಮೂಲಕ ಮೀಸಲಾತಿಯನ್ನು ನಾಶಪಡಿಸುವ ಕಾರ್ಯ ವ್ಯವಸ್ಥಿತ ರೀತಿಯಲ್ಲಿ ನಡೆಯುತ್ತಿದೆ. ರಾಜ್ಯ ಹಾಗೂ ಕೇಂದ್ರ ಸರ್ಕಾರದ ಈ ನಿಲುವುಗಳನ್ನು ಖಂಡಿಸಿ ನಡೆಯುತ್ತಿರುವ ಹೋರಾಟ ಮುಂದಿನ ದಿನಗಳಲ್ಲಿ ಉಗ್ರ ಸ್ವರೂಪ ಪಡೆಯಲಿದೆ ಎಂದು ಎಚ್ಚರಿಸಿದರು.

ಮಾಜಿ ಸಚಿವ ಎಂ.ಪಿ. ನಾಡಗೌಡ ಮಾತನಾಡಿ, ದೇಶದಲ್ಲಿ ಏನಾಗುತ್ತಿದೆ ಎನ್ನುವುದು ಅರ್ಥವಾಗುತ್ತಿಲ್ಲ. ಕಾಯ್ದೆಯ ತಿದ್ದುಪಡಿಯನ್ನು ಸುಗ್ರೀವಾಜ್ಞೆ ಮೂಲಕವೇ ಮಾಡಲಾಗುತ್ತಿದೆ. ಅಧಿವೇಶನಗಳಲ್ಲಿ ಈ ವಿಚಾರಗಳು ಚರ್ಚೆಯಾಗುತ್ತಿಲ್ಲ. ಪ್ರತಿಪಕ್ಷಗಳನ್ನು ವಿಶ್ವಾಸಕ್ಕೆ ಪಡೆಯುವ ಕಾರ್ಯ ಕೂಡ ಆಗುತ್ತಿಲ್ಲ. ಕಾಯಿದೆಗಳಿಗೆ ತಿದ್ದುಪಡಿ ಹಾಗೂ ಹೊಸ ಕಾಯ್ದೆ ಜಾರಿಯಾಗಬೇಕು. ಅದನ್ನು ನಾನು ವಿರೋಧಿಸುವುದಿಲ್ಲ. ಬದಲಾವಣೆ ಬೇಕು ನಿಜ. ನಾನು ಅದಕ್ಕೆ ವಿರೋಧಿಯೂ ಅಲ್ಲ. ಆದರೆ ಈ ಬದಲಾವಣೆ ಸಾಮಾನ್ಯ ಜನರು ಹಾಗೂ ರೈತರನ್ನು ರಕ್ಷಿಸುವಂತಾಗಬೇಕು. ಈಗ ಬರುತ್ತಿರುವ ಕಾಯ್ದೆಗಳು ಆತಂಕ ಹುಟ್ಟಿಸುತ್ತಿವೆ.

ಭೂ ಸುಧಾರಣಾ ಕಾಯ್ದೆ ದೇವರಾಜ ಅರಸು ಅವಧಿಯಲ್ಲಿ ಬಂದಿತ್ತು. ಉಳುವವನೇ ಭೂಮಿಯ ಒಡೆಯ ಎಂದು ಶ್ರೀಮಂತರು ಜಮೀನಿನ ವ್ಯಾಪ್ತಿಯಲ್ಲಿ ಬರಬಾರದು ಎಂದು ತೀರ್ಮಾನಿಸಲಾಗಿತ್ತು. ಶ್ರೀಮಂತರು ರೈತರ ವ್ಯಾಪ್ತಿಗೆ ಬರಬಾರದು ಎಂಬುದು ಇದರ ಉದ್ದೇಶವಾಗಿತ್ತು. ಆದರೆ ನಂತರದ ದಿನಗಳಲ್ಲಿ ಸಾಕಷ್ಟು ಬದಲಾವಣೆಗಳಾಗುತ್ತಾ ಬಂದವು. ಮಿತಿಗಳನ್ನು ಹೇರಲಾಯಿತು. ಈಗ ಯಾರು ಬೇಕಾದರೂ ಭೂಮಿಯನ್ನು ಕೊಳ್ಳುವಂತಹ ಅವಕಾಶ ಸೃಷ್ಟಿಯಾಗಿದೆ. ಕೃಷಿಯಲ್ಲಿ ಪ್ರಗತಿ ತರುವಂತಹ ಬದಲಾವಣೆ ಆದರೆ ಉತ್ತಮ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.