ETV Bharat / state

ನೈರ್ಮಲ್ಯದ ಅರಿವು ಮೂಡಿಸಿತು ಕೋವಿಡ್ ಭಯ​: ರಾಜ್ಯದಲ್ಲಿ ಹೇಗಿದೆ ಸ್ವಚ್ಛತೆಯ ಸ್ಥಿತಿಗತಿ? - Belagavi Muncipal corporation news

ನೈರ್ಮಲ್ಯ ಹಾಗೂ ಕುಡಿಯುವ ನೀರಿನ ಪರಿಶುದ್ಧತೆ ಬಗ್ಗೆ ಪಾಲಿಕೆ ಎಚ್ಚರಿಕೆ ಕ್ರಮ ವಹಿಸಿದ್ದು, ವಸತಿ, ಅಂಗಡಿ ಸಮುಚ್ಚಯಗಳಲ್ಲಿ ನೀರು ನಿಂತು ಸೊಳ್ಳೆಗಳು ಉತ್ಪತ್ತಿ ಆಗದಂತೆ ಎಚ್ಚರಿಕೆ ವಹಿಸಿದೆ. ಮೀನು, ಮಾಂಸ ಮಾರಾಟದ ಅಂಗಡಿಗಳ ಮಾಲೀಕರಿಗೆ ತೆರೆದಿಟ್ಟು ವ್ಯಾಪಾರ ಮಾಡದಂತೆ ಎಚ್ಚರಿಕೆ ನೀಡಲಾಗುತ್ತಿದೆ.‌ ಅದರ ಜೊತೆಗೆ ಫಾಗಿಂಗ್ ಮತ್ತು ಡಿಗ್ಗಿಂಗ್​ಗೆ ಹೆಚ್ಚು ಒತ್ತು ನೀಡಲಾಗಿದೆ. ವೈಜ್ಞಾನಿಕವಾಗಿ ತ್ಯಾಜ್ಯ ವಿಲೇವಾರಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ.‌ ಅದಕ್ಕಾಗಿ‌ ಎಲ್ಲೆಂದರಲ್ಲಿ ‌ಕಸ ಎಸೆದು‌ ಹೋಗುವವರ ಮೇಲೆ ಕಣ್ಣಿಡಲು ಸಿಸಿಟಿವಿಗಳನ್ನು ಅಳವಡಿಸಲು ಮುಂದಾಗಿದೆ.‌

ರಾಜ್ಯದಲ್ಲಿ ಹೇಗಿದೆ ಸ್ವಚ್ಛತೆಯ ಸ್ಥಿತಿಗತಿ?
ರಾಜ್ಯದಲ್ಲಿ ಹೇಗಿದೆ ಸ್ವಚ್ಛತೆಯ ಸ್ಥಿತಿಗತಿ?
author img

By

Published : Sep 2, 2020, 4:49 PM IST

ಬೆಂಗಳೂರು : ಕೊರೊನಾ ಬಂದಮೇಲೆ ಸ್ವಚ್ಛತೆಯತ್ತ ಎಲ್ಲರ ಚಿತ್ತ ನೆಟ್ಟಿದೆ. ಕೋವಿಡ್​ನಿಂದ ರಕ್ಷಿಸಿಕೊಳ್ಳಲು ಸ್ವಚ್ಛತೆಯ ಮಂತ್ರವನ್ನು ಪಠಿಸುತ್ತಿರುವ ಸರ್ಕಾರಗಳು ಹತ್ತು ಹಲವು ಯೋಜನೆಗಳನ್ನು ರೂಪಿಸಿಕೊಂಡಿವೆ. ರಾಜ್ಯದಲ್ಲಿ ಕೆಲವು ಜಿಲ್ಲೆಗಳಲ್ಲಿ ಸ್ವಚ್ಛತೆಯ ಗುಣಮಟ್ಟ ಹೆಚ್ಚಿದ್ದರೆ ಇನ್ನೂ ಕೆಲವೆಡೆ ನೈರ್ಮಲ್ಯಕ್ಕಾಗಿ ಪರಿತಪಿಸುವ ಸ್ಥಿತಿ ಇದೆ.

