ETV Bharat / state

Bengaluru crime: ಹೋಟೆಲ್‌ ಕ್ಯಾಶಿಯರ್ ಭೀಕರ ಹತ್ಯೆ.. ತಲೆಮರೆಸಿಕೊಂಡಿರುವ ಆರೋಪಿ ಹೌಸ್ ಕೀಪರ್ - ​ ಈಟಿವಿ ಭಾರತ್​ ಕರ್ನಾಟಕ

ಜೀವನ್ ಭೀಮಾನಗರ ಪೊಲೀಸ್​ ಠಾಣೆ ವ್ಯಾಪ್ತಿಯಲ್ಲಿ ಹೋಟೆಲ್‌ ಕ್ಯಾಶಿಯರ್​ನ ಕೊಲೆಯಾಗಿದೆ.

ಹೋಟೆಲ್‌ ಕ್ಯಾಶಿಯರ್ ಭೀಕರ ಹತ್ಯೆ
ಹೋಟೆಲ್‌ ಕ್ಯಾಶಿಯರ್ ಭೀಕರ ಹತ್ಯೆ
author img

By

Published : Jul 20, 2023, 6:18 PM IST

Updated : Jul 20, 2023, 7:59 PM IST

ಜೀವನ್ ಭೀಮಾನಗರ ಪೊಲೀಸ್​ ಠಾಣೆ ವ್ಯಾಪ್ತಿಯಲ್ಲಿ ಹೋಟೆಲ್‌ ಕ್ಯಾಶಿಯರ್​ನನ್ನು ಕೊಲೆ

ಬೆಂಗಳೂರು : ನಗರದ ಪ್ರತಿಷ್ಠಿತ ಹೋಟೆಲ್​ ಕ್ಯಾಶಿಯರ್​ನನ್ನು ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆಗೈದಿರುವ ಘಟನೆ ಇಲ್ಲಿನ ಜೀವನ್ ಭೀಮಾನಗರ ಮುರುಗೇಶ್​ ಪಾಳ್ಯದಲ್ಲಿ ನಡೆದಿದೆ. ಖಾಸಗಿ ಹೋಟೆಲ್ ಅಂಡ್​ ಸರ್ವಿಸ್ ಅಪಾರ್ಟ್‌ಮೆಂಟಿನ ಕ್ಯಾಶಿಯರ್ ಸುಭಾಷ್ ಕೊಲೆಯಾದವರು ಎಂದು ಗುರುತಿಸಲಾಗಿದೆ. ಹೌಸ್ ಕೀಪಿಂಗ್ ಕೆಲಸ ಮಾಡುತ್ತಿದ್ದ ಅಭಿಷೇಕ್ ಎಂಬಾತನಿಂದ ಕೃತ್ಯ ನಡೆದಿದ್ದು, ಘಟನೆ ಬಳಿಕ ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ.

ಸುಭಾಷ್ ವಾಸವಿದ್ದ ರೂಮಿನಲ್ಲಿ ಸೋಫಾ ಮೇಲೆ ಮಲಗಿದ್ದಾಗ ಆತನಿಗೆ ಚಾಕುವಿನಿಂದ ಇರಿದು ಹತ್ಯೆಗೈಯಲಾಗಿದೆ. ಬೆಳಗ್ಗೆ 6:30ರ ಸುಮಾರಿಗೆ ನವೀನ್ ಎಂಬುವವರು ಬಂದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ತಕ್ಷಣ ಎಸಿಪಿ ರಾಮಚಂದ್ರ ಹಾಗೂ ಇನ್ಸ್‌ಪೆಕ್ಟರ್ ರಾಜಣ್ಣ ನೇತೃತ್ವದ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸದಾಗ ಕೊಲೆಗೈದ ನಂತರ ಕ್ಯಾಶ್ ಡ್ರಾಯರ್​ನಲ್ಲಿದ್ದ ಸ್ವಲ್ಪ ಹಣವನ್ನ ತೆಗೆದುಕೊಂಡು, ಸಿಸಿಟಿವಿ ಕ್ಯಾಮರಾಗೆ ಹಾನಿಪಡಿಸಿ ಆರೋಪಿ ಪರಾರಿಯಾಗಿರುವುದು ಪತ್ತೆಯಾಗಿದೆ.

ಇನ್ನು, ಈ ಪ್ರಕರಣ ಸಂಬಂಧ ಪೂರ್ವ ವಿಭಾಗದ ಡಿಸಿಪಿ ಡಾ. ಭೀಮಾಶಂಕರ ಗುಳೇದ್ ಅವರು ಮಾಧ್ಯಮಗಳೊಂದಿಗೆ ಮಾತನಾಡಿ, ಬೆಳಗ್ಗೆ ನವೀನ್​ ಎಂಬುವವರು ಬಂದು ನಮ್ಮ ಹೋಟೆಲ್​ನಲ್ಲಿ ಕ್ಯಾಶಿಯರ್ ಯಾರೋ ಕೊಲೆ ಮಾಡಿದ್ದಾರೆ ಎಂದು ಮಾಹಿತಿ ನೀಡಿದರು. ಬಳಿಕ ನಮ್ಮ ಪೊಲೀಸ್​ ಅಧಿಕಾರಿಗಳು ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಮೇಲ್ನೋಟಕ್ಕೆ ದರೋಡೆಗಾಗಿ ಹತ್ಯೆ ನಡೆದಿರುವಂತೆ ಕಂಡು ಬರುತ್ತದೆ.

