ETV Bharat / state

ನಮ್ಮ ಮೆಟ್ರೋ ಕುರಿತು ಆಕ್ಷೇಪಾರ್ಹ ವಿಡಿಯೋ: ವಿದೇಶಿ ಯೂಟ್ಯೂಬರ್ ಮೇಲೆ ಕ್ರಿಮಿನಲ್ ಕೇಸ್‌- BMRCL - ನಮ್ಮ ಮೆಟ್ರೋ

''ವಿದೇಶಿ ಯೂಟ್ಯೂಬರ್ ಫಿಡಿಯಾಸ್ ಪನಾಯೊಟ್ ಎಂಬಾತನ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು'' ಎಂದು ಬಿಎಂಆರ್‌ಸಿಎಲ್‌ನ ವ್ಯವಸ್ಥಾಪಕ ನಿರ್ದೇಶಕ ಅಂಜುಮ್ ಪರ್ವೇಜ್‌ ತಿಳಿಸಿದ್ದಾರೆ. ಇಷ್ಟಕ್ಕೂ ಏನಿದು ಪ್ರಕರಣ? ಸಂಪೂರ್ಣ ವರದಿ ಇಲ್ಲಿದೆ.

BMRCL
ವಿದೇಶಿ ಯೂಟ್ಯೂಬರ್ ಫಿಡಿಯಾಸ್ ಪನಾಯೊಟ್ ಮೇಲೆ ಕ್ರಿಮಿನಲ್ ಕೇಸ್​ ದಾಖಲಿಸಲಾಗುವುದು: ಬಿಎಂಆರ್‌ಸಿಎಲ್‌
author img

By ETV Bharat Karnataka Team

Published : Sep 25, 2023, 12:19 PM IST

Updated : Sep 25, 2023, 12:49 PM IST

ಬೆಂಗಳೂರು: ''ನಮ್ಮ ಮೆಟ್ರೋದಲ್ಲಿ ನಿಯಮ ಉಲ್ಲಂಘಿಸಿ ವಿದೇಶಿ ಯೂಟ್ಯೂಬರ್ ಫಿಡಿಯಾಸ್ ಪನಾಯೊಟ್ ಎಂಬಾತ ಟಿಕೆಟ್ ಖರೀದಿಸದೇ ಪ್ರಯಾಣಿಸಿರುವ ವಿಡಿಯೋ ವೈರಲ್ ಆಗಿದ್ದು, ಈ ಬಗ್ಗೆ ಪರಿಶೀಲಿಸಿ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಲಿದ್ದಾರೆ'' ಎಂದು ಬಿಎಂಆರ್‌ಸಿಎಲ್‌ನ ವ್ಯವಸ್ಥಾಪಕ ನಿರ್ದೇಶಕ ಅಂಜುಮ್ ಪರ್ವೇಜ್‌ ಹೇಳಿದರು.

''ಉಚಿತವಾಗಿ ಹೇಗೆ ಪ್ರಯಾಣಿಸುವುದು ಎಂಬುದನ್ನು ವಿಡಿಯೋ ಮಾಡಿ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾನೆ. ವಿಡಿಯೋ ವೈರಲ್ ಆಗಿರುವುದು ನಮ್ಮ ಗಮನಕ್ಕೆ ಬಂದಿದೆ. ಇಂತಹ ನಡವಳಿಕೆ ಸ್ವೀಕಾರಾರ್ಹವಲ್ಲ. ಫಿಡಿಯಾಸ್ ಪನಾಯೊಟೌ ಮೇಲೆ ಬೆಂಗಳೂರು ಮೆಟ್ರೋ ರೈಲು ನಿಗಮ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಿದೆ'' ಎಂದು ತಿಳಿಸಿದ್ದಾರೆ.

