ETV Bharat / state

ದೃಶ್ಯರೂಪಕದ ಮೂಲಕ ಕೊರೊನಾ ಜನ ಜಾಗೃತಿ - Covid awareness in Bengaluru By vishwbarati orgranization

ಕೊರೊನಾ ಹರಡಂತೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಬೆಂಗಳೂರಿನಲ್ಲಿ ವಿಶ್ವ ಭಾರತಿ ಚಾರಿಟಬಲ್ ಟ್ರಸ್ಟ್​ ಕಲಾವಿದರು ದೃಶ್ಯ ರೂಪಕದ ಮೂಲಕ ಜನ ಜಾಗೃತಿ ಮೂಡಿಸಿದರು.

Covid awareness in Bengaluru
ಬೆಂಗಳೂರಿನಲ್ಲಿ ದೃಶ್ಯರೂಪಕದ ಮೂಲಕ ಕೊರೊನಾ ಜನ ಜಾಗೃತಿ
author img

By

Published : Jul 7, 2020, 2:27 PM IST

ಬೆಂಗಳೂರು : ನಗರದ ಯಲಹಂಕ ಬಸ್ ನಿಲ್ದಾಣ ಸೇರಿದಂತೆ ಸಾರ್ವಜನಿಕ ಜಾಗಗಳಲ್ಲಿ ಹಾಡು, ಅಭಿನಯದ ಮೂಲಕ ಜನರಿಗೆ ಕೊರೊನಾ ಮಹಾಮಾರಿಯ ಕುರಿತು ಜಾಗೃತಿ ಮೂಡಿಸುವ ದೃಶ್ಯರೂಪಕ ಪ್ರದರ್ಶಿಸಲಾಯಿತು.

ವಿಶ್ವಭಾರತಿ ಚಾರಿಟಬಲ್ ಟ್ರಸ್ಟ್​​ನ ಕಲಾವಿದರು ಹಾಡು ಹಾಗೂ ನೃತ್ಯರೂಪಕವನ್ನು ಪ್ರದರ್ಶಿಸಿದರು. ಕೊರೊನಾ ಕುರಿತು ಎಚ್ಚರಿಕೆಯಿಂದ ಇರಿ, ಮಾಸ್ಕ್ ಬಳಸಿ, ದೈಹಿಕ ಅಂತರ ಕಾಪಾಡಿ, ಎಲ್ಲೆಂದರಲ್ಲಿ ಉಗುಳಬೇಡಿ, ಹಿರಿಯರು, ಮಕ್ಕಳು ಗರ್ಭಿಣಿಯರು ಮನೆಯಲ್ಲೇ ಇರಿ. ಅನಗತ್ಯ ಅಲೆದಾಟ ಬಿಡಿ ಇದರಿಂದ ಮನುಕುಲಕ್ಕೆ ಮಾರಕವಾದ ಕೊರೊನಾವನ್ನು ತಡೆಯಬಹುದು ಎಂದು ಹಾಡಿನ ಮೂಲಕ ಜನರಿಗೆ ತಿಳಿವಳಿಕೆ ಮೂಡಿಸಲಾಯಿತು.

ಪೊಲೀಸ್ ಸಿಬ್ಬಂದಿ ಹಾಗೂ ಯಲಹಂಕ ತಾಲೂಕು ಆಡಳಿತ ಮಂಡಳಿಯ ಸಹಯೋಗದಲ್ಲಿ ಈ ಜನ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗಿತ್ತು. ಕಲಾವಿದರಾದ ಆನಂದ್ ಮಾತನಾಡಿ, ಬಿಸಿನೀರು ಸೇವನೆ ಮಾಡುವುದು, ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಪಾಡುವುದರಿಂದ ಕೊರೊನಾದಿಂದ ದೂರ ಇರಬಹುದು. ಇದಕ್ಕೆ ಸೋಂಕಿತರ ಸಂಖ್ಯೆಯನ್ನು ಸೊನ್ನೆಗೆ ಇಳಿಸಿದ ನ್ಯೂಜಿಲ್ಯಾಂಡ್​​​​ ದೇಶ ಮಾದರಿ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.