ಜೀವನ್ ಭೀಮಾನಗರ ಪೊಲೀಸ್​ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಿಸಿಲಾಗಿದ್ದು, ಪ್ರಾಥಮಿಕ ತನಿಖೆಯಲ್ಲಿ ಹೋಟೆಲ್​ನಲ್ಲಿ ಹೌಸ್ ಕೀಪಿಂಗ್ ಕೆಲಸ ಮಾಡುತ್ತಿದ್ದ ಅಭಿಷೇಕ್ ಕೊಲೆ ಮಾಡಿರುವುದು ಎಂದು ತಿಳಿದು ಬಂದಿದೆ. ಸದ್ಯ ತಲೆಮರೆಸಿಕೊಂಡಿರುವ ಆರೋಪಿ ಬಂಧನಕ್ಕೆ ವಿಶೇಷ ತಂಡವನ್ನು ರಚನೆ ಮಾಡಲಾಗಿದೆ. ಅದಷ್ಟು ಬೇಗ ಆರೋಪಿಯನ್ನು ಬಂಧಿಸುವುದಾಗಿ ತಿಳಿಸಿದರು.

ತಂದೆಯನ್ನೇ ಕೊಂದ ಮಗ : ರಾಯಚೂರು ತಾಲೂಕಿನ ವಡ್ಲೂರು ಗ್ರಾಮದಲ್ಲಿ ಹಣದ ವಿಚಾರವಾಗಿ ಗಲಾಟೆ ನಡೆದು ಮಗನೇ ತಂದೆಯನ್ನು ಕೊಲೆ ಮಾಡಿ ಹೂತಿಟ್ಟಿರುವ ಘಟನೆ ನಡೆದಿದ್ದು, ನಿನ್ನೆ ಬೆಳಕಿಗೆ ಬಂದಿದೆ. ಶಿವನಪ್ಪ(65) ಮಗನಿಂದ ಕೊಲೆಯಾಗಿರುವ ತಂದೆ ಎಂದು ತಿಳಿದುಬಂದಿದೆ. 35 ವರ್ಷದ ಮಗ ಈರಣ್ಣ ಕೊಲೆ ಮಾಡಿರುವ ಆರೋಪಿ. ಜುಲೈ 07ರಂದು ಕೊಲೆ ಮಾಡಿ, ವಡ್ಲೂರು ಕ್ರಾಸ್​ನ ಹತ್ತಿರ ಹೊಸದಾಗಿ ನಿರ್ಮಾಣ ಮಾಡುತ್ತಿರುವ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಹೂತಿಟ್ಟಿದ್ದ ಆರೋಪಿ ಬಳಿಕ ತಾನೇ ಸ್ವತಃ ತಂದೆ ಕಾಣೆಯಾಗಿರುವ ಕುರಿತು ರಾಯಚೂರು ಗ್ರಾಮೀಣ ಪೊಲೀಸ್ ಠಾಣೆಗೆ ದೂರು ನೀಡಿದ್ದನು. ಇದೀಗಾ ಪ್ರಕರಣ ಭೇದಿಸಿರುವ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.

ಮಗನಿಗೆ ಬೆಂಕಿ ಹಚ್ಚಿ ಕೊಲೆ ಮಾಡಿದ ತಾಯಿ: ಇನ್ನೊಂದೆಡೆ ಮದ್ಯಪಾನ ಚಟಕ್ಕೆ ದಾಸನಾಗಿದ್ದ ಮಗನನ್ನ ತಾಯಿಯೊಬ್ಬಳು ಪೆಟ್ರೋಲ್ ಎರಚಿ ಸುಟ್ಟು ಹಾಕಿರುವ ಘಟನೆ ಜುಲೈ 18 ರ ಸೋಮವಾರ ಸಂಜೆ ಸೋಲದೇವನಹಳ್ಳಿ‌ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿತ್ತು. ಚಾಂದ್ ಪಾಷಾ (40) ಕೊಲೆಯಾದ ವ್ಯಕ್ತಿ ಎಂಬುದು ತಿಳಿದುಬಂದಿತ್ತು. ಆತನ ತಾಯಿ‌ ಸೋಫಿಯಾಳನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಇದನ್ನೂ ಓದಿ : ಎರಡನೇ ಮಗನ‌ ಮದುವೆಗಾಗಿ ಮಾನಸಿಕ ಅಸ್ವಸ್ಥ ಹಿರಿಯ ಮಗನ‌ ಕೊಂದ ತಂದೆ!

Last Updated : Jul 20, 2023, 7:59 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.