ETV Bharat / state

Double Murder : ಬೆಂಗಳೂರಿನಲ್ಲಿ ಜೋಡಿ ಕೊಲೆ.. ಹೆಂಡತಿ, ಮಗನ ಕೊಂದು ಪರಾರಿಯಾದ ಪತಿ ಶಂಕೆ

ಬೆಂಗಳೂರಿನಲ್ಲಿ ಜೋಡಿ ಹತ್ಯೆ ಕೇಸ್​ ನಡೆದಿದೆ. ಗಂಡನೇ ಪತ್ನಿ ಮತ್ತು ಮಗುವನ್ನು ಕೊಲೆ ಮಾಡಿ ಪರಾರಿಯಾಗಿರುವುದಾಗಿ ಪೊಲೀಸರು ಶಂಕಿಸಿದ್ದಾರೆ.

ಬೆಂಗಳೂರಿನಲ್ಲಿ ಜೋಡಿ ಹತ್ಯೆ
ಬೆಂಗಳೂರಿನಲ್ಲಿ ಜೋಡಿ ಹತ್ಯೆ
author img

By ETV Bharat Karnataka Team

Published : Sep 6, 2023, 1:53 PM IST

Updated : Sep 6, 2023, 4:50 PM IST

ಕೊಲೆ ಪ್ರಕರಣದ ಬಗ್ಗೆ ಉತ್ತರ ವಿಭಾಗದ ಡಿಸಿಪಿ ಮಾಹಿತಿ

ಬೆಂಗಳೂರು: ನಗರದಲ್ಲಿ ಭಯಾನಕ ಜೋಡಿ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ. ಗಂಡನೇ ತನ್ನ ಹೆಂಡತಿ ಹಾಗೂ ಮಗನನ್ನು ಹತ್ಯೆ ಮಾಡಿ ಪರಾರಿಯಾಗಿರುವುದಾಗಿ ಪೊಲೀಸರು ಶಂಕಿಸಿದ್ದಾರೆ. ಈ ಬಗ್ಗೆ ಬಗಲಗುಂಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೊಲೆಗೆ ಸದ್ಯಕ್ಕೆ ಕಾರಣ ತಿಳಿದು ಬಂದಿಲ್ಲ. ಈ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಬಗಲಗುಂಟೆ ಠಾಣಾ ವ್ಯಾಪ್ತಿಯ ರವೀಂದ್ರನಾಥ ಗುಡ್ಡೆಯಲ್ಲಿ ಮಂಗಳವಾರ ರಾತ್ರಿ ಈ ಜೋಡಿ ಹತ್ಯೆ ನಡೆದಿದೆ. ನವನೀತಾ (35) ಹಾಗೂ ಪುತ್ರ ಸಾಯಿ ಸೃಜನ್ (8) ಕೊಲೆಯಾದವರು. ಚಂದ್ರು (38) ಪತ್ನಿಗೆ ಚಾಕುವಿನಲ್ಲಿ ಇರಿದು, ಮಗುವನ್ನು ಉಸಿರುಗಟ್ಟಿಸಿ ಹತ್ಯೆ ಮಾಡಿರುವ ಆರೋಪಿ ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.

ಕಾಲ್ ಸೆಂಟರ್ ಉದ್ಯೋಗಿಯಾಗಿದ್ದ ನವನೀತಾ ಕಳೆದ 2 ವರ್ಷಗಳಿಂದ ಪತಿಯಿಂದ ದೂರಾಗಿ ಮಗನೊಂದಿಗೆ ಬೇರೆ ಮನೆಯಲ್ಲಿ ವಾಸಿಸುತ್ತಿದ್ದರು. ದೂರವಾಗಿದ್ದ ಪತ್ನಿಯ ಮನೆಗೆ ಮಂಗಳವಾರ ರಾತ್ರಿ ನುಗ್ಗಿರುವ ಆರೋಪಿ ಚಂದ್ರು ಪತ್ನಿಯನ್ನು ಚಾಕುವಿನಿಂದ ಇರಿದು ಕೊಂದಿದ್ದಾನೆ. ಬಳಿಕ ಪುತ್ರ ಸೃಜನ್​ನನ್ನು ಉಸಿರುಗಟ್ಟಿಸಿ ಹತ್ಯೆ ಮಾಡಿ ಪರಾರಿಯಾಗಿದ್ದಾನೆ‌.

