ETV Bharat / state

ಪ್ರಯಾಣಿಕನ ಮೇಲೆ ಆಟೋ ಚಾಲಕನ ಗೂಂಡಾ ವರ್ತನೆ ಸಿಸಿಟಿವಿಯಲ್ಲಿ ಸೆರೆ: ಮತ್ತೊಂದೆಡೆ ಚಾಲಕರಿಂದ ಸುಲಿಗೆ ಮಾಡುತ್ತಿದ್ದ ಆರೋಪಿ ಬಂಧನ! - ಆಟೋ ಚಾಲಕರ ಗೂಂಡಾ ವರ್ತನೆ

ಆನ್​ಲೈನ್​ನಲ್ಲಿ ಆಟೋ ಬುಕ್ ಮಾಡಿದ್ದ ಪ್ರಯಾಣಿಕನಿಗೆ ಚಾಲಕನೊಬ್ಬ ಬಂದು ಡಿಕ್ಕಿ ಹೊಡೆದು, ಪ್ರಯಾಣಿಕನ ತಾಯಿಯ ಮುಂದೆಯೇ ಹಲ್ಲೆಗೆ ಯತ್ನಿಸಿದ ಘಟನೆ ಬೆಂಗಳೂರಿನ ಜಯನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

Etv Bharat
Etv Bharat
author img

By

Published : Jun 17, 2023, 2:16 PM IST

ಪ್ರಯಾಣಿಕನ ಮೇಲೆ ಆಟೋ ಚಾಲಕನ ಗೂಂಡಾ ವರ್ತನೆ ದೃಶ್ಯ ಸಿಸಿ ಕ್ಯಾಮರದಲ್ಲಿ ಸೆರೆ

ಬೆಂಗಳೂರು : ನಗರದಲ್ಲಿ ಇತ್ತೀಚಿಗೆ ಕೆಲ‌ ಆಟೋ ಚಾಲಕರ ಗೂಂಡಾ ವರ್ತನೆ ಹೆಚ್ಚಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ಟ್ರಿಪ್ ಕ್ಯಾನ್ಸಲ್ ಮಾಡದಿದ್ದಕ್ಕೆ ಪ್ರಯಾಣಿಕನಿಗೆ ಆಟೋದಿಂದ ಗುದ್ದಿ, ಹಲ್ಲೆ ಮಾಡಿರುವ ಘಟನೆ ಜಯನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

auto driver
ಆಟೋ ಚಾಲಕನ ಗೂಂಡಾ ವರ್ತನೆ ಹಂಚಿಕೊಂಡ ಟ್ವಿಟರ್ ಬಳಕೆದಾರರು

ಆನ್​ಲೈನ್​ನಲ್ಲಿ ಆಟೋ ಬುಕ್ ಮಾಡಿದ್ದ ಪ್ರಯಾಣಿಕನಿಗೆ ಕರೆ ಮಾಡಿದ್ದ ಆಟೋ ಚಾಲಕ, ಬುಕಿಂಗ್ ಕ್ಯಾನ್ಸಲ್ ಮಾಡಿ ಆಫ್​ಲೈನ್​ನಲ್ಲಿ ಬರುವಂತೆ ಕೇಳಿದ್ದಾನೆ. ಇದಕ್ಕೆ ಪ್ರಯಾಣಿಕ 'ಹಾಗೆ ಮಾಡಲು ಸಾಧ್ಯವಿಲ್ಲ, ಬರೋ ಹಾಗಿದ್ರೆ ಆನ್​ಲೈನ್​ನಲ್ಲಿ ಬುಕ್​ ಮಾಡಿರುವುದಕ್ಕೆ ಬನ್ನಿ' ಅಂದಿದ್ದಾನೆ. ಇದಕ್ಕೆ ಸಿಟ್ಟಿಗೆದ್ದ ಆಟೋ ಚಾಲಕ ಪ್ರಯಾಣಿಕನ ಜೊತೆ ಗೂಂಡಾ ವರ್ತನೆ ತೋರಿದ್ದಾನೆ. ಪ್ರಯಾಣಿಕ ಇದ್ದ ಸ್ಥಳಕ್ಕೆ ಬಂದು ಆಟೋದಲ್ಲಿ ಡಿಕ್ಕಿ ಹೊಡೆದು ಬಳಿಕ ಆತನ ತಾಯಿಯ ಮುಂದೆಯೇ ಹಲ್ಲೆಗೆ ಯತ್ನಿಸಿದ್ದಾನೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಟ್ವಿಟರ್ ಬಳಕೆದಾರರೊಬ್ಬರು ಬೆಂಗಳೂರು ನಗರ ಪೊಲೀಸರಿಗೆ ದೂರು ನೀಡಿದ್ದಾರೆ.

