ಬೆಂಗಳೂರು: ಅಧಿವೇಶನ ಮೊಟಕುಗೊಳಿಸುವ ಅಧಿಕಾರ ಇರುವುದು ಸ್ಪೀಕರ್ಗೆ, ವಿಪಕ್ಷ ನಾಯಕರ ಅಭಿಪ್ರಾಯ ಪಡೆದು ಮೊಟಕುಗೊಳಿಸುತ್ತಾರೆ ಎಂದು ಪ್ರವಾಸೋದ್ಯ ಸಚಿವ ಸಿ.ಟಿ ರವಿ ತಿಳಿಸಿದರು.
ವಿಧಾನಸೌಧದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ವಿಶ್ವದ 150 ದೇಶಗಳಲ್ಲಿ ಭೀತಿ ಹುಟ್ಟಿಸಿರುವ ಕೊರೊನಾ ಸೋಂಕಿನ ಬಗ್ಗೆ ಸದನದಲ್ಲಿ ಸಾಕಷ್ಟು ಚರ್ಚೆ ಆಗಿದೆ, ಜನರಿಗೆ ಭಯ ಆಗುವ ರೀತಿ ನಡೆದುಕೊಳ್ಳುಬಾರದು. ಕೇಂದ್ರ ಹಾಗೂ ರಾಜ್ಯ ಸರ್ಕಾರ ಜನರಿಗೆ ಧೈರ್ಯ ತುಂಬುತ್ತಿದೆ ಎಂದರು.