ETV Bharat / state

ಬೆಂಗಳೂರು: ATM ಯಂತ್ರದಿಂದ 24 ಲಕ್ಷ ರೂಪಾಯಿ ದೋಚಿದ್ದ ನಾಲ್ವರು ಆರೋಪಿಗಳ ಬಂಧನ - ಬೆಂಗಳೂರು

ಜುಲೈ 5ರಂದು ಪರಪ್ಪನ ಅಗ್ರಹಾರ ವ್ಯಾಪ್ತಿಯಲ್ಲಿರುವ ಐಸಿಐಸಿಐ ಬ್ಯಾಂಕ್‌ನ ಎಟಿಎಂ ಯಂತ್ರದಿಂದ ದುಷ್ಕರ್ಮಿಗಳು 24 ಲಕ್ಷ ರೂ. ದೋಚಿದ್ದರು.

Four  held for robbing in ATM
ಬಂಧಿತ ಆರೋಪಿಗಳು
author img

By

Published : Jul 16, 2023, 12:54 PM IST

ಎಟಿಎಂ ದರೋಡೆ: ಡಿಸಿಪಿ ಸಿ.ಕೆ.ಬಾಬಾ ಮಾಹಿತಿ ನೀಡಿರುವುದು..

ಬೆಂಗಳೂರು: ಎಟಿಎಂ ಯಂತ್ರದಿಂದ ಹಣ ದೋಚಿ ಪರಾರಿಯಾಗಿದ್ದ ಆರೋಪದಡಿ ಕಸ್ಟೋಡಿಯನ್ ಸಿಬ್ಬಂದಿ ಸಹಿತ ನಾಲ್ವರು ಆರೋಪಿಗಳನ್ನು ಪರಪ್ಪನ ಅಗ್ರಹಾರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಸಿಎಂಎಸ್ ಕಸ್ಟೋಡಿಯನ್ ಕಂಪನಿ ಸಿಬ್ಬಂದಿ ಅರುಳ್, ಆತನ ಸಹಚರರಾದ ನದೀಂ, ಮಹೇಶ್ ಹಾಗೂ ಶ್ರೀರಾಮ್ ಬಂಧಿತ ಆರೋಪಿಗಳು.

ಪ್ರಕರಣದ ವಿವರ: ಜುಲೈ 5ರಂದು ಪರಪ್ಪನ ಅಗ್ರಹಾರ ವ್ಯಾಪ್ತಿಯಲ್ಲಿರುವ ಐಸಿಐಸಿಐ ಬ್ಯಾಂಕ್‌ನ ಎಟಿಎಂ ಯಂತ್ರದಿಂದ 24 ಲಕ್ಷ ರೂ.ದೋಚಲಾಗಿತ್ತು. ಜು.5ನೇ ತಾರೀಕು ಸಿಎಂಎಸ್ ಕಂಪನಿಯ ಕಸ್ಟೋಡಿಯನ್ ಸಿಬ್ಬಂದಿ ಐಸಿಐಸಿಐ ಬ್ಯಾಂಕ್ ಎಟಿಎಂ ಯಂತ್ರಕ್ಕೆ ಹಣ ತುಂಬಿಸಿದ್ದರು. ಕಸ್ಟೋಡಿಯನ್ ಸಿಬ್ಬಂದಿ ತೆರಳಿದ್ದ ಕೆಲವೇ ನಿಮಿಷದಲ್ಲಿ ಎಟಿಎಂನಲ್ಲಿದ್ದ 24 ಲಕ್ಷ ರೂ. ಕಳ್ಳತನವಾಗಿತ್ತು.

ಹೆಲ್ಮೆಟ್ ಧರಿಸಿ ಬಂದಿದ್ದ ಕಳ್ಳರು ಸಲೀಸಾಗಿ ಎಟಿಎಂನ ಸೇಫ್ಟಿ ಡೋರ್ ತೆರೆದು ಹಣ ಕಳ್ಳತನ ಮಾಡಿದ್ದರು. ಕಸ್ಟೋಡಿಯನ್ ಕಂಪನಿ ವತಿಯಿಂದ ಹಣ ತುಂಬಿಸಲು ಬಂದಿದ್ದ ಅರುಳ್, ಉದ್ದೇಶಪೂರ್ವಕವಾಗಿಯೇ ಸೇಫ್ಟಿ ಡೋರ್ ಸರಿಯಾಗಿ ಕ್ಲೋಸ್ ಮಾಡದೇ ತೆರಳಿದ್ದ. ಬಳಿಕ ಈ ಮಾಹಿತಿಯನ್ನು ತನ್ನ ತಂಡಕ್ಕೆ ತಿಳಿಸಿದ್ದಾನೆ. ನಂತರ ಸ್ಥಳಕ್ಕೆ ಬಂದಿದ್ದ ನದೀಂ, ಮಹೇಶ್ ಹಾಗೂ ಶ್ರೀರಾಮ್ ಎಟಿಎಂನಲ್ಲಿದ್ದ ಹಣ ದೋಚಿ ಪರಾರಿಯಾಗಿದ್ದರು. ಕಳ್ಳತನದ ಕೃತ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿತ್ತು.