ವೈರಲ್​ ವಿಡಿಯೋದಲ್ಲಿ ಏನಿದೆ?: ಭಾರತದಲ್ಲಿರುವ ಮೆಟ್ರೋ ರೈಲುಗಳಲ್ಲಿ ಟಿಕೆಟ್ ಇಲ್ಲದೆ ಪ್ರಯಾಣಿಸುವುದು ಹೇಗೆ ಎಂಬುದನ್ನು ಯೂಟ್ಯೂಬರ್ ತನ್ನ ವಿಡಿಯೋದಲ್ಲಿ ತಿಳಿಸಿದ್ದಾನೆ. ಟಿಕೆಟ್‌ ಪಡೆಯದೆ ಪ್ಲಾಟ್‌ಫಾರಂಗೆ ಹೋಗಿ ರೈಲು ಹತ್ತಿದ್ದಾನೆ. ಬಳಿಕ ವಿಡಿಯೋದಲ್ಲಿ ವಿವರಣೆ ನೀಡುತ್ತಾ ಮೆಟ್ರೋ ನಿಲ್ದಾಣದಿಂದ ಹೊರಬಂದಿರುವುದು ವಿಡಿಯೋದಲ್ಲಿ ಸ್ಪಷ್ಟವಾಗಿ ಕಂಡುಬಂದಿದೆ. ಕೂಪನ್ ಹಾಕದೇ ಯೂಟ್ಯೂಬರ್‌ ಜಂಪ್ ಮಾಡಿದ್ದಾನೆ. ಈ ಸಂದರ್ಭದಲ್ಲಿ ಆರೋಪಿ ನೀಲಿ ಶಾರ್ಟ್, ಬಿಳಿ ಟೀ ಶರ್ಟ್‌ ಧರಿಸಿದ್ದನು.

ಟಿಕೆಟ್ ಇಲ್ಲದೇ ಕೌಂಟರ್ ದಾಟಿ ಬರುವ ಆರೋಪಿ, ವಿಡಿಯೊದಲ್ಲಿ ಮಾತನಾಡಿಕೊಂಡೇ ಮೆಟ್ರೋ ನಿಲ್ದಾಣದಿಂದ ಹೊರಬಂದಿದ್ದಾನೆ. ಟಿಕೆಟ್ ಪಡೆದವರು ಒಂದೆಡೆ ಸರತಿ ಸಾಲಿನಲ್ಲಿ ನಿಂತ ಟಿಕೆಟ್‌ ಅನ್ನು ಕೌಂಟರ್‌ನಲ್ಲಿ ಹಾಕಿ ನಿಯಮಾನುಸಾರ ದಾಟಿ ಬರುತ್ತಿದ್ದರೆ, ಈತ ಮಾತ್ರ ಅಡ್ಡಲಾಗಿ ಹಾಕಿರುವ ಗ್ರೀನ್ ಬಾಗಿಲುಗಳನ್ನು ಜಂಪ್ ಮಾಡಿ (ದಾಟಿ) ಹೊರಬರುತ್ತಾನೆ. ಇದು ವಿಡಿಯೊದಲ್ಲಿ ಸೆರೆಯಾಗಿದ್ದು, 'ಇಷ್ಟೇ ಭಾರತೀಯ ಸಾರಿಗೆಯಲ್ಲಿ ಉಚಿತವಾಗಿ ಓಡಾಡುವುದು' ಎಂದು ಆತ ವಿವರಿಸಿದ್ದಾನೆ.

ಇಂಥ ಪ್ರಕರಣ ಇದೇ ಮೊದಲು: ಬೆಂಗಳೂರಿನಲ್ಲಿ ನಮ್ಮ ಮೆಟ್ರೋ 2011ರಲ್ಲಿ ಕಾರ್ಯಾಚರಣೆ ಆರಂಭಿಸಿದ್ದು, ಇಲ್ಲಿಯವರೆಗೆ ಈ ರೀತಿಯ ಪ್ರಕರಣಗಳು ಕಂಡುಬಂದಿಲ್ಲ. ಟಿಕೆಟ್ ಇಲ್ಲದೇ ಜಂಪ್ ಮಾಡಿ ಪ್ರಯಾಣಿಸಿದ ಮೊದಲ ಪ್ರಕರಣ ಇದಾಗಿದೆ.

ಇದನ್ನೂ ಓದಿ: ಬೈಯಪ್ಪನಹಳ್ಳಿ- ಕೃಷ್ಣರಾಜಪುರ ನಿಲ್ದಾಣಗಳ ನಡುವೆ ಸಿಗ್ನಲಿಂಗ್‌ ಪರೀಕ್ಷೆ: ಮೆಟ್ರೋ ರೈಲು ಕಾರ್ಯಾಚರಣೆ ಸಮಯದಲ್ಲಿ ಬದಲಾವಣೆ

Last Updated : Sep 25, 2023, 12:49 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.