ಬೆಂಗಳೂರು : ಸಿಟಿ ಸಿವಿಲ್ ಕೋರ್ಟ್ನ ಮಹಿಳಾ ಉದ್ಯೋಗಿಗೆ ಲೈಂಗಿಕ ಕಿರುಕುಳ ನೀಡಿರುವ ಗಂಭೀರ ಆರೋಪವೊಂದು ಕಾನೂನು ಇಲಾಖೆಯ ಎಓ (ಅಭಿಯೋಜನಾ ಅಧಿಕಾರಿ) ವಿರುದ್ಧ ಕೇಳಿ ಬಂದಿದ್ದು, ವಿಧಾನಸೌಧ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 45 ವರ್ಷದ ಮಹಿಳೆಯೊಬ್ಬರು ನೀಡಿರುವ ದೂರಿನನ್ವಯ ಬೆಂಗಳೂರು ನಗರ ಪ್ರಾಸಿಕ್ಯೂಷನ್ ವಿಭಾಗದ ಸರ್ಕಾರಿ ಅಭಿಯೋಜನಾ ಅಧಿಕಾರಿ ನಾರಾಯಣಸ್ವಾಮಿ ವಿರುದ್ಧ ಕೇಸ್ ದಾಖಲಾಗಿದೆ.
ದೂರುದಾರ ಮಹಿಳೆ ಕಳೆದ ವರ್ಷ ಜುಲೈನಲ್ಲಿ ದಾವಣಗೆರೆ ಸರ್ಕಾರಿ ಅಭಿಯೋಜಕರ ಕಚೇರಿಯಿಂದ ಬೆಂಗಳೂರು ನಗರ ಕಾನೂನು ಅಧಿಕಾರಿಗಳ ವಿಭಾಗಕ್ಕೆ ಬೆರಳಚ್ಚುಗಾರಳಾಗಿ ವರ್ಗಾವಣೆ ಪಡೆದು ಬಂದಿದ್ದರು. ಕಚೇರಿಯಲ್ಲಿರುವ ಎಓ ನಾರಾಯಣಸ್ವಾಮಿ ಈ ವರ್ಷ ಜನವರಿಯಿಂದ ತನ್ನೊಂದಿಗೆ ಲೈಂಗಿಕ ಕ್ರಿಯೆಗೆ ಸಹಕರಿಸುವಂತೆ ಒತ್ತಾಯಿಸುತ್ತಿದ್ದು, ದೂರುದಾರ ಮಹಿಳೆ ಒಪ್ಪಿಕೊಂಡಿಲ್ಲ. ಕಳೆದ ತಿಂಗಳು ಮೇಯೋ ಹಾಲ್ ನ್ಯಾಯಾಲಯಕ್ಕೆ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ದೂರುದಾರಳಿಗೆ, 'ನೀನು ಈ ಇಲಾಖೆಯಲ್ಲಿ ಹೇಗೆ ಕೆಲಸ ಮಾಡುತ್ತೀಯೋ ನೋಡುತ್ತೇನೆ' ಎಂದು ಜೀವ ಬೆದರಿಕೆ ಹಾಕಿದ್ದಾರೆ ಅಂತ ನಾರಾಯಣಸ್ವಾಮಿ ವಿರುದ್ಧ ಆರೋಪಿಸಿದ್ದಾರೆ.
ಇದನ್ನೂ ಓದಿ : Bengaluru crime : ಸ್ನೇಹಿತರನ್ನು ಮನೆಗೆ ಕರೆತಂದು ಡ್ರಗ್ಸ್ ಪಾರ್ಟಿ.. ಮಾಡಿ ಪತ್ನಿಗೆ ಟಾರ್ಚರ್ ಕೊಡುತ್ತಿದ್ದ ಆರೋಪದಡಿ ಪತಿ ಅರೆಸ್ಟ್
ಸದ್ಯಕ್ಕೆ ದೂರಿನನ್ವಯ ವಿಧಾನಸೌಧ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಐಪಿಸಿ ಸೆಕ್ಷನ್ 354A ಹಾಗೂ 506 ಅಡಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಜೊತೆಗೆ, ಆರೋಪಿಗೆ ಪೊಲೀಸರು ನೋಟಿಸ್ ಸಹ ನೀಡಿದ್ದಾರೆ.
