ETV Bharat / state

ಕೋವಿಡ್-19 ಕುರಿತು ಸಂಪೂರ್ಣ ಮಾಹಿತಿ ನೀಡಲು ಪೋರ್ಟಲ್​​​​​ ಆರಂಭಿಸಿ: ಈಶ್ವರ್​​​ ಖಂಡ್ರೆ

ಸಿಲಿಕಾನ್ ಸಿಟಿ ಬೆಂಗಳೂರೇ ರಾಜಧಾನಿಯಾಗಿರುವ ಮತ್ತು ಮಾಹಿತಿ ತಂತ್ರಜ್ಞಾನ ರಾಜ್ಯ ಎಂದೇ ಖ್ಯಾತವಾಗಿರುವ ಕರ್ನಾಟಕ ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಜನಪ್ರತಿನಿಧಿಗಳಿಗೆ ಮತ್ತು ಸಾರ್ವಜನಿಕರಿಗೆ ಕೋವಿಡ್-19 ಕುರಿತ ವಾಸ್ತವ ಮಾಹಿತಿಯನ್ನು ಸರ್ಕಾರ ನೀಡಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್​ ಖಂಡ್ರೆ ಒತ್ತಾಯಿಸಿದ್ದಾರೆ.

ಈಶ್ವರ ಖಂಡ್ರೆ,eshwar khandre
ರಾಜ್ಯದಲ್ಲಿ ಕೋವಿಡ್ ಮಾಹಿತಿಗೆ ಪೋರ್ಟಲ್ ಮತ್ತು ಆರೋಗ್ಯ ಕೇಂದ್ರಗಳಿಗೆ ಮಾಸ್ಕ್, ಸ್ಯಾನಿಟೈಜರ್ ಪೂರೈಸಲು ಖಂಡ್ರೆ ಆಗ್ರಹ
author img

By

Published : Mar 26, 2020, 11:38 PM IST

ಬೆಂಗಳೂರು: ಕೋವಿಡ್-19 ಮಹಾಮಾರಿಯ ಕುರಿತಂತೆ ವಾಸ್ತವ ಮತ್ತು ಸಮಗ್ರ ಮಾಹಿತಿಯನ್ನು ಸಾರ್ವಜನಿಕರಿಗೆ ನೀಡಲು ಡ್ಯಾಶ್​​ ಬೋರ್ಡ್ ಸಹಿತವಾದ ಪೋರ್ಟಲ್ ಆರಂಭಿಸಬೇಕು. ಕೂಡಲೇ ರಾಜ್ಯದ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸಿಬ್ಬಂದಿ, ಆಶಾ ಕಾರ್ಯಕರ್ತೆಯರಿಗೆ ಸ್ಯಾನಿಟೈಸರ್ ಮತ್ತು ಮಾಸ್ಕ್ ಪೂರೈಸಬೇಕು ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಕಾರ್ಯಾಧ್ಯಕ್ಷ ಈಶ್ವರ್​​ ಖಂಡ್ರೆ ಒತ್ತಾಯಿಸಿದ್ದಾರೆ.

ಮಾಧ್ಯಮ ಪ್ರಕಟಣೆಯಲ್ಲಿ ನೀಡಿರುವ ಈಶ್ವರ್​ ಖಂಡ್ರೆ, ಸಿಲಿಕಾನ್ ಸಿಟಿ ಬೆಂಗಳೂರೇ ರಾಜಧಾನಿಯಾಗಿರುವ ಮತ್ತು ಮಾಹಿತಿ ತಂತ್ರಜ್ಞಾನ ರಾಜ್ಯ ಎಂದೇ ಖ್ಯಾತವಾಗಿರುವ ಕರ್ನಾಟಕ ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಜನಪ್ರತಿನಿಧಿಗಳಿಗೆ ಮತ್ತು ಸಾರ್ವಜನಿಕರಿಗೆ ಕೋವಿಡ್-19 ಕುರಿತ ವಾಸ್ತವ ಮಾಹಿತಿಯನ್ನು ಸರ್ಕಾರ ನೀಡಬೇಕು. ಈ ನಿಟ್ಟಿನಲ್ಲಿ ಡ್ಯಾಶ್​ ಬೋರ್ಡ್ ಸಹಿತವಾದ ಪೋರ್ಟಲ್ ರೂಪಿಸಬೇಕು. ಇದರಿಂದ ಯಾವ ಜಿಲ್ಲೆಯಲ್ಲಿ ಎಷ್ಟು ಸೋಂಕಿದೆ, ಯಾವ ರೀತಿಯ ಸೌಲಭ್ಯ ದೊರೆಯುತ್ತಿದೆ, ಎಷ್ಟು ಆಸ್ಪತ್ರೆಗಳಲ್ಲಿ ಚಿಕಿತ್ಸೆ ದೊರೆಯುತ್ತಿದೆ ಎಂಬಿತ್ಯಾದಿ ಮಾಹಿತಿ ಲಭ್ಯವಾಗಬೇಕು ಎಂದಿದ್ದಾರೆ. ಪ್ರಸಕ್ತ ಪ್ರಕರಣಗಳ ಸಂಖ್ಯೆ ಕಡಿಮೆ ಇದೆ. ಆದರೆ 3 ಮತ್ತು 4ನೇ ವಾರದಲ್ಲಿ ಭಾರೀ ಪ್ರಮಾಣದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಳವಾಗುವ ಬಗ್ಗೆ ಸರ್ಕಾರಕ್ಕೇ ಆತಂಕವಿದೆ. ಈ ಹಿನ್ನೆಲೆಯಲ್ಲಿ ಪೂರ್ವಸಿದ್ಧತೆಗಳನ್ನು ಮಾಡಿಕೊಳ್ಳಬೇಕು. ತಕ್ಷಣವೇ ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಕನಿಷ್ಠ ಒಂದು ಸುಸಜ್ಜಿತ ಟಚ್ ಸೆಂಟರ್ ಆರಂಭಿಸಬೇಕು. ಜಿಲ್ಲಾ ಮಟ್ಟದಲ್ಲಿ ಕೋವಿಡ್-19 ರೋಗಕ್ಕೆ ಸಂಬಂಧಿಸಿದಂತೆ ಗಂಟಲ ದ್ರವ ಪರೀಕ್ಷಿಸುವ ಪ್ರಯೋಗಾಲಯ ಸ್ಥಾಪಿಸಬೇಕು. ಜಿಲ್ಲಾ ಮಟ್ಟದಲ್ಲೂ ವೆಂಟಿಲೇಟರ್ ಸಹಿತ ಹೆಚ್ಚುವರಿ ಹಾಸಿಗೆ, ಐಸಿಯು ಕಾರ್ಯನಿರ್ವಹಣೆ ಖಾತ್ರಿ ಪಡಿಸಿಕೊಳ್ಳಬೇಕು. ಸಿಬ್ಬಂದಿಗೆ ವೆಂಟಿಲೇಟರ್ ಅಳವಡಿಕೆ ಕುರಿತಂತೆ ತರಬೇತಿ ನೀಡುವ ಅಗತ್ಯವಿದ್ದರೆ ಅದನ್ನೂ ಮಾಡಬೇಕು. ಮಿಗಿಲಾಗಿ ರೋಗಿಗಳಿಗೆ ಅಗತ್ಯ ಊಟೋಪಚಾರಕ್ಕೆ ವ್ಯವಸ್ಥೆ ಕಲ್ಪಿಸಬೇಕು ಎಂದು ಒತ್ತಾಯಿಸಿದ್ದಾರೆ.

