ETV Bharat / state

ಇಂದು ಡಿಕೆಶಿ ಜಾಮೀನು ಅರ್ಜಿ ವಿಚಾರಣೆ... ಬೇಲ್​​ ಸಿಗುತ್ತಾ? ಇಡಿ ಆಕ್ಷೇಪಣೆಗೆ ಮನ್ನಣೆ ದೊರೆಯುತ್ತಾ?

ಜಾರಿ ನಿರ್ದೇಶನಾಲಯದ ವಶಕ್ಕೆ ನೀಡಿದ ಅವಧಿ ಪೂರ್ಣಗೊಂಡಿದ್ದರಿಂದ ಹಾಗೂ ಅವರು ಸಾಕಷ್ಟು ವಿಚಾರಣೆಯನ್ನೂ ನಡೆಸಿದ್ದರಿಂದ ಜಾಮೀನಿನ ಮೇಲೆ ಬಿಡುಗಡೆ ಮಾಡುವಂತೆ ಮಾಜಿ ಸಚಿವ ಡಿ.ಕೆ ಶಿವಕುಮಾರ್ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಿರುವ ಅರ್ಜಿ ವಿಚಾರಣೆ ಇಂದು ನಡೆಯಲಿದೆ. ಇದಕ್ಕೆ ಪ್ರತಿಯಾಗಿ ಇಡಿ ಸೋಮವಾರ ಕೋರ್ಟ್​ಗೆ ಜಾಮೀನು ಮಂಜೂರು ಮಾಡುವುದಕ್ಕೆ ವಿರೋಧ ವ್ಯಕ್ತಪಡಿಸಿ ಲಿಖಿತ ಆಕ್ಷೇಪಣೆ ಸಲ್ಲಿಸಿದೆ.

ಶಿವಕುಮಾರ್
author img

By

Published : Sep 17, 2019, 6:05 AM IST

ಬೆಂಗಳೂರು: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಮಾಜಿ ಸಚಿವ ಡಿಕೆ ಶಿವಕುಮಾರ್ ಅವರ ಇಡಿ ಕಸ್ಟಡಿ ಅವಧಿ ಇಂದು ಅಂತ್ಯಗೊಳ್ಳಲಿದ್ದು, ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯು ವಿಶೇಷ ನ್ಯಾಯಾಲಯದಲ್ಲಿ ನಡೆಯಲಿದೆ. ಇದಕ್ಕೆ ಪ್ರತಿಯಾಗಿ ಇಡಿ ಸೋಮವಾರ ಕೋರ್ಟ್ ಗೆ ಜಾಮೀನು ಮಂಜೂರು ಮಾಡುವುದಕ್ಕೆ ವಿರೋಧ ವ್ಯಕ್ತಪಡಿಸಿ ಲಿಖಿತವಾಗಿ ತನ್ನ ಆಕ್ಷೇಪಣೆ ಸಲ್ಲಿಸಿದೆ.

ಜಾರಿ ನಿರ್ದೇಶನಾಲಯದ ವಶಕ್ಕೆ ನೀಡಿದ ಅವಧಿ ಪೂರ್ಣಗೊಂಡಿದ್ದರಿಂದ ಹಾಗೂ ಅವರು ಸಾಕಷ್ಟು ವಿಚಾರಣೆಯನ್ನೂ ನಡೆಸಿದ್ದರಿಂದ ಜಾಮೀನಿನ ಮೇಲೆ ಬಿಡುಗಡೆ ಮಾಡುವಂತೆ ಶಿವಕುಮಾರ್ ವಿಶೇಷ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ಇಡಿ ಸೋಮವಾರ ಕೋರ್ಟ್​ಗೆ ಜಾಮೀನು ಮಂಜೂರು ಮಾಡುವುದಕ್ಕೆ ವಿರೋಧ ವ್ಯಕ್ತಪಡಿಸಿ ಲಿಖಿತ ಆಕ್ಷೇಪಣೆ ಸಲ್ಲಿಸಿರುವುದರಿಂದ ಡಿಕೆಶಿಗೆ ಜೈಲಾ? ಬೇಲಾ? ಅಥವಾ ಇಡಿ ಕಸ್ಟಡಿಯಾ?ಎನ್ನುವುದು ಕೋರ್ಟ್​ನಲ್ಲಿ ತೀರ್ಮಾನವಾಗಲಿದೆ.

