ETV Bharat / state

ಮಾದಕ ವಸ್ತು ದಂಧೆ: ಜಾರ್ಖಂಡ್‌ನ ಮೂವರು ಮಹಿಳೆಯರು ಬೆಂಗಳೂರಿನಲ್ಲಿ ಸೆರೆ

ಜಾರ್ಖಂಡ್​ನ ಗುಡ್ಡಗಾಡು ಪ್ರದೇಶದಲ್ಲಿ ಗಾಂಜಾ ಬೆಳೆಯುತ್ತಿದ್ದ ಆರೋಪಿಗಳು ಅಕ್ರಮವಾಗಿ ರೈಲಿನ ಮುಖಾಂತರ ಬೆಂಗಳೂರಿಗೆ ತರುತ್ತಿದ್ದರು.

Three women arrested
ಮಾದಕ ವಸ್ತು ಮಾರಾಟ: ಮೂವರು ಮಹಿಳೆಯರ ಬಂಧನ
author img

By

Published : Jun 5, 2023, 10:55 PM IST

ಬೆಂಗಳೂರು: ಮನೆ ಮಾಲೀಕರ ಕುಮ್ಮಕ್ಕಿನಿಂದ ಉತ್ತರ ಭಾರತದಿಂದ‌ ನಗರಕ್ಕೆ‌ ಅವ್ಯಾಹತವಾಗಿ ಡ್ರಗ್ಸ್ ತರಿಸಿಕೊಂಡು ಮಾರಾಟ ಮಾಡುತ್ತಿದ್ದ ಮನೆಯೊಡತಿ ಸೇರಿ ಮೂವರು ಮಹಿಳೆಯರನ್ನು ಪುಲಕೇಶಿನಗರ ಪೊಲೀಸರು ಬಂಧಿಸಿದ್ದಾರೆ. ಜಾರ್ಖಂಡ್ ಮೂಲದ ಪ್ರೇಮ, ಸುನಿತಾ ಹಾಗೂ ಮನೆಯೊಡತಿ ಮುತ್ಯಾಲಮ್ಮ ಬಂಧಿತರು.

ಇವರು ಜೀವನಹಳ್ಳಿಯ ನಿವಾಸಿಯಾಗಿರುವ ಮುತ್ಯಾಲಮ್ಮ ಮನೆಯಲ್ಲಿ ಪ್ರೇಮ್ ಹಾಗೂ ಸುನಿತಾ ಅವರು ಬಾಡಿಗೆಗೆ ಇದ್ದರು. ಜಾರ್ಖಂಡ್​ನ ಗುಡ್ಡಗಾಡು ಪ್ರದೇಶದಲ್ಲಿಇವರು ಗಾಂಜಾ ಬೆಳೆಯುತ್ತಿದ್ದರು. ಸಣ್ಣ ಸಣ್ಣ ಪೊಟ್ಟಣಗಳಲ್ಲಿ ಗಾಂಜಾ ಇಟ್ಟು ಪುಲಕೇಶಿ ನಗರದ ಸುತ್ತಮುತ್ತಲಿನ ಗ್ರಾಹಕರಿಗೆ ಮಾರಾಟ ಮಾಡುತ್ತಿದ್ದರು. ಒಂದು ಗ್ರಾಂಗೆ 500 ರೂಪಾಯಿವರೆಗೂ ಹಣ ಸಂಪಾದನೆ ಮಾಡುತ್ತಿದ್ದರು.

ಇದನ್ನೂ ಓದಿ: ವಿವಾಹೇತರ ಸಂಬಂಧದ ಅನುಮಾನ.. ಬಾಳು ನೀಡಿದ ಪತಿಯಿಂದಲೇ ಚಾಕುವಿನಿಂದ ಇರಿದು ಪತ್ನಿಯ ಹತ್ಯೆ!