ರಾತ್ರಿ 12 ಗಂಟೆಗೆ ಹೊತ್ತಿನಲ್ಲಿ ಸಾವನ್ನಪ್ಪಿದ ಮಹಿಳೆಯ ತಾಯಿ ಪೊಲೀಸ್ ಸಹಾಯವಾಣಿಗೆ ಕೊಲೆಯಾದ ಬಗ್ಗೆ ಮಾಹಿತಿ ನೀಡಿದ್ದಾರೆ. ಇದರ ಆಧಾರದ ಮೇಲೆ ಸ್ಥಳಕ್ಕಾಗಮಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಶಯನಗೃಹದಲ್ಲಿ ಸಿಕ್ಕ ಮೃತದೇಹಗಳನ್ನು ವಶಕ್ಕೆ ಪಡೆದಿದ್ದಾರೆ. ಮೃತಳ ತಾಯಿ ನೀಡಿರುವ ದೂರಿನನ್ವಯ ಹತ್ಯೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಆರೋಪಿಯ ಪತ್ತೆಗಾಗಿ ವಿಶೇಷ ತಂಡ ರಚಿಸಲಾಗಿದೆ ಎಂದು ಉತ್ತರ ವಿಭಾಗದ ಡಿಸಿಪಿ ಶಿವಪ್ರಕಾಶ್ ದೇವರಾಜು ಮಾಹಿತಿ ನೀಡಿದ್ದಾರೆ.

ಟಿಬೆಟಿಯನ್​ ವ್ಯಕ್ತಿ ಕೊಲೆ: ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನ ಟಿಬೆಟಿಯನ್ ಕ್ಯಾಂಪ್ ನಂಬರ್​ 4ರಲ್ಲಿ ಟಿಬೆಟಿಯನ್ ವ್ಯಕ್ತಿಯೊಬ್ಬನನ್ನು ಕೊಲೆ ಮಾಡಲಾಗಿದೆ. ಇಬ್ಬರು ಟಿಬೆಟಿಯನ್ನರ ನಡುವೆ ಇಂದು (ಬುಧವಾರ) ಬೆಳಗ್ಗೆ ಜಗಳ ನಡೆದಿದ್ದು, ಒಬ್ಬರಿಗೊಬ್ಬರು ಪರಸ್ಪರ ಚಾಕುವಿನಿಂದ ಇರಿದುಕೊಂಡಿದ್ದಾರೆ. ಒಬ್ಬ ಸ್ಥಳದಲ್ಲೇ ಮೃತಪಟ್ಟರೆ, ಮತ್ತೊಬ್ಬ ಗಂಭೀರ ಗಾಯಗೊಂಡು ಆಸ್ಪತ್ರೆ ಸೇರಿದ್ದಾನೆ.

ಮೃತನನ್ನು ಜಮ್ಯಾಂಗ್ ಲಾಕ್ಪಾ (43) ಕ್ಯಾಂಪ್ ನಂಬರ್ 4ರ ಟಿಬೇಟಿಯನ್ ವ್ಯಕ್ತಿ ಎಂದು ಗುರುತಿಸಲಾಗಿದೆ. ಗೊಂಪಾ ಚೋಡೇಕ್ ಗಂಭೀರ ಗಾಯಗೊಂಡ ಮಾಜಿ ಸೈನಿಕನಾಗಿದ್ದು, ಈತನೂ ಸಹ 4 ನಂಬರ್ ಕ್ಯಾಂಪನಲ್ಲಿ ವಾಸಿಸುತ್ತಿದ್ದ. ಬುಧವಾರ ಬೆಳಗಿನ ಜಾವದಲ್ಲಿ ಇಬ್ಬರ ಮಧ್ಯೆ ಯಾವುದೋ ಕಾರಣಕ್ಕಾಗಿ ಕಿತ್ತಾಟ ನಡೆದಿ ಚಾಕುವಿನಿಂದ ಇರಿದುಕೊಂಡಿದ್ದಾರೆ.

ಇದನ್ನೂ ಓದಿ: Accident: ಟ್ರಕ್- ಕಾರು ನಡುವೆ ಮುಖಾಮುಖಿ ಡಿಕ್ಕಿ.. 7 ಜನರು ಸಾವು, 12 ಮಂದಿಗೆ ಗಾಯ

Last Updated : Sep 6, 2023, 4:50 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.