ಬೆಂಗಳೂರು: ಕೋವಿಡ್ ಸೋಂಕಿತ ತನ್ನ ತಂದೆಗೆ ಚಿಕಿತ್ಸೆ ಕೊಡಿಸಲು ಯುವತಿಯೊಬ್ಬಳು ರಾತ್ರಿಯಿಡೀ ಪರದಾಡಿದ ಘಟನೆ ಮೂರು ದಿನಗಳ ಹಿಂದೆ ನಗರದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಯಲಹಂಕದ 62 ವರ್ಷದ ವ್ಯಕ್ತಿಗೆ ಕೋವಿಡ್ ಸೋಂಕು ತಗುಲಿತ್ತು. ಆದರೆ, ಚಿಕಿತ್ಸೆ ಕೊಡಿಸಲು ಸರಿಯಾದ ಸಮಯಕ್ಕೆ ಐಸಿಯು ಬೆಡ್ ಸಿಕ್ಕಿರಲಿಲ್ಲ. ಹೀಗಾಗಿ, ಸೋಂಕಿತ ವ್ಯಕ್ತಿ ಇಡೀ ರಾತ್ರಿ ಯಲಹಂಕ ಸಾರ್ವಜನಿಕ ಆಸ್ಪತ್ರೆಯಲ್ಲಿ ನರಳಾಡಿದ್ದಾರೆ. ಕೊನೆಗೆ ಚೇರ್ ಮೇಲೆಯೇ ಕೂರಿಸಿಯೇ ಆಕ್ಸಿಜನ್ ನೀಡಲಾಗಿದೆ.
ಓದಿ : ಆರೋಗ್ಯ ಸಿಬ್ಬಂದಿಗೆ ತಗುಲಿದ ಕೋವಿಡ್: ತುಮಕೂರು ಜಿಲ್ಲಾಡಳಿತಕ್ಕೆ ಹೊಸ ಸವಾಲು
ಇಡೀ ರಾತ್ರಿ ಪರದಾಡಿದ ಬಳಿಕ ನಿನ್ನೆ ಬೆಳಗ್ಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಐಸಿಯು ಬದಲು ಆಕ್ಸಿಜನ್ ಬೆಡ್ ಸಿಕ್ಕಿದೆ. ಆದರೆ, ಮಧ್ಯಾಹ್ನದ ವೇಳೆಗೆ ಸೋಂಕಿತ ವ್ಯಕ್ತಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ ಎನ್ನಲಾಗಿದೆ.