ಜೀವನಹಳ್ಳಿಯಲ್ಲಿ ಹಲವು ವರ್ಷಗಳಿಂದ ವಾಸವಾಗಿದ್ದ ಮುತ್ಯಾಲಮ್ಮ ಸಹ ಮಹಿಳಾ ಆರೋಪಿಗಳಿಗೆ ಬಾಡಿಗೆ ನೀಡಿದ್ದರು. ಇವರು ಮಾಡುತ್ತಿದ್ದ ಗಾಂಜಾ ದಂಧೆಗೆ ಮಾಲಕಿ ಸಾಥ್ ನೀಡುತ್ತಿದ್ದಳು. ಹೀಗಾಗಿ ಬಾಡಿಗೆ ಪಡೆಯದೇ ಮನೆಯನ್ನು ಉಚಿತವಾಗಿ ನೀಡಿದ್ದಳು. ಮಾದಕ ವಸ್ತು ಮಾರಾಟದಿಂದ ಬಂದ ಅಕ್ರಮ ಹಣದಲ್ಲಿ ಪಾಲು ಪಡೆಯುತ್ತಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.
ಮುತ್ಯಾಲಮ್ಮ ಹಲವು ವರ್ಷಗಳಿಂದ ಮಾದಕ ವ್ಯಸ್ಯನ ಮಾರಾಟ ಜಾಲದಲ್ಲಿ ತೊಡಗಿಸಿಕೊಂಡಿದ್ದಳು.

ಇದನ್ನೂ ಓದಿ: ಮಂಡ್ಯದಲ್ಲಿ ಕಿಡ್ಯ್ನಾಪ್ & ಮರ್ಡರ್: ತಮ್ಮನ ಬದಲು ಅಣ್ಣನ ಕೊಂದು ಸುಟ್ಟು ಹಾಕಿದ್ರು!

ದಂಧೆಯಲ್ಲಿ ತಾಯಿ-ಮಗ ಭಾಗಿ: ಈಕೆಯ ಮಗ ಸಹ ಡ್ರಗ್ಸ್ ದಂಧೆಯಲ್ಲಿ ಭಾಗಿಯಾಗಿದ್ದ. ತಾಯಿಯ ಕುಮ್ಮಕ್ಕಿನಿಂದ ಚಿಕ್ಕ ವಯಸ್ಸಿನಲ್ಲೇ ಮಾರಾಟ ಜಾಲದಲ್ಲಿ ತೊಡಗಿಸಿಕೊಂಡಿದ್ದ.‌ ಹಲವು ಬಾರಿ ಈತನನ್ನು ವಶಕ್ಕೆ ಪಡೆದು ಬಾಲಮಂದಿರಕ್ಕೆ ಕಳುಹಿಸಿದ್ದರು‌. ಅಲ್ಲಿಯೂ ವಾರ್ಡನ್ ಮೇಲೆ‌ ಹಲ್ಲೆ ನಡೆಸಿದ್ದ. ಇತ್ತೀಚೆಗೆ ಎನ್ ಡಿಪಿಎಸ್ ಪ್ರಕರಣದಲ್ಲಿ ದರ್ಶನ್‌ನನ್ನು ಬಂಧಿಸಿದ್ದರು. ಇದೀಗ ಆತ‌‌ನ ತಾಯಿಯನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.

