ETV Bharat / state

ನಮ್ಮ ಮೆಟ್ರೋ ಹಳಿಯಲ್ಲಿ ಬಿರುಕು; ತ್ವರಿತ ಕಾಮಗಾರಿಯಿಂದ ಆತಂಕ ದೂರ - ಕಬ್ಬಿಣದ ಪಿಲ್ಲರ್​ ಕುಸಿದು ತಾಯಿ ಮಗ ಸಾವನ್ನಪಿದ ಘಟನೆ

ನಮ್ಮ ಮೆಟ್ರೋ ಹಳಿಯಲ್ಲಿ ಬಿರುಕು ಕಂಡು ಬಂದಿದ್ದು, ಎಚ್ಚೆತ್ತುಕೊಂಡ ಬಿಎಂಆರ್‌ಸಿಎಲ್‌ ತ್ವರಿತ ಕಾಮಗಾರಿ ನಡೆಸಿದೆ.

Crack on track in Bengaluru metro rail
ಮೆಟ್ರೋ ಹಳಿಯ ಮೇಲೆ ಕಾಣಿಸಿಕೊಂಡಿದ್ದ ಬಿರುಕು
author img

By

Published : Feb 7, 2023, 3:56 PM IST

ಬೆಂಗಳೂರು: ನಮ್ಮ ಮೆಟ್ರೋ ಹಳಿಯಲ್ಲಿ ಎಲೆಕ್ಟ್ರಿಕ್ ಲೈನ್‌ ಬಿರುಕು ಬಿಟ್ಟ ವಿಚಾರ ತಡವಾಗಿ ಬೆಳಕಿಗೆ ಬಂದಿದೆ. ಮೆಜೆಸ್ಟಿಕ್‌-ಕೆಂಗೇರಿ ನೇರಳೆ ಮಾರ್ಗದ ಪಟ್ಟಣಗೆರೆ ಸ್ಟೇಷನ್‌ಗೆ ಕೂಗಳತೆ ದೂರದ ಹಳಿಯಲ್ಲಿ ಬಿರುಕು ಕಾಣಿಸಿಕೊಂಡಿತ್ತು. ಮೆಟ್ರೋ ಪೈಲೆಟ್ ಹಾಗೂ ಸಿಬ್ಬಂದಿ ಇದನ್ನು ಗಮನಿಸಿದ್ದು ಟ್ರ್ಯಾಕ್ ಸೌಂಡ್, ಸ್ಪೀಡ್​ನಲ್ಲಿ ಬದಲಾವಣೆಯಾಗಿತ್ತು ಎಂದು ಬಿಎಂಆರ್‌ಸಿಎಲ್‌ ಅಧಿಕಾರಿಗಳು ತಿಳಿಸಿದ್ದಾರೆ.

ಕೂಡಲೇ ಎಚ್ಚೆತ್ತುಕೊಂಡು ಟ್ರ್ಯಾಕ್‌ ದುರಸ್ತಿ ಮಾಡಲಾಗಿದೆ. ಕಾಮಗಾರಿ ನಡೆಯುತ್ತಿದ್ದಾಗ ಮತ್ತೊಂದು ಟ್ರ್ಯಾಕ್​ನಲ್ಲಿ ರೈಲು ಓಡಾಟಕ್ಕೆ ಅನುವು ಮಾಡಿಕೊಡಲಾಗಿತ್ತು. ಸರಿಪಡಿಸಿದ ನಂತರ ಎರಡೂ ಹಳಿಯಲ್ಲಿ‌ ಎಂದಿನಂತೆ ಸಂಚಾರ ಮುಂದುವರೆಸಲಾಗಿದೆ. ಸಾರ್ವಜನಿಕರ ಗಮನಕ್ಕೆ ತರದೇ ಬಿಎಂಆರ್‌ಸಿಎಲ್‌ ದುರಸ್ತಿ ಕೆಲಸ ಮಾಡಿ ಮುಗಿಸಿದೆ.

ಇದನ್ನೂ ಓದಿ: ಬೆಂಗಳೂರು ಮೆಟ್ರೊ ಪಿಲ್ಲರ್ ದುರಂತ: ನಮ್ಮ ಮೆಟ್ರೋ ಸಂಸ್ಥೆಗೆ ವರದಿ ಸಲ್ಲಿಸಿದ ಐಐಎಸ್‌ಸಿ

ಪಿಲ್ಲರ್​ ದುರಂತದ ಕಹಿ ನೆನಪು: ಜನವರಿ 10 ರಂದು ಮೆಟ್ರೋ ರೈಲಿನ ನಿರ್ಮಾಣ ಹಂತದ ಕಬ್ಬಿಣದ ಪಿಲ್ಲರ್​ ಕುಸಿದು ತಾಯಿ ಮತ್ತು ಮಗ ಸಾವನ್ನಪ್ಪಿದ್ದರು. ಹೆಣ್ಣೂರು ಕ್ರಾಸ್​ ಸಮೀಪದ ಹೆಚ್‌ಬಿಆರ್​ ಲೇಔಟ್​ ರಿಂಗ್​ ರೋಡ್ ಬಳಿ ತೆರಳುತ್ತಿದ್ದಾಗ ಪಿಲ್ಲರ್​ ಕುಸಿದು ಬಿದ್ದು ಅನಾಹುತ ಜರುಗಿತ್ತು. ನಿರ್ಮಾಣ ಹಂತದ ಮೆಟ್ರೋ ಪಿಲ್ಲರ್​ ಕುಸಿತ ಪ್ರಕರಣ ಸಂಬಂಧ 8 ಜನರ ಮೇಲೆ ಕೂಡಲೇ ಎಫ್​ಐಆರ್​ ದಾಖಲಿಸಲಾಗಿತ್ತು. ಪ್ರಭಾರಿ ಉಪ ಮುಖ್ಯ ಇಂಜಿನಿಯರ್, ಕಾರ್ಯನಿರ್ವಾಹಕ ಇಂಜಿನಿಯರ್ ಮತ್ತು ಸೈಟ್ ಇಂಜಿನಿಯರ್​ಗಳನ್ನು ಬಿಎಂಆರ್​ಸಿಎಲ್​ ಅಮಾನತು ಮಾಡಿತ್ತು. ಮೆಟ್ರೋ ರೈಲು ಕಾರ್ಪೋರೇಶನ್​ ಲಿಮಿಟೆಡ್​ (BMRCL) ಪ್ರಕರಣದ ಸ್ವತಂತ್ರ ತನಿಖೆ ಮತ್ತು ವರದಿ ನೀಡಲು ಭಾರತೀಯ ವಿಜ್ಞಾನ ಸಂಸ್ಥೆಗೆ ಮನವಿ ಮಾಡಿತ್ತು.

ಇದನ್ನೂ ಓದಿ: ಮೆಟ್ರೊ ಪಿಲ್ಲರ್​ ಕುಸಿತ ಪ್ರಕರಣ.. ನಾನವನಲ್ಲ, ನಾನವನಲ್ಲ... ಜವಾಬ್ದಾರಿ ಹೊತ್ತಿಕೊಳ್ಳಲು ಯಾರೂ ರೆಡಿಯಿಲ್ಲವಂತೆ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.