ಶಿವಕುಮಾರ್ ಅವರು ವಿಚಾರಣೆಗೆ ಸಹಕರಿಸಿಲ್ಲ. ಅನಾರೋಗ್ಯದಿಂದ ಹೆಚ್ಚಿನ ಸಮಯ ಆಸ್ಪತ್ರೆಯಲ್ಲಿಯೇ ಕಳೆದಿದ್ದಾರೆ. ಶನಿವಾರ, ಭಾನುವಾರ, ಸೋಮವಾರ ಸಹ ಹೆಚ್ಚಿನ ವಿಚಾರಣೆ ಸಾದ್ಯವಾಗಲಿಲ್ಲ. ವಿಚಾರಣೆ ಅಪೂರ್ಣವಾಗಿದ್ದರಿಂದ ಆರೋಪಿ ಶಿವಕುಮಾರ್​​ಗೆ ಜಾಮೀನು ನೀಡದೇ ತಮ್ಮ ವಶಕ್ಕೆ ಒಪ್ಪಿಸುವಂತೆ ಕೋರ್ಟ್​​ಗೆ ಮನವಿ ಮಾಡಿದೆ.

ವಿಚಾರಣೆ ಸಂದರ್ಭದಲ್ಲಿ ಸಮರ್ಪಕ ಉತ್ತರ ನೀಡದೇ ಪ್ರಶ್ನೆಗಳಿಂದ ತಪ್ಪಿಸಿಕೊಳ್ಳುತ್ತಿದ್ದಾರೆ. ಅಕ್ರಮ ಹಣ ವರ್ಗಾವಣೆ, ಬೇನಾಮಿ ಆಸ್ತಿ ಸೇರಿದಂತೆ ಪ್ರಕರಣದ ಕುರಿತು ಹಲವಾರು ಮಹತ್ವದ ಸಂಗತಿಗಳ ವಿಷಯವಾಗಿ ವಾಸ್ತವ ತಿಳಿಯಬೇಕಾಗಿದೆ ಎಂದು ಇಡಿ ತನ್ನ ಆಕ್ಷೇಪಣೆ ಅರ್ಜಿಯಲ್ಲಿ ಜಾಮೀನು ಕೊಡುವುದಕ್ಕೆ ವಿರೋಧ ವ್ಯಕ್ತಪಡಿಸಿದೆ.

ಆರೋಪಿಯು ಬಹಳಷ್ಟು ಪ್ರಭಾವಿ ರಾಜಕಾರಣಿಯಾಗಿದ್ದಾರೆ. ಜಾಮೀನಿನ ಮೇಲೆ ಬಿಡುಗಡೆ ಮಾಡಿದರೆ ಸಾಕ್ಷ್ಯಗಳನ್ನು ನಾಶ ಪಡಿಸುವ ಸಂಭವ ಇರುತ್ತದೆ ಎನ್ನುವುದು ಸಹ ಜಾರಿ ನಿರ್ದೇಶನಾಲಯದ ಪ್ರಬಲ ವಾದವಾಗಿದೆ.

ವಿಶೇಷ ನ್ಯಾಯಾಲಯವು ಡಿಕೆಶಿ ಅವರ ಜಾಮೀನು ಅರ್ಜಿ ಪರಿಗಣಿಸಿದರೆ ಬಂಧನದಿಂದ ಬಿಡುಗಡೆಯಾಗಲಿದ್ದಾರೆ. ಇಡಿ ವಶಕ್ಕೆ ನೀಡಿದರೆ ಮತ್ತೆ ವಿಚಾರಣೆಗೆ ಒಳಪಡಬೇಕಾಗುತ್ತದೆ. ಜಾಮೀನು ನೀಡದೆ, ಇಡಿ ವಶಕ್ಕೂ ನೀಡದೆ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದರೆ ತಿಹಾರ್ ಜೈಲು ಸೇರಬೇಕಾಗುತ್ತದೆ.