ಕೋಟ್ಯಂತರ ರೂ. ಮೌಲ್ಯದ ಚಿನ್ನ ವಶಕ್ಕೆ: ಡೈರೆಕ್ಟರೇಟ್ ಆಫ್ ರೆವಿನ್ಯೂ ಇಂಟೆಲಿಜೆನ್ಸ್ (ಡಿಆರ್‌ಐ) ಎರಡು ಪ್ರತ್ಯೇಕ ಕೇಸ್​ಗಳಲ್ಲಿ 6.2 ಕೋಟಿ ರೂಪಾಯಿ ಮೌಲ್ಯದ 10 ಕೆಜಿ ಚಿನ್ನವನ್ನು ಮುಂಬೈ ವಿಮಾನ ನಿಲ್ದಾಣದಲ್ಲಿ ಭಾನುವಾರ ವಶಕ್ಕೆ ಪಡೆದುಕೊಳ್ಳಲಾಗಿದೆ. ಈ ಎರಡೂ ಪ್ರಕರಣಗಳಲ್ಲಿ ಒಟ್ಟು ನಾಲ್ವರು ಆರೋಪಿಗಳನ್ನು ಅರೆಸ್ಟ್​ ಮಾಡಲಾಗಿದೆ. ಮೊದಲ ಕೇಸ್​ನಲ್ಲಿ ದುಬೈನಿಂದ ಬಂದ ಭಾರತೀಯ ಪ್ರಜೆಯನ್ನು ಮುಂಬೈ ವಿಮಾನ ನಿಲ್ದಾಣದಲ್ಲಿ ಪರಿಶೀಲನೆ ನಡೆಸಲಾಯಿತು. ಈ ವೇಳೆ, ಪ್ರಯಾಣಿಕರ ಸಾಮಾನು ಸರಂಜಾಮುಗಳನ್ನು ಚೆಕ್​ ಮಾಡಲಾಯಿತು. 56 ಮಹಿಳೆಯರ ಪರ್ಸ್‌ಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಪರ್ಸ್​ಗಳಲ್ಲಿ 24 ಕ್ಯಾರೆಟ್ ಚಿನ್ನ ಹಾಗೂ ಬೆಳ್ಳಿ ಬಣ್ಣದ ಲೋಹದ ತಂತಿ ಸಿಕ್ಕಿದೆ. ವಶಕ್ಕೆ ತೆಗೆದುಕೊಂಡ ಚಿನ್ನದ ತಂತಿಯ ನಿವ್ವಳ ತೂಕ 2,005 ಗ್ರಾಂ ಇದೆ. ಅದರ ಮೌಲ್ಯ ಸುಮಾರು 1,23,80,875 ಎಂದು ಅಂದಾಜಿಸಲಾಗಿದೆ.

ಮತ್ತೊಂದು ಪ್ರಕರಣದಲ್ಲಿ ಗೌಪ್ಯ ಮಾಹಿತಿ ಮೇರೆಗೆ ಶಾರ್ಜಾದಿಂದ ಮುಂಬೈಗೆ ತೆರಳುತ್ತಿದ್ದ ಇಬ್ಬರು ಪ್ರಯಾಣಿಕರನ್ನು ಏರ್ ಇಂಡಿಯಾ ಎಕ್ಸ್‌ಪ್ರೆಸ್ ಫ್ಲೈಟ್ ನಂ. ಐಎಕ್ಸ್ 252ರಲ್ಲಿ ಸೆರೆ ಹಿಡಿಯಲಾಗಿದೆ. ಇವರು ತಪಾಸಣೆ ನಡೆಸಿದ ಬಳಿಕ 24 ಕ್ಯಾರೆಟ್‌ನ 8 ಚಿನ್ನದ ತುಂಡುಗಳನ್ನು ಅವರ ಸೊಂಟದ ಸುತ್ತ ಬಚ್ಚಿಟ್ಟುಕೊಂಡಿರುವುದು ಸಿಕ್ಕಿದೆ. ತನಿಖೆ ಸಂದರ್ಭದಲ್ಲಿ 4.94 ಕೋಟಿ ಮೌಲ್ಯದ 8 ಕೆಜಿ ತೂಕದ ಚಿನ್ನ ವಶಕ್ಕೆ ತೆಗೆದುಕೊಳ್ಳಲಾಗಿದೆ. ಈ ಪ್ರಕರಣದಲ್ಲಿ ಮತ್ತೊಬ್ಬ ಸಹ ಪ್ರಯಾಣಿಕನನ್ನು ಅರೆಸ್ಟ್​ ಮಾಡಲಾಗಿದೆ. ಎರಡೂ ಪ್ರಕರಣಗಳಲ್ಲಿ ಡಿಆರ್‌ಐ ಹೆಚ್ಚಿನ ತನಿಖೆ ಕೈಗೊಂಡಿದೆ.

ಇದನ್ನೂ ಓದಿ: ಹಾಡಹಗಲೇ ದರೋಡೆ : 14 ಕೋಟಿ ಮೌಲ್ಯದ ಚಿನ್ನಾಭರಣದೊಂದಿಗೆ ಖದೀಮರು ಪರಾರಿ

ಇದನ್ನೂ ಓದಿ: ಯುವಕನಿಗೆ ಮನಸೋಇಚ್ಛೆ ಚಾಕು ಇರಿದು ಹತ್ಯೆ: ದೆಹಲಿಯಲ್ಲಿ ಮರುಕಳಿಸಿದ ದುಷ್ಕೃತ್ಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.