ದೇವನಹಳ್ಳಿ(ಬೆಂಗಳೂರು ಗ್ರಾಮಾಂತರ): ದುಬೈನಿಂದ ಬಂದ ಪ್ರಯಾಣಿಕನನ್ನು ಕಸ್ಟಮ್ಸ್ ಅಧಿಕಾರಿಗಳು ತಪಾಸಣೆ ನಡೆಸಿದ್ದಾಗ ಐರನ್ ಬಾಕ್ಸ್ ಒಳಗಡೆ ಮಾರೆಮಾಚಿ ಚಿನ್ನ ಸಾಗಿಸುತ್ತಿದ್ದ ಪ್ರಕರಣ ಬೆಳಕಿಗೆ ಬಂದಿದೆ.
ನ.29 ರಂದು ದುಬೈನಿಂದ ದೇವನಹಳ್ಳಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಯುವಕನೋರ್ವ(22) ಬಂದಿದ್ದ. ಯುವಕನ ಮೇಲೆ ಸಂಶಯಗೊಂಡ ಬೆಂಗಳೂರು ಕಸ್ಟಮ್ಸ್ ಅಧಿಕಾರಿಗಳು ಆತನ ಬ್ಯಾಗ್ ಅನ್ನು ಸ್ಕ್ಯಾನರ್ ಮೂಲಕ ತಪಾಸಣೆ ನಡೆಸಿದಾಗ ಅನುಮಾನಾಸ್ಪದ ವಸ್ತು ಕಂಡು ಬಂದಿದೆ. ಬಳಿಕ ಅತ್ಯಾಧುನಿಕ ಸ್ಕ್ಯಾನರ್ ಮೂಲಕ ಪರಿಶೀಲಿಸಿದಾಗ ಐರನ್ ಬಾಕ್ಸ್ ಒಳಗಡೆ ಇಡಲಾಗಿದ್ದ ಚಿನ್ನ ಪತ್ತೆಯಾಗಿದೆ.

ಐರನ್ ಬಾಕ್ಸ್ ಕೆಳಗೆ ಇರುವ ಬಟ್ಟೆಯನ್ನು ಒತ್ತಲು ಬಳಸುವ ಉಕ್ಕಿನ ಭಾಗದಲ್ಲಿ ಚಿನ್ನವನ್ನು ಇಡಲಾಗಿತ್ತು. ಸುಮಾರು 1.60 ಕೋಟಿ ಮೌಲ್ಯದ 3015.13 ಗ್ರಾಂ ಚಿನ್ನ ವಶಕ್ಕೆ ಪಡೆಯಲಾಗಿದ್ದು, ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಇದನ್ನೂ ಓದಿ: ಬೆಂಗಳೂರು ಡ್ರಗ್ಸ್ ಬಲೆಯಲ್ಲಿ ಸಿಕ್ಕಿ ಟೆಕ್ಕಿಗಳು, ವಿದ್ಯಾರ್ಥಿಗಳು ವಿಲವಿಲ.. ಎರಡು ತಿಂಗಳಲ್ಲಿ 27 ಆರೋಪಿಗಳ ಬಂಧನ