ಸೆ. 3ರಿಂದ ಇಡಿಯ ಬಂಧನದಲ್ಲಿರುವ ಶಿವಕುಮಾರ್ ಇಂದಿನ ವಿಚಾರಣೆಯಲ್ಲಿ ತಮಗೆ ಜಾಮೀನು ಸಿಗಬಹುದೆನ್ನುವ ನಿರೀಕ್ಷೆಯಲ್ಲಿದ್ದಾರೆ.

Intro:ಡಿಕೆಶಿ ಜಾಮೀನು ಅರ್ಜಿಗೆ ಇಡಿ ಆಕ್ಷೇಪಣೆ
ಮತ್ತೆ ಕಸ್ಟಡಿಗೆ ನೀಡಲು ಇಂದು ವಾದ ಮಂಡನೆ..

ಬೆಂಗಳೂರು :

ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧನದಲ್ಲಿರುವ ಪ್ರಭಾವಿ ರಾಜಕಾರಣಿ , ಮಾಜಿ ಸಚಿವ ಡಿಕೆ ಶಿವಕುಮಾರ್ ಗೆ ಜಾಮೀನು ನೀಡಬಾರದು ಎಂದು ಜಾರಿ ನಿರ್ದೇಶನಾಲಯ ದೆಹಲಿಯ ವಿಶೇಷ ನ್ಯಾಯಾಲಯಕ್ಕೆ ತನ್ನ ಆಕ್ಷೇಪಣೆ ಸಲ್ಲಿಸಿದೆ.

ಡಿಕೆಶಿ ಇಡಿ ಕಸ್ಟಡಿ ಅವಧಿ ಇಂದು ಅಂತ್ಯಗೊಳ್ಳಲಿದ್ದು ಜಾಮೀನು ಕೋರಿ ಶಿವಕುಮಾರ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನ್ಯಾಯಾಲಯದಲ್ಲಿ ನಡೆಯಲಿದೆ. ಡಿಕೆಶಿಗೆ ಜೈಲಾ...? ಬೇಲಾ,.....? ಇಡಿ ಕಸ್ಟಡಿಯಾ ....?ಎನ್ನುವುದು ಕೋರ್ಟ ನಲ್ಲಿ ತೀರ್ಮಾನವಾಗಲಿದೆ

Body: ಜಾರಿ ನಿರ್ದೇಶನಾಲಯ ದ ವಶಕ್ಕೆ ನೀಡಿದ ಅವಧಿ ಪೂರ್ಣಗೊಂಡಿದ್ದರಿಂದ ಹಾಗು ಅವರು ಸಾಕಷ್ಟು ವಿಚಾರಣೆಯನ್ನೂ ನಡೆಸಿದ್ದರಿಂದ ಜಾಮೀನಿನ ಮೇಲೆ ಬಿಡುಗಡೆ ಮಾಡುವಂತೆ ಶಿವಕುಮಾರ್ ವಿಶೇಷ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ಇಡಿ ಸೋಮವಾರ ಕೋರ್ಟ್ ಗೆ ಜಾಮೀನು ಮಂಜೂರು ಮಾಡುವುದಕ್ಕೆ ವಿರೋಧ ವ್ಯಕ್ತಪಡಿಸಿ ಲಿಖಿತವಾಗಿ ತನ್ನ ಆಕ್ಷೇಪಣೆ ಗಳನ್ನು ಸಲ್ಲಿಸಿದೆ.

