ಬೆಂಗಳೂರು: ಕೊರೊನಾ ಅನ್ನೋ ಮಹಾಮಾರಿ ವ್ಯಾಪಕವಾಗಿ ಹರಡುತ್ತಲೇ ಇದೆ. ಇದನ್ನ ನಿಯಂತ್ರಣ ಮಾಡೋದಕ್ಕೆ ಲಾಕ್‌ಡೌನ್ ಹೇರಲಾಗಿತ್ತು. ಈ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ಬಹುತೇಕ ಜನರ ಓಡಾಟ ಸ್ಥಬ್ದವಾಗಿತ್ತು. ಇದರ ಪರಿಣಾಮ ಎಂಬಂತೆ ಅಕ್ರಮ ಚಟುವಟಿಕೆಗಳು, ರೌಡಿಸಂನಂತಹ ಎಲ್ಲಾ ಅಪರಾಧಿ ಕೆಲಸಗಳಿಗೆ ಬ್ರೇಕ್ ಬಿದ್ದಿದೆ.
ಕೊರೊನಾ ಬರುವುದಕ್ಕೂ ಮುನ್ನ ಕೊಲೆ, ಕೊಲೆ ಯತ್ನ, ಡ್ರಗ್, ರಾಬರಿ, ಸರಗಳ್ಳತನ, ಹೀಗೆ ಬೇರೆ ಅಪರಾಧ ಪ್ರಕರಣದ ಆರೋಪಿಗಳನ್ನ ಪತ್ತೆ ಹಚ್ಚುವುದು ಪೊಲೀಸರಿಗೆ ಕಷ್ಟಕರವಾಗಿತ್ತು. ಆರೋಪಿಗಳಿಗೆ ಶೋಧ ನಡೆಸಿ ನ್ಯಾಯಾಲಯದ ಮುಖಾಂತರ ವಾರೆಂಟ್ ಜಾರಿ ಮಾಡಿದರು ಕೂಡ ಆರೋಪಿಗಳು ಸಿಕ್ಕಿರಲಿಲ್ಲ. ಆದರೆ ಕೊರೊನಾಕ್ಕೆ ಹೆದರಿ ಬಹುತೇಕರು ತಮ್ಮ ಮನೆಗಳಲ್ಲಿ ಇದ್ದರು. ಆರೋಪಿಗಳ ಜಾಡು ಹಿಡಿಯಲು ಪೊಲೀಸರಿಗೆ ಲಾಕ್‌ಡೌನ್ ನೆರವಾಗಿದೆ.
ಆರೋಪಿಗಳ ಪೋನ್ ಲೋಕೇಷನ್ ಪತ್ತೆ ಮಾಡುವ ಮೂಲಕ ಪ್ರಮುಖ ಅಪರಾಧ ಪ್ರಕರಣದಲ್ಲಿ ಭಾಗಿಯಾದ ಒಟ್ಟು 74 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಕೊರೊನಾ ಟೆಸ್ಟ್ ನಡೆಸಿ ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಿ ಕೊಟ್ಟಿದ್ದಾರೆ.ಇನ್ನು ಇದರ ಬಗ್ಗೆ ಐಪಿಎಸ್ ಅಧಿಕಾರಿ ಶಶಿಕುಮಾರ್ ಮಾಹಿತಿ ನೀಡಿದ್ದಾರೆ.
ಲಾಕ್ ಡೌನ್ ಸಡಿಲಿಕೆಯಾಗುತ್ತಿದ್ದಂತೆ ಪೊಲೀಸರಲ್ಲಿ ಕೋವಿಡ್ ಸೋಂಕು ಕಾಣಿಸಿಕೊಳ್ಳುತ್ತಿದೆ. ಹಲವಾರು ಪ್ರಕರಣದಲ್ಲಿ ಆರೋಪಿಗಳನ್ನು ಹಿಡಿದು ಠಾಣೆಗೆ ಕರೆತರುವ ವೇಳೆ ನಮ್ಮ ಸಿಬ್ಬಂದಿಗೂ ಕೊರೊನಾ ದೃಢ ಪಟ್ಟಿದೆ. ಹೀಗಾಗಿ ಪೊಲೀಸರು ಸದ್ಯ ಆರೋಪಿಗಳನ್ನು ಹೆಡೆಮುರಿ ಕಟ್ಟೊದಕ್ಕೆ ಸದ್ಯದ ಪರಿಸ್ಥಿತಿಯಲ್ಲಿ ಹಿಂದೇಟು ಹಾಕ್ತಿದ್ದಾರೆ.