ಬೆಂಗಳೂರು : ನಗರದಲ್ಲಿ ದಿನೇದಿನೆ ಕೋವಿಡ್ ಪ್ರಕರಣಗಳು ಹೆಚ್ಚುತ್ತಿವೆ. ಸದ್ಯ ಹೆಚ್ಚು ಪ್ರಕರಣಗಳು ಕಂಡು ಬಂದ ಆರು ಕಡೆಗಳಲ್ಲಿ ಕಂಟೇನ್ಮೆಂಟ್ ಝೋನ್ ಮಾಡಲಾಗಿದೆ. 200 ಪ್ರಕರಣಗಳಿಗೆ ಇಳಿಕೆಯಾಗಿದ್ದ ಕೋವಿಡ್ ಈಗ ಪ್ರತಿನಿತ್ಯ 550ಕ್ಕಿಂತ ಹೆಚ್ಚು ಪ್ರಕರಣಗಳು ನಗರದಲ್ಲಿ ಪತ್ತೆಯಾಗುತ್ತಿವೆ.
- ಯಲಹಂಕದ ವಾರ್ಡ್ 3ರ ಇನ್ಸ್ಪೈರ್ ಲೈವ್ ಸ್ಯೂಟ್ ಪಿಜಿಯಲ್ಲಿ ಒಟ್ಟು 12 ಜನರಲ್ಲಿ ಪಾಸಿಟಿವ್ ಕಂಡು ಬಂದಿದೆ. ಮಾರ್ಚ್ 20ರವರೆಗೆ ಕಂಟೇನ್‌ಮೆಂಟ್ ಮಾಡಲಾಗಿದೆ.
- ಬೊಮ್ಮನಹಳ್ಳಿ ವಾರ್ಡ್ 186ರ ಓಮ್ ಅಪೆರೆಲ್ ಫ್ಯಾಕ್ಟರಿಯಲ್ಲಿ 13 ಜನಕ್ಕೆ ಪಾಸಿಟಿವ್ ಕಂಡು ಬಂದಿದ್ದು, ಮಾರ್ಚ್ 18ರವರೆಗೆ ಕಂಟೇನ್‌ಮೆಂಟ್ ಮಾಡಲಾಗಿದೆ.
- ಮಹದೇವಪುರದ ವಾರ್ಡ್ 55ರಲ್ಲಿ ಬಿ.ನಾರಾಯಣಪುರ ಸರ್ಕಾರಿ ಶಾಲೆಯಲ್ಲಿ 9 ಜನಕ್ಕೆ ಪಾಸಿಟಿವ್ ಕಂಡು ಬಂದಿದ್ದು, ಮಾರ್ಚ್ 19ರವರೆಗೆ ಕಂಟೇನ್‌ಮೆಂಟ್ ಇರಲಿದೆ.
- ಯಲಹಂಕ ವಾರ್ಡ್ 6ರ ನವಗ್ರಹ ಅಪಾರ್ಟ್ಮೆಂಟ್ನಲ್ಲಿ 6 ಜನರಲ್ಲಿ ಪಾಸಿಟಿವ್ ಇದ್ದು, ಮಾರ್ಚ್ 22ರವರೆಗೆ ಕಂಟೇನ್‌ಮೆಂಟ್ ಇರಲಿದೆ.
- ದಕ್ಷಿಣ ವಲಯದ ವಾರ್ಡ್164ರ ಸರ್ಕಾರಿ ಮೆಡಿಕಲ್ ಹಾಗೂ ಇಂಜಿನಿಯರಿಂಗ್ ಹಾಸ್ಟೆಲ್, ವಿದ್ಯಾಪೀಠದಲ್ಲಿ ಮಾರ್ಚ್ 12ರಂದು 8 ಜನರಲ್ಲಿ ಪಾಸಿಟಿವ್ ಕಂಡು ಬಂದಿದ್ದು, ಮಾರ್ಚ್ 26ರವರೆಗೆ ಕಂಟೇನ್‌ಮೆಂಟ್ ಇರಲಿದೆ.
- ದಾಸರಹಳ್ಳಿ ವಾರ್ಡ್ 15ರ ಟಿ ದಾಸರಹಳ್ಳಿ- ನೃಪತುಂಗ ರಸ್ತೆಯ ಬಳಿ 5 ಜನರಲ್ಲಿ ಪಾಸಿಟಿವ್ ಕಂಡು ಬಂದಿದ್ದು, ಮಾರ್ಚ್ 29ರವರೆಗೆ ಕಂಟೇನ್‌ಮೆಂಟ್ ಇರಲಿದೆ.
ನಗರದ ಹೊರವಲಯಗಳಲ್ಲೇ ಅತಿ ಹೆಚ್ಚು ಕೋವಿಡ್ ಪ್ರಕರಣ ಕಂಡು ಬರುತ್ತಿವೆ. ಬೆಳ್ಳಂದೂರು, ಹಗದೂರು, ಬಿಟಿಎಂಲೇಔಟ್, ಶಾಂತಲಾನಗರ, ಕೋಣನಕುಂಟೆ, ಜ್ಞಾನಭಾರತಿ ವಾರ್ಡ್, ಹೊಸಕೆರೆಹಳ್ಳಿ, ಬಾಣಸವಾಡಿ, ಬನಶಂಕರಿ ಟೆಂಪಲ್ ವಾರ್ಡ್, ದೊಡ್ಡನೆಕ್ಕುಂದಿ ವಾರ್ಡ್‌ಗಳಲ್ಲಿ ಅತಿಹೆಚ್ಚು ಕೋವಿಡ್ ಪಾಸಿಟಿವ್ ಪ್ರಕರಣಗಳಿವೆ.