ETV Bharat / state

ಬೆಂಗಳೂರು: ಶಾಲಾ ಬಾಲಕಿ ಮೇಲೆ ಅತ್ಯಾಚಾರ ಆರೋಪ; ಖಾಸಗಿ ಶಾಲಾ ಪ್ರಾಂಶುಪಾಲರ ಬಂಧನ - ಈಟಿವಿ ಭಾರತ್ ಕನ್ನಡ ಸುದ್ದಿ

ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರವೆಸಗಿದ ಆರೋಪದಡಿ ಖಾಸಗಿ ಶಾಲೆಯ ಪ್ರಾಂಶುಪಾಲರನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.

ವೈಟ್​ ಪೀಲ್ಟ್​ ವಿಭಾಗದ ಡಿಸಿಪಿ ಗಿರೀಶ್
ವೈಟ್​ ಪೀಲ್ಟ್​ ವಿಭಾಗದ ಡಿಸಿಪಿ ಗಿರೀಶ್
author img

By

Published : Aug 4, 2023, 3:31 PM IST

Updated : Aug 4, 2023, 4:53 PM IST

ವೈಟ್‌ಫೀಲ್ಡ್​ ವಿಭಾಗದ ಡಿಸಿಪಿ ಗಿರೀಶ್ ಮಾಹಿತಿ

ಬೆಂಗಳೂರು : ಬಾಲಕಿ ಮೇಲೆ ಅತ್ಯಾಚಾರವೆಸಗಿದ ಗಂಭೀರ ಸ್ವರೂಪದ ಆರೋಪದಡಿ ಖಾಸಗಿ ಶಾಲೆಯ ಪ್ರಾಂಶುಪಾಲರನ್ನು ವರ್ತೂರು ಠಾಣೆಯ ಪೊಲೀಸರು ಬಂಧಿಸಿದ್ದಾರೆ. 2ನೇ ತರಗತಿ ವ್ಯಾಸಂಗ ಮಾಡುತ್ತಿದ್ದ 10 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪವನ್ನು ಪ್ರಾಂಶುಪಾಲ ಎದುರಿಸುತ್ತಿದ್ದಾರೆ.

ನಡೆದಿದ್ದೇನು?: ನರ ದೌರ್ಬಲ್ಯ ಸಮಸ್ಯೆಯಿಂದ ಬಳಲುತ್ತಿದ್ದ ಬಾಲಕಿ ಎಂದಿನಂತೆ ನಿನ್ನೆ (ಗುರುವಾರ) ಬೆಳಗ್ಗೆ 8:30ಕ್ಕೆ ಶಾಲೆಗೆ ಹೋಗಿದ್ದಳು. ಪ್ರಾಂಶುಪಾಲರು ಶಾಲೆಯ ಪಕ್ಕದಲ್ಲಿಯೇ ಇದ್ದ ತನ್ನ ಮನೆಗೆ ಬಾಲಕಿಯನ್ನು ಕರೆದೊಯ್ದಿದ್ದರು. ನಂತರ ಕೇಕ್ ನೀಡಿ‌ ಕಳುಹಿಸಿದ್ದಾರೆ. ಸಂಜೆ ಬಾಲಕಿ ಮನೆಗೆ ಬಂದಿದ್ದಳು. ಈ ವೇಳೆ ಹೊಟ್ಟೆನೋವು ಎಂದು ಪೋಷಕರಿಗೆ ತಿಳಿಸಿದ್ದಾಳೆ. ಮಗಳ ಒಳಉಡುಪಿನಲ್ಲಿ ರಕ್ತಸ್ರಾವವಾಗಿರುವುದನ್ನು ಗಮನಿಸಿದ ತಾಯಿ ಕೂಡಲೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದರು. ಇದಾದ ನಂತರ ಶಾಲೆಯಲ್ಲಿ ನಡೆದಿರುವ ಘಟನೆಯನ್ನು ಬಾಲಕಿ ತಾಯಿಗೆ ವಿವರಿಸಿದ್ದಾಳೆ.

ಪೋಕ್ಸೋ ಪ್ರಕರಣ ದಾಖಲು: ವರ್ತೂರು ಠಾಣೆಯಲ್ಲಿ ಆರೋಪಿ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.

ಇದನ್ನೂ ಓದಿ: Bengaluru crime: ಗಂಡ ಹೆಂಡತಿ ಜಗಳ.. ಪತಿ ಕೈಬೆರಳು ಕಚ್ಚಿ ತಿಂದ ಎಂದು ಪೊಲೀಸ್​ ಠಾಣೆ ಮೆಟ್ಟಿಲೇರಿದ ಪತ್ನಿ!

ಡಿಸಿಪಿ ಪ್ರತಿಕ್ರಿಯೆ: "ವರ್ತೂರ್​ ಠಾಣಾ ವ್ಯಾಪ್ತಿಯ ಕಾನ್ವೆಂಟ್​ ಶಾಲೆಯ ಪ್ರಾಂಶುಪಾಲರು 10 ವರ್ಷದ ಬಾಲಕಿಯನ್ನು ಶಾಲೆಯ ಪಕ್ಕದಲ್ಲೇ ಇದ್ದ ತನ್ನ ಮನೆಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾರೆ. ಘಟನೆಯನ್ನು ಸಂಜೆ 4:30ಕ್ಕೆ ಮನೆಗೆ ಹಿಂತಿರುಗಿದ ಮಗು ತಾಯಿಯ ಮುಂದೆ ಹೇಳಿಕೊಂಡಿದೆ. ತಾಯಿ ಮಗುವನ್ನು ಆಸ್ಪತ್ರೆಗೆ ಸೇರಿಸಿದ್ದಾರೆ. ನಂತರ ನಮಗೆ ಮಾಹಿತಿ ಬಂತು. ನಾವು ವಿಚಾರಣೆ ಮಾಡಿದಾಗ ಬಾಲಕಿ ಹೇಳುತ್ತಿರುವುದು ನಿಜವೆಂದು ತಿಳಿಯಿತು. ಪ್ರಾಂಶುಪಾಲರನ್ನು ಬಂಧಿಸಿದ್ದೇವೆ" ಎಂದು ವೈಟ್​ ಫೀಲ್ಡ್‌​ ವಿಭಾಗದ ಡಿಸಿಪಿ ಗಿರೀಶ್ ತಿಳಿಸಿದರು.

ಇದನ್ನೂ ಓದಿ: PubG ಗೇಮ್​ ಸಹವಾಸ: ಮದ್ಯ ಮಿಶ್ರಿತ ಕೂಲ್ ಡ್ರಿಂಕ್ಸ್​ ಕೊಟ್ಟು ವಿವಾಹಿತ ಮಹಿಳೆ ಮೇಲೆ ರೇಪ್.. ನಗ್ನ ವಿಡಿಯೋ ಇಟ್ಟುಕೊಂಡು ಬೆದರಿಕೆ

ಅತ್ಯಾಚಾರ ಆರೋಪ: ಡ್ಯಾನ್ಸ್ ಮಾಸ್ಟರ್ ಸೇರಿ ಮೂವರ ಬಂಧನ

Last Updated : Aug 4, 2023, 4:53 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.