bengaluru
ರೈಡ್ ಬುಕ್ ಮಾಡಿ ಚಾಲಕರಿಂದ ಸುಲಿಗೆ ಮಾಡುತ್ತಿದ್ದ ಆರೋಪಿ ಬಂಧನ

ರೈಡ್ ಬುಕ್ ಮಾಡಿ ಚಾಲಕರಿಂದ ಸುಲಿಗೆ ಮಾಡುತ್ತಿದ್ದ ಆರೋಪಿ ಬಂಧನ : ಇನ್ನು ಕ್ಯಾಬ್ ಚಾಲಕರನ್ನು ಗುರಿಯಾಗಿಸಿಕೊಂಡು ಪ್ರಯಾಣಿಕನ ಸೋಗಿನಲ್ಲಿ ರೈಡ್ ಬುಕ್ ಮಾಡಿ ಬಳಿಕ ಸುಲಿಗೆ ಮಾಡುತ್ತಿದ್ದ ಆರೋಪಿಯನ್ನು ಬಾಣಸವಾಡಿ ಠಾಣಾ ಪೊಲೀಸರು ಬಂಧಿಸಿದ್ದಾರೆ. ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಚಾಕು ತೋರಿಸಿ ಸುಲಿಗೆ ಮಾಡುತ್ತಿದ್ದ ವಿನಯ್ ಎಂಬಾತನನ್ನು ಬಂಧಿಸಲಾಗಿದೆ.

ಇದನ್ನೂ ಓದಿ : Viral video : ಕುಡಿದ ಮತ್ತಿನಲ್ಲಿ ಕಾರಿಗೆ ಡಿಕ್ಕಿ ಹೊಡೆದು ಗಲಾಟೆ ಸೃಷ್ಟಿಸಿದ ಯುವಕ - ಯುವತಿಯರು

ಹೆಚ್ಎಎಲ್, ಬಾಣಸವಾಡಿ, ಹೈಗ್ರೌಂಡ್ಸ್, ಎಂ.ಜಿ ರಸ್ತೆ ಭಾಗಗಳಿಂದ ಕ್ಯಾಬ್ ಬುಕ್ ಮಾಡುತ್ತಿದ್ದ ಆರೋಪಿ,‌ ನಿರ್ಜನ ಪ್ರದೇಶಗಳಿಗೆ ಕರೆದೊಯ್ಯುತ್ತಿದ್ದ. ಬಳಿಕ ಚಾಕು ತೋರಿಸಿ ಚಾಲಕರನ್ನ ಬೆದರಿಸುತ್ತಿದ್ದ. ಚಾಲಕರ ಕಡೆಯಿಂದ ಅವರ ಕುಟುಂಬಸ್ಥರಿಗೆ ಕರೆ ಮಾಡಿಸಿ ಆಸ್ಪತ್ರೆಗೆ ಸೇರಿದ್ದೀನಿ, ನನಗೆ ಹಣದ ಅವಶ್ಯಕತೆಯಿದೆ ಎಂದು ಹೇಳಿಸಿ ಹಣ ಹಾಕಿಸಿಕೊಳ್ಳುತ್ತಿದ್ದ. ಬಳಿಕ ಫೋನ್ ಪೇ, ಗೂಗಲ್ ಪೇ ಮೂಲಕ‌ ತಾನು ಹಣ ಪಡೆದು ಪರಾರಿಯಾಗುತ್ತಿದ್ದ. ಚಾಲಕರು ಪೊಲೀಸರಿಗೆ ದೂರು ಕೊಡಲ್ಲ ಎಂದು ಹೆಚ್ಚಾಗಿ ಚಾಲಕರನ್ನೇ ಟಾರ್ಗೆಟ್ ಮಾಡಿ ಸುಲಿಗೆ ಮಾಡುತ್ತಿದ್ದ.

ಇದನ್ನೂ ಓದಿ : ಅಕ್ರಮ ಮರಳು ಸಾಗಾಟ ಮಾಡುತ್ತಿದ್ದ ಟ್ರ್ಯಾಕ್ಟರ್ ಹರಿದು ಹೆಡ್ ಕಾನ್ಸ್​ಟೇಬಲ್ ಸಾವು - ಕೊಲೆ ಶಂಕೆ

ಘಟನೆಯಿಂದ ನೊಂದ ಚಾಲಕರೊಬ್ಬರು ನೀಡಿದ ದೂನಿನ ಅನ್ವಯ ಕಾರ್ಯ ಪ್ರವೃತ್ತರಾದ ಬಾಣಸವಾಡಿ ಠಾಣಾ ಪೊಲೀಸರು ಆರೋಪಿಯನ್ನ ಬಂಧಿಸಿದ್ದಾರೆ. ಆರೋಪಿಯ ಬಂಧನದಿಂದ ನಾಲ್ಕು ಸುಲಿಗೆ ಪ್ರಕರಣಗಳು ಬೆಳಕಿಗೆ ಬಂದಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು‌ ಪೊಲೀಸರು‌ ತಿಳಿಸಿದ್ದಾರೆ.

ಇದನ್ನೂ ಓದಿ : ಮಂಗಳೂರಿನಲ್ಲಿ ಮನೆ ಕಳ್ಳತನ ಮಾಡಿ ದೆಹಲಿಗೆ ಪರಾರಿ ಯತ್ನ : ಪ್ರಕರಣ ದಾಖಲಾದ ಮೂರೇ ಗಂಟೆಯೊಳಗೆ ಆರೋಪಿಗಳು ಸೆರೆ

ಇದನ್ನೂ ಓದಿ : Crime news: ಪತ್ನಿಗೆ ಚಾಕುವಿನಿಂದ ಇರಿದು‌ ರಸ್ತೆಯಲ್ಲಿ ಮಲಗಿದ ಪತಿ.. ಗಲಾಟೆಗೆ ಕಾರಣ ನಿಗೂಢ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.