ETV Bharat / state

ರೈಲ್ವೆ ನಿಲ್ದಾಣಗಳ ಕ್ಯಾಂಟೀನ್​​​ಗಳ ಮೇಲೂ ಕೋವಿಡ್​ ಕರಿಛಾಯೆ - ರೈಲ್ವೆ ನಿಲ್ದಾಣಗಳ ಕ್ಯಾಂಟೀನ್​​​ಗಳ ಮೇಲೆ ಕೋವಿಡ್ ಎಫೆಕ್ಟ್​

ಕೋವಿಡ್​, ಲಾಕ್​ಡೌನ್​ನಿಂದ ಜನ ಸಂಚಾರ ಕಡಿಮೆಯಾಗಿದೆ. ರೈಲು ಸಂಚಾರಕ್ಕೆ ಅವಕಾಶವಿದ್ರೂ ಕೂಡ ಬೆರಳೆಣಿಕೆಯಷ್ಟು ಮಂದಿ ಮಾತ್ರ ಸಂಚಾರ ನಡೆಸುತ್ತಿದ್ದಾರೆ. ಪರಿಣಾಮ ರೈಲ್ವೆ ನಿಲ್ದಾಣಗಳಲ್ಲಿನ ಕ್ಯಾಂಟೀನ್ ವ್ಯಾಪಾರ-ವಹಿವಾಟು ಅಕ್ಷರಶಃ ಬಂದ್ ಆಗಿ ಕ್ಯಾಂಟೀನ್ ಮಾಲೀಕರು, ಗುತ್ತಿಗೆದಾರರು, ಕಾರ್ಮಿಕರು ಸಂಕಷ್ಟಕಕ್ಕೆ ಒಳಗಾಗಿದ್ದಾರೆ.

Covid effect on railway station canteens
ರೈಲ್ವೆ ನಿಲ್ದಾಣಗಳ ಕ್ಯಾಂಟೀನ್​​​ಗಳ ಮೇಲೂ ಕೋವಿಡ್​ ಕರಿಛಾಯೆ
author img

By

Published : Jun 12, 2021, 1:19 PM IST

ಬೆಂಗಳೂರು/ತುಮಕೂರು/ಬಳ್ಳಾರಿ: ರೂಪಾಂತರಗೊಂಡ ಮಹಾಮಾರಿ ತಡೆಗೆ ಹಂತ ಹಂತವಾಗಿ ಲಾಕ್​ಡೌನ್​ ಜಾರಿಯಾಯ್ತು. ಇದೀಗ ಪ್ರಕರಣಗಳ ಪ್ರಮಾಣಕ್ಕನುಗುಣವಾಗಿ ಅನ್​ಲಾಕ್​ ಪ್ರಕ್ರಿಯೆಯೂ ಆರಂಭವಾಗಿದೆ. ಆದ್ರೆ ಈ ಕೋವಿಡ್​ನಿಂದ ಕಂಗೆಟ್ಟವರು ಅದೆಷ್ಟೋ ಮಂದಿ.

ರೈಲ್ವೆ ಮತ್ತು ವಿಮಾನ ಸಂಚಾರಕ್ಕೆ ಅವಕಾಶ ಇದ್ದರೂ ಕೂಡ ನಿರೀಕ್ಷೆಯಷ್ಟು ಪ್ರಯಾಣಿಕರಿಲ್ಲ. ಹಾಗಾಗಿ ರೈಲ್ವೆ ನಿಲ್ದಾಣಗಳಲ್ಲಿನ ಕ್ಯಾಂಟೀನ್​​​ಗಳು ಗ್ರಾಹಕರಿಲ್ಲದೇ ನಷ್ಟ ಅನುಭವಿಸುವಂತಾಗಿದೆ.