ಬ್ಲಾಕ್ ಸ್ಪಾಟ್ ಜಾಗಗಳಲ್ಲಿ ರಂಗೋಲಿ ಮೂಲಕ ಜನಜಾಗೃತಿ: ಕೋವಿಡ್ ರೋಗ ಹೆಚ್ಚಾಗಿ ಹರಡದಂತೆ ಬೆಂಗಳೂರು ನಗರ ನೈರ್ಮಲ್ಯ ಕಾಪಾಡಲು ಬಿಬಿಎಂಪಿಯ ಘನತ್ಯಾಜ್ಯ ನಿರ್ವಹಣೆ ವಿಭಾಗ ಹೆಚ್ಚು ಶ್ರಮಿಸುತ್ತಿದೆ. ಪ್ರತಿನಿತ್ಯ ಮನೆಗಳಿಂದ ಹಸಿ, ಒಣ ಹಾಗೂ ಸ್ಯಾನಿಟರಿ ತ್ಯಾಜ್ಯವನ್ನು ಪ್ರತ್ಯೇಕವಾಗಿ ಸಂಗ್ರಹಸಿಲು ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಜನ ರಾತ್ರಿ ಹೊತ್ತಲ್ಲಿ ರಸ್ತೆ ಬದಿ, ಬ್ಲಾಕ್ ಸ್ಪಾಟ್ ಗಳಲ್ಲಿ ಕಸ ಎಸೆಯದಂತೆ ಮಾರ್ಷಲ್ಸ್ ಹದ್ದಿನ ಕಣ್ಣಿಟ್ಟಿದ್ದಾರೆ. ಪ್ರತೀ ವಾರ್ಡ್ ಗಳ ಕಸ ರಾಶಿ ಹಾಕುವ ಜಾಗಗಳನ್ನು ದಿನಕ್ಕೊಂದರಂತೇ ಸ್ವಚ್ಛ ಮಾಡಿ ಆ ಜಾಗದಲ್ಲಿ ರಂಗೋಲಿ ಹಾಕಿ ಕಸ ಹಾಕದಂತೆ ಜನಜಾಗೃತಿ ಮೂಡಿಸಲಾಗುತ್ತಿದೆ.

ರಾಜ್ಯದಲ್ಲಿ ಹೇಗಿದೆ ಸ್ವಚ್ಛತೆಯ ಸ್ಥಿತಿಗತಿ?

ಕೋಟಿ-ಕೋಟಿ ಸುರಿದರೂ ಕುಂದಾನಗರಿಗೆ ಸಿಗುತ್ತಿಲ್ಲ ಸ್ವಚ್ಛ ನಗರದ ಮನ್ನಣೆ : 58 ವಾರ್ಡ್‍ಗಳನ್ನು ಹೊಂದಿರುವ ಬೆಳಗಾವಿ ಮಹಾನಗರ ಪಾಲಿಕೆ ತ್ಯಾಜ್ಯ ನಿರ್ವಹಣೆಗೆ ವರ್ಷಕ್ಕೆ ಬರೊಬ್ಬರಿ 19 ಕೋಟಿ ರೂ. ವೆಚ್ಚ ಮಾಡುತ್ತದೆ. ಬೆಳಗ್ಗೆ ಆರು ಗಂಟೆಯಿಂದ ತ್ಯಾಜ್ಯ ಸಂಗ್ರಹ ಕೆಲಸ ಆರಂಭವಾಗುತ್ತದೆ. ಮಾರ್ಕೆಟ್, ಹೋಟೆಲ್‍ಗಳ ತ್ಯಾಜ್ಯ ಸಂಗ್ರಹಕ್ಕೆ ವಿಶೇಷ ತಂಡವನ್ನೂ ಕೂಡ ನೇಮಿಸಲಾಗಿದೆ. ನಗರದ ಪ್ರತಿ ಬಡಾವಣೆಗೆ ಡೋರ್ ಟು ಡೋರ್ ಕಸ ಸಂಗ್ರಹಣೆ ಮಾಡಲಾಗುತ್ತದೆ. ಆದರೂ ಕುಂದಾನಗರಿಗೆ ಮಾತ್ರ ಸ್ವಚ್ಛ ನಗರದ ಮನ್ನಣೆ ದೊರೆಯುತ್ತಿಲ್ಲ. ಕೆಲವೆಡೆ ಪ್ರತಿನಿತ್ಯ ಡೋರ್ ಟು ಡೋರ್ ಕಸ ಸಂಗ್ರಹವಾಗದ ಕಾರಣ ಸ್ಥಳೀಯರು ಕಸವನ್ನು ಖಾಲಿ ಜಾಗದಲ್ಲಿ ಎಸೆಯುತ್ತಿದ್ದಾರೆ. ಈ ಕಾರಣಕ್ಕೆ ಬೆಳಗಾವಿಗೆ ಈವರೆಗೆ ಸ್ವಚ್ಛನಗರದ ಗರಿ ಸಿಕ್ಕಿಲ್ಲ ಎಂಬುದು ಸ್ಥಳೀಯರ ಅಭಿಪ್ರಾಯ.

