ಬೆಂಗಳೂರು: 2ನೇ ಅಲೆಯ ಕೊರೊನಾ ಮಹಾಮಾರಿ ನಗರದ ಜನತೆಯ ನಿದ್ದೆಗೆಡಿಸಿದೆ. ದಿನೇ ದಿನೆ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಇದರ ತೀವ್ರತೆಯಿಂದಾಗಿ ನಗರದ ಆಸ್ಪತ್ರೆಗಳಲ್ಲಿ ಬೆಡ್ ಸಿಗದೇ ಜನರು ಕಂಗಾಲಾಗಿದ್ದಾರೆ.
ಹೆಸರುಘಟ್ಟದ ನಿವಾಸಿ ನರಸಿಂಹಮೂರ್ತಿ ಎಂಬುವರಿಗೆ ಸೋಂಕು ದೃಢವಾಗಿದ್ದು, ದಿನವಿಡೀ ಅಲೆದಾಡಿದರೂ ಐಸಿಯು ಬಿಡ್ ಸಿಗುತ್ತಿಲ್ಲ. ಈ ಕುರಿತು ಸೋಂಕಿತನ ಸಹೋದರ ವಿಡಿಯೋ ಮೂಲಕ ತನ್ನ ಅಳಲು ತೋಡಿಕೊಂಡಿದ್ದು, ಆಸ್ಪತ್ರೆ ಸಿಬ್ಬಂದಿ ಸೋಂಕಿತನಿಗೆ ಕೇವಲ ಜನರಲ್ ಬೆಡ್ ಇದೆ ಅಡ್ಮಿಟ್ ಮಾಡಿ ಎಂದು ಹೇಳಿದ್ದಾರೆ. ಐಸಿಯು ಬೆಡ್ ನೀಡುತ್ತಿಲ್ಲ ಎಂದು ಆರೋಪಿಸಿದ್ದಾರೆ.
ಅಲ್ಲದೇ ಮಹಾವೀರ್ ಜೈನ್ ಆಸ್ಪತ್ರೆಯಲ್ಲಿ ದಾಖಲಿಸಲು ಕರೆದುಕೊಂಡು ಹೋದರೆ ಐಸಿಯು ಬೆಡ್ ಇಲ್ಲ ಜನರಲ್ ವಾರ್ಡ್ ಇದೆ ಬೇಕಾದ್ರೆ ಅಡ್ಮಿಟ್ ಮಾಡ್ಕೊಳಿ, ರೋಗಿ ಕಂಡೀಷನ್ ಸೀರಿಯಸ್ ಆಗಿದೆ ನಾವೇನು ಗ್ಯಾರಂಟಿ ಕೊಡಲ್ಲ ಅಂತಿದ್ದಾರೆ, ನಮಗೆ ದಯವಿಟ್ಟು ಸಹಾಯ ಮಾಡಿ ಅಂತ ಸೋಂಕಿತನ ಸಹೋದರ ಅಳಲು ತೋಡಿಕೊಂಡಿದ್ದಾರೆ.