ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರು ಮೊದಲು ರಾಜ್ಯದ ಜನರಲ್ಲಿ ಕ್ಷಮೆ ಕೇಳಬೇಕು. ಈ ಹೇಳಿಕೆ ಹೇಡಿತನದ್ದು ಎಂದು ಸಚಿವ ಆರ್ ಅಶೋಕ್ ವಾಗ್ದಾಳಿ ನಡೆಸಿದ್ದಾರೆ. ವಿಧಾನಸೌಧದಲ್ಲಿ ಮಾತನಾಡಿದ ಅವರು, ರಾಷ್ಟ್ರದ ಭದ್ರತೆಯ ಪ್ರಶ್ನೆ ಬಂದಾಗ ಏಕತೆಯ ಪ್ರದರ್ಶನ ಮಾಡಬೇಕು. ದೇಶದ ಗಡಿಯಲ್ಲಿ ಯೋಧರು ಪ್ರಾಣದ ಹಂಗು ತೊರೆದು ರಕ್ಷಣೆ ಮಾಡ್ತಿದ್ದಾರೆ. ಭಯೋತ್ಪಾದಕರ ವಿಚಾರದಲ್ಲಿ ಅನುಕಂಪದಿಂದ ಮಾತಾಡಬಾರದು. ಬಾಂಬ್ ಸ್ಫೋಟದಂಥ ಸಂದರ್ಭದಲ್ಲಿ ಪಕ್ಷತೀತವಾಗಿ ಒಟ್ಟಾಗಿ ನಿಲ್ಲಬೇಕು ಎಂದರು.
ಇದನ್ನೂ ಓದಿ: ಕುಕ್ಕರ್ ಬ್ಲಾಸ್ಟ್ ಮೂಲಕ ಬಿಜೆಪಿಯಿಂದ ಮತದಾರರ ಮಾಹಿತಿ ಕಳ್ಳತನ ವಿಷಯ ಡೈವರ್ಟ್: ಡಿಕೆಶಿ
ವೋಟಾರ್ ಐಡಿ ಬಗ್ಗೆ ಏನಾದರೂ ದಾಖಲೆ ಇದ್ರೆ ಸದನದಲ್ಲಿ ಮಂಡಿಸಿ ಹೋರಾಟ ಮಾಡಿ. ನಿಮಗೆ ಹೋರಾಟ ಮಾಡಲು ತಾಕತ್ ಇಲ್ವಾ?. ಭಯೋತ್ಪಾದನೆ ಚಟುವಟಿಕೆಗಳಿಗೆ ಕುಮ್ಮಕ್ಕು ಕೊಡೋದು ಅಕ್ಷಮ್ಯ ಅಪರಾಧ. ಕಾಂಗ್ರೆಸ್‌ನವರಿಗೆ ಮುಸ್ಲಿಂ ಭಯೋತ್ಪಾದಕರೆಲ್ಲರೂ ದೇವಲೋಕದಿಂದ ಬಂದ ದೇವತೆಗಳಂತೆ ಕಾಣ್ತಾರೆ. ಮುಸ್ಲಿಮರು ಅಂದರೆ ಇವರಿಗೆ ಬಹಳ ಪ್ರೀತಿ. ಇವರ ಅತಿಯಾದ ಪ್ರೀತಿಯೇ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಮಾರಕ ಆಗುತ್ತದೆ. ಒಬ್ಬ ಟೆರರಿಸ್ಟ್ಗೆ ಈ ರೀತಿಯ ಪ್ರೀತಿ ತೋರಿಸೋದು ಕಾಂಗ್ರೆಸ್ಗೆ ಶೋಭೆ ತರುವಂಥದ್ದಲ್ಲ ಎಂದರು.