ಕೊರೊನಾ ಜತೆ ಸಾಂಕ್ರಾಮಿಕ ರೋಗಗಳ ತಡೆಗೆ ಮುಂದಾದ ಹು-ಧಾ ಮಹಾನಗರ ಪಾಲಿಕೆ: ‌ಹುಬ್ಬಳ್ಳಿ- ಧಾರವಾಡದ ‌ಮಹಾನಗರ ‌‌‌ಪಾಲಿಕೆ ವ್ಯಾಪ್ತಿಯಲ್ಲಿ ಕೊರೊನಾ ಜೊತೆಗೆ ಇತರೆ ಸಾಂಕ್ರಾಮಿಕ ರೋಗ ತಡೆಗಟ್ಟುವಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ. ಇದಕ್ಕಾಗಿ ಮಹಾನಗರ ಪಾಲಿಕೆ ಹೊಸ ಹೊಸ ಯೋಜನೆಗಳನ್ನು ಹಾಕಿಕೊಂಡಿದೆ. ನೈರ್ಮಲ್ಯ ಹಾಗೂ ಕುಡಿಯುವ ನೀರಿನ ಪರಿಶುದ್ಧತೆ ಬಗ್ಗೆ ಪಾಲಿಕೆ ಎಚ್ಚರಿಕೆ ಕ್ರಮ ವಹಿಸಿದ್ದು, ವಸತಿ, ಅಂಗಡಿ ಸಮುಚ್ಚಯಗಳಲ್ಲಿ ನೀರು ನಿಂತು ಸೊಳ್ಳೆಗಳು ಉತ್ಪತ್ತಿ ಆಗದಂತೆ ಎಚ್ಚರಿಕೆ ವಹಿಸಿದೆ. ಮೀನು, ಮಾಂಸ ಮಾರಾಟದ ಅಂಗಡಿಗಳ ಮಾಲೀಕರಿಗೆ ತೆರೆದಿಟ್ಟು ವ್ಯಾಪಾರ ಮಾಡದಂತೆ ಎಚ್ಚರಿಕೆ ನೀಡಲಾಗುತ್ತಿದೆ.‌ ಅದರ ಜೊತೆಗೆ ಫಾಗಿಂಗ್ ಮತ್ತು ಡಿಗ್ಗಿಂಗ್​ಗೆ ಹೆಚ್ಚು ಒತ್ತು ನೀಡಲಾಗಿದೆ. ವೈಜ್ಞಾನಿಕವಾಗಿ ತ್ಯಾಜ್ಯ ವಿಲೇವಾರಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ.‌ ಅದಕ್ಕಾಗಿ‌ ಎಲ್ಲೆಂದರಲ್ಲಿ ‌ಕಸ ಎಸೆದು‌ ಹೋಗುವವರ ಮೇಲೆ ಕಣ್ಣಿಡಲು ಸಿಸಿಟಿವಿಗಳನ್ನು ಅಳವಡಿಸಲು ಮುಂದಾಗಿದೆ.‌

2 ಬಾರಿ ಸ್ವಚ್ಛ ನಗರಿ ಪ್ರಶಸ್ತಿ ಪಡೆದ ಮೈಸೂರು: ಮೈಸೂರು ದೇಶದಲ್ಲೇ ಸ್ವಚ್ಛ ನಗರಿ ಎಂಬ ಖ್ಯಾತಿಯನ್ನು ಪಡೆದಿದ್ದು, ಎರಡು ಬಾರಿ ಒಟ್ಟಾರೆ ವಿಭಾಗದಲ್ಲಿ ಸ್ವಚ್ಛ ನಗರಿ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ. ಮೈಸೂರು ನಗರದಲ್ಲಿ ಸ್ವಚ್ಛತೆಗೆ ಸಾರ್ವಜನಿಕರ ಸಹಕಾರ ಹಾಗೂ ತಿಳುವಳಿಕೆ ಜತೆಗೆ ಪೌರ ಕಾರ್ಮಿಕರು ಪ್ರತಿದಿನ ಬೆಳಗ್ಗೆ ಮತ್ತು ರಾತ್ರಿ ತಪ್ಪದೆ ನಗರವನ್ನು ಸ್ವಚ್ಛ ಮಾಡುವುದು ಮುಖ್ಯ ಕಾರಣವಾಗಿದೆ.

ಮಂಗಳೂರು ಮಹಾನಗರ ಪಾಲಿಕೆಗೆ ಕಾರ್ಮಿಕರ ಕೊರತೆ: ಕೊರೊನಾ ವೈರಸ್ ಬಂದ ಆರಂಭದಲ್ಲಿ ಮಂಗಳೂರಿನಲ್ಲಿ ತ್ಯಾಜ್ಯ ಸಂಗ್ರಹ ಮಾಡುವ ಕಾರ್ಮಿಕರ ಕೊರತೆ ಬಹಳ ಸಮಸ್ಯೆಯನ್ನುಂಟು ಮಾಡಿತ್ತು. ಕೊರೊನಾ ಭಯದಿಂದ ಹಲವು ಪೌರ ಕಾರ್ಮಿಕರು ಕೆಲಸಕ್ಕೆ ಬರಲು ಹಿಂದೇಟು ಹಾಕಿದ ಪರಿಣಾಮ ನಗರದಾದ್ಯಂತ ತ್ಯಾಜ್ಯ ಸಂಗ್ರಹ ದಿನಂಪ್ರತಿ ನಡೆಯುತ್ತಿರಲಿಲ್ಲ. ಆದರೆ ಆ ಸಮಸ್ಯೆ ಇದೀಗ ಸುಧಾರಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.