ಕಸ್ಟೋಡಿಯನ್ ಕಂಪನಿ ಸಿಬ್ಬಂದಿಯ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಹೊರ ರಾಜ್ಯಗಳಿಗೆ ತೆರಳಿ ಆರೋಪಿಗಳನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಆಗ್ನೇಯ ವಿಭಾಗದ ಡಿಸಿಪಿ ಸಿ.ಕೆ.ಬಾಬಾ ಮಾಹಿತಿ ನೀಡಿದ್ದಾರೆ.

ಎಟಿಎಂ ಯಂತ್ರದಿಂದ ಹಣ ದೋಚಿದ ಕಳ್ಳರು: ಇತ್ತೀಚೆಗೆ ತುಮಕೂರು ಎಸ್​ಪಿ ಕಚೇರಿ ಪಕ್ಕದಲ್ಲಿನ ಬ್ಯಾಂಕ್ ಆಫ್ ಇಂಡಿಯಾ ಶಾಖೆಗೆ ಸೇರಿದ ಎಟಿಎಂ ಯಂತ್ರದಿಂದ ಕಳ್ಳರು ಹಣ ದೋಚಿದ್ದರು. ಕಳ್ಳರು ಸುಮಾರು 2,90,000 ನಗದು ದೋಚಿ ಪರಾರಿಯಾಗಿದ್ದರು. ಎಟಿಎಂ ಯಂತ್ರವನ್ನು ಗ್ಯಾಸ್ ಕಟರ್ ಬಳಸಿ ತುಂಡರಿಸಿದ್ದರು. ಘಟನಾ ಸ್ಥಳಕ್ಕೆ ಡಿವೈಎಸ್ಪಿ ಶ್ರೀನಿವಾಸ್ ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಬ್ಯಾಂಕ್‌ನ ಸಿಸಿಟಿವಿ ಕ್ಯಾಮರಾದಲ್ಲಿ ಕೃತ್ಯ ಸೆರೆಯಾಗಿತ್ತು. ಈ ಬಗ್ಗೆ ಎನ್ಎಪಿಎಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಇದನ್ನೂ ಓದಿ: ತುಮಕೂರು ಎಸ್​ಪಿ ಕಚೇರಿ ಪಕ್ಕದ ಎಟಿಎಂ ಯಂತ್ರದಿಂದ ಹಣ ದೋಚಿದ ಕಳ್ಳರು!

52 ಸಾವಿರ ರೂ. ದೋಚಿದ ವ್ಯಕ್ತಿ: ಗ್ರಾಹಕರೊಬ್ಬರು 52 ಸಾವಿರ ಹಣ ಎಟಿಎಂ ಡಿಪಾಸಿಟ್ ಮಿಷನ್​ಗೆ ಹಾಕಿ, ಮಾಹಿತಿ ಭರ್ತಿ ಮಾಡಿ, ಬಟನ್ ಒತ್ತುವುದನ್ನು ಮರೆತು ಹೋಗಿದ್ದರು. ಅದೇ ವೇಳೆಗೆ ಹಣ ಡ್ರಾ ಮಾಡಲು ಬಂದ ವ್ಯಕ್ತಿಯೊಬ್ಬರಿಗೆ ಹಣ ಇರೋದು ಗೊತ್ತಾಗಿ, ತಕ್ಷಣ ಆತ 52 ಸಾವಿರ ದೋಚಿ ಪರಾರಿಯಾಗಿರುವ ಘಟನೆ ಇತ್ತೀಚೆಗೆ ದಾವಣಗೆರೆ ಪಿ.ಬಿ. ರಸ್ತೆಯ ರಿಲಯನ್ಸ್ ಮಾರ್ಟ್ ಎದುರಿನ ಐಸಿಐಸಿಐ ಬ್ಯಾಂಕ್​ನಲ್ಲಿ ನಡೆದಿತ್ತು.

ಇದನ್ನೂ ಓದಿ: ಡಿಪಾಸಿಟ್ ಬಟನ್ ಒತ್ತದ ಕಾರಣ ಮಿಷನ್​ನಲ್ಲೇ ಉಳಿದಿದ್ದ 52 ಸಾವಿರ ರೂ. ದೋಚಿದ ವ್ಯಕ್ತಿ : ಸಿಸಿಟಿವಿ ವಿಡಿಯೋ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.