ರೈಲ್ವೆ ನಿಲ್ದಾಣಗಳ ಕ್ಯಾಂಟೀನ್​​​ಗಳ ಮೇಲೂ ಕೋವಿಡ್​ ಕರಿಛಾಯೆ

ಹೌದು, ಕೋವಿಡ್​ ಭೀತಿ ಮತ್ತು ಸೆಮಿ ಲಾಕ್​​​ಡೌನ್​ನಿಂದ ಪ್ರಯಾಣಿಕರಿಲ್ಲದೇ ರೈಲ್ವೆ ನಿಲ್ದಾಣಗಳು ಭಣಗುಡುತ್ತಿವೆ. ಬೆಂಗಳೂರು, ತುಮಕೂರು, ಬಳ್ಳಾರಿ ಜಿಲ್ಲೆಯ ರೈಲ್ವೆ ನಿಲ್ದಾಣಗಳಲ್ಲಿನ ಕ್ಯಾಂಟೀನ್​ಗಳಲ್ಲಿ ತಿಂಡಿ ತಿನಿಸು ಕೊಳ್ಳುವವರೇ ಇಲ್ಲದಂತಾಗಿದೆ. ಇದರಿಂದ ಕ್ಯಾಂಟೀನ್​ ಮಾಲೀಕರು, ಗುತ್ತಿಗೆದಾರರು ಸೇರಿದಂತೆ ಕಾರ್ಮಿಕರು ಸಂಕಷ್ಟಕ್ಕೊಳಗಾಗಿದ್ದಾರೆ.

ಲಾಕ್​ಡೌನ್​ನಿಂದ ಮೊದಲಿನಷ್ಟು ರೈಲುಗಳು ಸಂಚರಿಸುತ್ತಿಲ್ಲ. ಇರುವ ರೈಲುಗಳಲ್ಲಿ ಬೆರಳೆಣಿಕೆಯಷ್ಟು ಪ್ರಯಾಣಿಕರು ಮಾತ್ರ ಸಂಚರಿಸುತ್ತಾರೆ. ಬಂದವರು ಕೂಡ ಕ್ಯಾಂಟೀನ್​ಗಳತ್ತ ಮುಖ ಮಾಡುತ್ತಿಲ್ಲ ಎನ್ನುತ್ತಾರೆ ತುಮಕೂರು ರೈಲ್ವೆ ಕ್ಯಾಂಟೀನ್​ ಕಾರ್ಮಿಕರು.

ಇದನ್ನೂ ಓದಿ: ಕೋವಿಡ್​​ ಹೊಡೆತಕ್ಕೆ ನೆಲಕಚ್ಚಿತು ಕೇಟರಿಂಗ್ ಉದ್ಯಮ... ಜೀವನದ ಬಂಡಿ ಸಾಗಿಸೋದಾದರೂ ಹೇಗೆ?

ಸೋಂಕು ತಗುಲುವ ಭೀತಿಯಲ್ಲಿ ಜನರು ಸಂಚಾರ ಕಡಿಮೆ ಮಾಡಿದ್ದಾರೆ. ಇನ್ನು ಹೊರಗೆ ತಿಂಡಿ ತಿನಿಸು ಖರೀದಿಸುವ ಗೋಜಿಗೂ ಹೋಗುತ್ತಿಲ್ಲ. ಇತ್ತ ಹಲವು ಸಂಘ ಸಂಸ್ಥೆಗಳು ಉಚಿತ ಆಹಾರ ವಿತರಣೆ ಮಾಡುತ್ತಿವೆ. ಈ ಎಲ್ಲ ಕಾರಣಗಳಿಂದ ರೈಲ್ವೆ ನಿಲ್ದಾಣಗಳ ಕ್ಯಾಂಟೀನ್​​​ಗಳು ನಷ್ಟ ಅನುಭವಿಸುತ್ತಿವೆ ಎಂದ್ರೆ ತಪ್ಪಾಗಲ್ಲ. ಹಾಗಾಗಿ ಸೋಂಕು ನಿಯಂತ್ರಣಕ್ಕೆ ಸರ್ವರೂ ಸಿದ್ಧರಾಗಬೇಕಿದೆ, ಸಮಸ್ಯೆಗೆ ಕಡಿವಾಣ ಹಾಕಬೇಕಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.