ಶಿವಕುಮಾರ್ ಅವರು ವಿಚಾರಣೆಗೆ ಸಹಕರಿಸಿಲ್ಲ. ಅನಾರೋಗ್ಯ ದಿಂದ ಹೆಚ್ಚಿನ ಸಮಯ ಆಸ್ಪತ್ರೆಯಲ್ಲಿ ಯೇ ಕಳೆದಿದ್ದಾರೆ.ಶನಿವಾರ, ಭಾನುವಾರ, ಸೋಮವಾರ ಸಹ ಹೆಚ್ಚಿನ ವಿಚಾರಣೆ ಸಾದ್ಯವಾಗಲಿಲ್ಲ. ವಿಚಾರಣೆಅಪೂರ್ಣವಾಗಿದ್ದರಿಂದ ಆರೋಪಿ ಶಿವಕುಮಾರ್ ಗೆ ಜಾಮೀನು ನೀಡದೇ ತಮ್ಮ ವಶಕ್ಕೆ ಒಪ್ಪಿಸುವಂತೆ ಕೋರ್ಟ್ ಗೆ ಮನವಿ ಮಾಡಿದೆ.

ವಿಚಾರಣೆ ಸಂದರ್ಭದಲ್ಲಿ ಸಮರ್ಪಕ ಉತ್ತರ ನೀಡದೇ ಪ್ರಶ್ನೆಗಳಿಂದ ತಪ್ಪಿಸಿಕೊಳ್ಳುತ್ತಿದ್ದಾರೆ. ಅಕ್ರಮ ಹಣ ವರ್ಗಾವಣೆ, ಬೇನಾಮಿ ಆಸ್ತಿ ಸೇರಿದಂತೆ ಪ್ರಕರಣದ ಕುರಿತು ಹಲವಾರು ಮಹತ್ವದ ಸಂಗತಿಗಳ ವಿಷಯವಾಗಿ ವಾಸ್ತವ ತಿಳಿಯಬೇಕಾಗಿದೆ ಎಂದು ಇಡಿ ತನ್ನ ಆಕ್ಷೇಪಣೆ ಅರ್ಜಿಯಲ್ಲಿ ಜಾಮೀನು ಕೊಡುವುದಕ್ಕೆ ವಿರೋಧ ವ್ಯಕ್ತಪಡಿಸಿದೆ.

ಆರೋಪಿಯು ಬಹಳಷ್ಟು ಪ್ರಭಾವಿ ರಾಜಕಾರಣಿಯಾಗಿದ್ದಾರೆ. ಜಾಮೀನಿನ ಮೇಲೆ ಬಿಡುಗಡೆ ಮಾಡಿದರೆ ಸಾಕ್ಷ್ಯಗಳನ್ನು ನಾಶ ಪಡಿಸುವ ಸಂಭವ ಇರುತ್ತದೆ ಎನ್ನುವುದು ಸಹ ಜಾರಿ ನಿರ್ದೇಶನಾಲಯ ದ ಪ್ರಬಲ ವಾದವಾಗಿದೆ.

Conclusion:ವಿಶೇಷ ನ್ಯಾಯಾಲಯವು ಡಿಕೆಶಿ ಅವರ ಜಾಮೀನು ಅರ್ಜಿ ಪರಿಗಣಿಸಿದರೆ ಬಂಧನದಿಂದ ಬಿಡುಗಡೆಯಾಗಲಿದ್ದಾರೆ. ಇಡಿ ವಶಕ್ಕೆ ನೀಡಿದರೆ ಮತ್ತೆ ವಿಚಾರಣೆಗೆ ಒಳಪಡಬೇಕಾಗುತ್ತದೆ. ಜಾಮೀನೂ ನೀಡದೆ, ಇಡಿ ವಶಕ್ಕೂ ನೀಡದೆ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದರೆ ತಿಹಾರ್ ಜೈಲು ಸೇರಬೇಕಾಗುತ್ತದೆ.

ಸೆ. ೩ ರಿಂದ ಇಡಿಯ ಬಂಧನದಲ್ಲಿ ಇರುವ ಶಿವಕುಮಾರ್ ಇಂದಿನ ವಿಚಾರಣೆಯಲ್ಲಿ ತಮಗೆ ಜಾಮೀನು ಸಿಗಬಹುದೆನ್ನುವ ನಿರೀಕ್ಷೆಯಲ್ಲಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.