ಜಿಲ್ಲಾಮಟ್ಟದ, ತಾಲೂಕು ಮಟ್ಟದ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲೂ ಸ್ಯಾನಿಟೈಸರ್ ಮತ್ತು ಮಾಸ್ಕ್​​​​​ಗಳ ಕೊರತೆ ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ಅಗತ್ಯ ಪ್ರಮಾಣದ ಮಾಸ್ಕ್ ಮತ್ತು ಸ್ಯಾನಿಟೈಸರ್ ಪೂರೈಕೆಗೆ ಸರ್ಕಾರ ಮತ್ತು ಆರೋಗ್ಯ ಇಲಾಖೆ ಕ್ರಮ ಕೈಗೊಳ್ಳಬೇಕು. ಸಾರ್ವಜನಿಕರಿಗೂ ಮಾಸ್ಕ್ ದೊರಕುವಂತೆ ಮತ್ತು ಹೆಚ್ಚುವರಿ ದರ ಪಡೆದು ಶೋಷಣೆ ಮಾಡದ ರೀತಿ ಕ್ರಮ ಕೈಗೊಳ್ಳಬೇಕು ಎಂದು ಈಶ್ವರ್​​ ಖಂಡ್ರೆ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

ಸರ್ಕಾರಕ್ಕಿರುವಷ್ಟೇ ಜವಾಬ್ದಾರಿ ಸಾರ್ವಜನಿಕರಿಗೂ ಇದೆ. ಅನಗತ್ಯವಾಗಿ ಮನೆಯಿಂದ ಹೊರ ಬರದೆ, ಸೋಂಕಿನ ಸರಪಳಿ ತುಂಡರಿಸಿ, ಸಾಮುದಾಯಿಕ ಸ್ವಾಸ್ಥ್ಯ ಕಾಪಾಡುವಂತೆ ಮತ್ತು ಗುಂಪು ಗುಂಪಾಗಿ ಜನ ಸೇರದೆ ಸರತಿ ಸಾಲಿನಲ್ಲಿ ಕನಿಷ್ಠ 1 ಮೀಟರ್ ದೂರದಲ್ಲಿ ನಿಂತು ಜೀವನಾವಶ್ಯಕ ವಸ್ತು ಖರೀದಿಸಬೇಕೇ ಹೊರತು ಗುಂಪು ಗುಂಪಾಗಿ ಜನ ಸೇರಿ ಸೋಂಕು ಪ್ರಸರಣಕ್ಕೆ ಕಾರಣವಾಗಬಾರದು ಎಂದು ಮನವಿ ಮಾಡಿದ್ದಾರೆ. ಪ್ರತಿಪಕ್ಷಗಳು ಸರ್ಕಾರದೊಂದಿಗೆ ಸಂಪೂರ್ಣ ಸಹಕಾರ ನೀಡುತ್ತಿದ್ದು, ಈ ಮಹಾಮಾರಿಯನ್ನು ಮಣಿಸಲು ಸರ್ಕಾರ ಇನ್ನೂ ಹೆಚ್ಚಿನ ಕಾಳಜಿ ಮತ್ತು ಮುಂಜಾಗ್ರತೆ ಹಾಗೂ ಸಂಭಾವ್ಯತೆಯ ಅಂದಾಜಿನಂತೆ ತ್ವರಿತವಾಗಿ ಆರೋಗ್ಯ ಸೇವೆಗಳನ್ನು ಹೆಚ್ಚಿಸಬೇಕು ಎಂದು ಖಂಡ್ರೆ ಒತ್ತಾಯಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.