ಬೆಂಗಳೂರು: ರಾಮನಗರ ಬಳಿ ಹೆದ್ದಾರಿಯಲ್ಲಿ ನೀರು ನಿಂತು ಅವಾಂತರವಾಗಿರುವ ವಿಚಾರ ನಿಜಕ್ಕೂ ಬೇಸರದಾಯಕ. ಇಂತಹ ರಸ್ತೆಯ ಯೋಜನೆ ರೂಪಿಸಿದವರಿಗೆ ಪದ್ಮಭೂಷಣ ನೀಡಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅಭಿಪ್ರಾಯ ವ್ಯಂಗ್ಯವಾಡಿದ್ದಾರೆ.
ಬೆಂಗಳೂರಿನ ಸದಾಶಿವನಗರ ನಿವಾಸದಲ್ಲಿಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ಮಳೆ ಬರುವುದಕ್ಕೆ ಬೇಡ ಎನ್ನಲಾಗದು, ಸಮುದ್ರ ಸೇರುವ ನೀರನ್ನು ತಡೆದು ಬಳಕೆ ಮಾಡುವುದು ಉತ್ತಮ ಎಂದು ನಾವು ಮೇಕೆದಾಟು ಪಾದಯಾತ್ರೆ ಮಾಡಿದ್ದೆವು. ಆದರೆ ಈ ಸರ್ಕಾರ ಬೆಲೆ ಕೋಡಲಿಲ್ಲ. ಮಳೆಯಿಂದ ಆಗುತ್ತಿರುವ ಅಪಾರ ಹಾನಿಗೆ ಪರಿಹಾರವನ್ನು ಆದಷ್ಟು ಬೇಗ ಸರ್ಕಾರ ವ್ಯವಸ್ಥೆ ಮಾಡಲಿ ಎಂದು ಒತ್ತಾಯಿಸಿದರು.
ಸಿಎಂಗೆ ಒತ್ತಾಯ ಮಾಡೋದು ಏನೆಂದರೆ, ಹೆದ್ದಾರಿ ಆಗುತ್ತಿದೆ. ಅಲ್ಲಿನ ಪ್ಲಾನಿಂಗ್ ಮಾಡಿದವರಿಗೆ ಪದ್ಮಭೂಷಣ ಪ್ರಶಸ್ತಿ ಘೋಷಣೆ ಮಾಡಿ. ಟೋಲ್ ಪಕ್ಕಾ ಹೇಗಿರಬೇಕು ಅಂತ ಕಾಮನ್ ಸೆನ್ಸ್ ಇರಬೇಕು. ಯಾರು ಪ್ಲಾನಿಂಗ್ ಮಾಡಿದ್ರೋ ಅವರಿಗೆ ಅವಾರ್ಡ್ ಕೊಡಿ. ಬರೀ ಟಾರ್ ಹಾಕಿ ದುಡ್ಡು ಇಸ್ಕೊಳ್ಳೋದಷ್ಡೇ ಕೆಲಸನಾ? ನ್ಯಾಷನಲ್ ಹೈವೇಯಲ್ಲೇ ಹೀಗಾದ್ರೆ ಹೇಗೆ? ಎಂದು ಡಿಕೆಶಿ ಹರಿಹಾಯ್ದರು.
ಇದನ್ನೂ ಓದಿ : ಮಳೆ ಹಾನಿ ಪ್ರದೇಶಕ್ಕೆ ಹೆಚ್ಡಿಕೆ ಭೇಟಿ.. ಬೋರೇಗೌಡರ ಕುಟುಂಬಕ್ಕೆ ನೆರವು