ಇದನ್ನೂ ಓದಿ : ಲೈಂಗಿಕ ಕ್ರಿಯೆಗೆ ಸಹಕರಿಸದ ಪತ್ನಿಯ ಕುತ್ತಿಗೆ ಸೀಳಿ ಕೊಲೆ ಮಾಡಿದ್ದ ಪತಿಗೆ ಜೀವಾವಧಿ ಶಿಕ್ಷೆ
ಆರೋಪಿಗೆ ಜೀವಾವಧಿ ಶಿಕ್ಷೆ : ಮದ್ಯಪಾನ ವ್ಯಸನಿಯಾಗಿದ್ದ ಪತಿಯೊಬ್ಬ ತನ್ನ ಪತ್ನಿ ಲೈಂಗಿಕ ಕ್ರಿಯೆಗೆ ಸಹಕಾರ ನೀಡಿಲ್ಲ ಎಂದು ಕುತ್ತು ಸೀಳಿ ಕೊಲೆ ಮಾಡಿದ್ದು, ಆರೋಪಿಗೆ ನ್ಯಾಯಾಲಯ ಜೂನ್ 28 ರಂದು ಜೀವಾವಧಿ ಶಿಕ್ಷೆ ವಿಧಿಸಿದೆ. 19-02- 20 ರಂದು ದಾವಣಗೆರೆ ಜಿಲ್ಲೆಯ ಅಮರಾವತಿ ಗ್ರಾಮದ ಮಲ್ಲಿಕಾರ್ಜುನ ಬಡಾವಣೆಯಲ್ಲಿ ಘಟನೆ ನಡೆದಿತ್ತು. ಮರಿಯಪ್ಪ (54) ಶಿಕ್ಷೆಗೊಳಗಾದ ಆರೋಪಿಯಾಗಿದ್ದು, ಈತ ಸೌಭಾಗ್ಯಮ್ಮ ಕೊಲೆ ಮಾಡಿದ್ದ. ಆರೋಪಿ ಕುಡಿದು ಬಂದು ಮನೆಯಲ್ಲಿ ಹೆಂಡತಿ ಸೌಭಾಗ್ಯಮ್ಮ ಜೊತೆ ಜಗಳ ಮಾಡಿದ್ದಾನೆ. ಬಳಿಕ, ಲೈಂಗಿಕ ಕ್ರಿಯೆಗೆ ಸಹಕಾರ ನೀಡದೆ ಇದ್ದುದರಿಂದ ಕೋಪಗೊಂಡು ಅದೇ ಮನೆಯಲ್ಲಿದ್ದ ಚಾಕುವಿನಿಂದ ಪತ್ನಿಯ ಕುತ್ತಿಗೆ ಕೊಯ್ದು ಕೊಲೆ ಮಾಡಿದ್ದ.
ಇದನ್ನೂ ಓದಿ : ಫುಡ್ ಡೆಲಿವರಿಗೆ ಬಂದು ಲಿಫ್ಟ್ನಲ್ಲಿ ಬಾಲಕಿಗೆ ಲೈಂಗಿಕ ಕಿರುಕುಳ; ಆರೋಪಿಗೆ ನ್ಯಾಯಾಂಗ ಬಂಧನ
ಬಾಲಕಿಗೆ ಲೈಂಗಿಕ ಕಿರುಕುಳ : ಇನ್ನು ಅಪಾರ್ಟ್ಮೆಂಟಿಗೆ ಫುಡ್ ಡೆಲಿವರಿ ಮಾಡಲು ಬಂದು ಲಿಫ್ಟ್ನಲ್ಲಿ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಿಗೆ ಜೂನ್ 25 ರಂದು ನ್ಯಾಯಾಂಗ, ಶಿಕ್ಷೆ ವಿಧಿಸಿದೆ. ತಲಘಟ್ಟಪುರ ವ್ಯಾಪ್ತಿಯ ಖಾಸಗಿ ಅಪಾರ್ಟ್ಮೆಂಟ್ನಲ್ಲಿ ಜೂನ್ 21ರ ಸಂಜೆ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿತ್ತು. ಪೋಕ್ಸೋ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಆರೋಪಿ ಚೇತನ್ (30) ಎಂಬಾತನನ್ನು ಬಂಧಿಸಿದ್ದರು. ಬಳಿಕ ಕೋರ್ಟ್, ನ್ಯಾಯಾಂಗ ಬಂಧನ ವಿಧಿಸಿ ಶಿಕ್ಷೆ ನೀಡಿದೆ.