ETV Bharat / state

ತಾಯಿ-ಮಗಳ ಫೋಟೋ ಅಶ್ಲೀಲವಾಗಿ ಎಡಿಟ್ ಮಾಡಿ ಟ್ರೋಲ್‌ ಪೇಜ್‌ಗೆ ಹಾಕಿದ್ದ ಆರೋಪಿ ಅರೆಸ್ಟ್ - ಸೈಬರ್ ಕ್ರೈಂ ಪೊಲೀಸರು

ಆರೋಪಿ ಇನ್​ಸ್ಟಾಗ್ರಾಮ್​​ನಲ್ಲಿ ಪರಿಚಯವಾಗಿದ್ದ ಮಹಿಳೆಯ ಜೊತೆ ಸಲುಗೆ ಬೆಳೆಸಿಕೊಂಡು ಪುತ್ರಿಯನ್ನು ವಿವಾಹ ಮಾಡಿಕೊಡುವಂತೆ ಪೀಡಿಸಲು ಆರಂಭಿಸಿದ್ದಾನೆ. ಇದಕ್ಕೆ ಒಪ್ಪದೇ ಇದ್ದಾಗ ಆಕೆಯ ಫೋಟೋ, ವಿಡಿಯೋವನ್ನು ಅಶ್ಲೀಲವಾಗಿ ಎಡಿಟ್ ಮಾಡಿ ಟ್ರೋಲ್ ಪೇಜ್​ನಲ್ಲಿ ಹರಿಬಿಟ್ಟಿದ್ದ.

cyber-crime-police-arrested-a-man-who-allegedly-posting-obscene-video-about-women
ಮದುವೆಯಾಗಲು ನಿರಾಕರಿಸಿದಕ್ಕೆ ತಾಯಿ-ಮಗಳ ಫೋಟೋ ಅಶ್ಲೀಲವಾಗಿ ಎಡಿಟ್ ಮಾಡಿದ್ದ ಆರೋಪಿ ಅಂದರ್
author img

By

Published : Sep 21, 2021, 3:19 PM IST

ಬೆಂಗಳೂರು: ಮಗಳನ್ನು ಮದುವೆ ಮಾಡಿಸಿ ಕೊಡಲು ನಿರಾಕರಿಸಿದ ಕಾರಣ ತಾಯಿ-ಮಗಳ ಫೋಟೋ ಹಾಗು ವಿಡಿಯೋವನ್ನು ಅಶ್ಲೀಲವಾಗಿ ಎಡಿಟ್​ ಮಾಡಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ಆರೋಪಿಯನ್ನು ನಗರದ ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ.

ಕಲಬುರಗಿ ಮೂಲದ ಅವಿನಾಶ್ ಬಂಧಿತ ಆರೋಪಿ. ಈತ ಮಹಿಳೆಯೊಬ್ಬರ ಜೊತೆ ಸ್ನೇಹ ಬೆಳೆಸಿ ಆಕೆಯ ಮಗಳನ್ನು ಮದುವೆ ಮಾಡಿಸಿಕೊಡುವಂತೆ ಪೀಡಿಸುತ್ತಿದ್ದನಂತೆ. ಇದಕ್ಕೆ ಮಹಿಳೆ ಒಪ್ಪದೇ ಇದ್ದಾಗ, ತಾಯಿ-ಮಗಳ ಫೋಟೋ, ವಿಡಿಯೋವನ್ನು ಅಶ್ಲೀಲವಾಗಿ ಎಡಿಟ್‌ ಮಾಡಿ ಸೋಶಿಯಲ್ ಮೀಡಿಯಾದಲ್ಲಿನ ಟ್ರೋಲ್ ಪೇಜ್‌ಗೆ ಅಪ್ಲೋಡ್ ಮಾಡಿದ್ದಾನೆ.

ಇದಲ್ಲದೆ ಉಳಿದ ಟ್ರೋಲ್ ಪೇಜ್​​ಗಳಿಗೂ ಫೋಟೋವನ್ನು ಕಳುಹಿಸಿದ್ದಾನೆ. ಇದರಿಂದ ಮನನೊಂದ ಮಹಿಳೆ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದರು. ಈ ದೂರಿನನ್ವಯ ಆರೋಪಿಯನ್ನು ಇದೀಗ ಬಂಧಿಸಲಾಗಿದೆ.

ಇದನ್ನೂ ಓದಿ: ಸಚಿವ ಮುರುಗೇಶ್ ನಿರಾಣಿ Twitter ಖಾತೆ ಹ್ಯಾಕ್: ಶೀಘ್ರವೇ ದೂರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.