ETV Bharat / state

ದೇಶದ ಆರ್ಥಿಕತೆಯ ಮೇಲೆ ಕೋವಿಡ್-19 ಬೀರಿದ ಪರಿಣಾಮವೇನು.!? - ದೇಶದ ಆರ್ಥಿಕ ಕುಸಿತ

ಕೊರೊನಾ ಅಟ್ಟಹಾಸ ರಾಜ್ಯದಲ್ಲಿ ಹೆಚ್ಚಾಗುತ್ತಲೇ ಇದೆ. ರಾಜ್ಯ ಮೊದಲೇ ಆರ್ಥಿಕವಾಗಿ ದಿವಾಳಿಯ ಅಂಚಿನಲ್ಲಿದೆ. ಈ ಎಲ್ಲ ಸಂಕಷ್ಟದ ನಡುವೆ ಸಿಎಂ ಬಿ.ಎಸ್.ಯಡಿಯೂರಪ್ಪ ಹಲವು ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳಲೇಬೇಕಾಗಿದೆ.

Covid-19 gave tonic to the economic downturn
ದೇಶದ ಆರ್ಥಿಕ ಕುಸಿತಕ್ಕೆ ಟಾನಿಕ್ ನೀಡಿದ ಕೋವಿಡ್-19
author img

By

Published : Apr 18, 2020, 9:36 PM IST

Updated : Apr 18, 2020, 11:56 PM IST

ಬೆಂಗಳೂರು: ದೇಶದ ಆರ್ಥಿಕ ಸ್ಥಿತಿ ದಿನದಿಂದ ದಿನಕ್ಕೆ ಕುಸಿತ ಕಾಣುತ್ತಿದ್ದು, ಲಾಕ್​ಡೌನ್ ದೇಶವನ್ನು ಇನ್ನಷ್ಟು ಆರ್ಥಿಕವಾಗಿ ಹದಗೆಡುವಂತೆ ಮಾಡಿದೆ.

ಇದರ ನಡುವೆ ರಾಜ್ಯದ ಸ್ಥಿತಿ ಸುಧಾರಿಸಲು ಕೈಗೊಳ್ಳುತ್ತಿರುವ ಸರ್ಕಾರದ ಕೆಲ ನಿರ್ಧಾರಗಳು ಸಾಕಷ್ಟು ಟೀಕೆಗೆ ಗುರಿಯಾಗುತ್ತಿವೆ. ಕೊರೊನಾ ಅಟ್ಟಹಾಸ ರಾಜ್ಯದಲ್ಲಿ ಹೆಚ್ಚಾಗುತ್ತಲೇ ಇದೆ. ರಾಜ್ಯ ಮೊದಲೇ ಆರ್ಥಿಕವಾಗಿ ದಿವಾಳಿಯ ಅಂಚಿನಲ್ಲಿದೆ. ಸರ್ಕಾರಿ ನೌಕರರಿಗೆ ಸಂಬಳ ನೀಡಲು ಕಷ್ಟವಾಗಿದೆ. ಕೈಗೆತ್ತಿಕೊಂಡ ಯೋಜನೆ ನಿಭಾಯಿಸಲು ಹಣವಿಲ್ಲ. ಶಾಸಕರಿಗೆ ನೀಡುವ ಸಂಬಳವನ್ನೂ ಕತ್ತರಿಸಲಾಗಿದೆ. ಕೇಂದ್ರದಿಂದ ಬರುವ ಸಹಾಯಧನ ಸಿಕ್ಕಿಲ್ಲ. ತೆರಿಗೆ ಸಂಗ್ರಹದ ಪಾಲೂ ಸಿಕ್ಕಿಲ್ಲ. ಈ ಎಲ್ಲ ಸಂಕಷ್ಟದ ನಡುವೆ ಸಿಎಂ ಬಿ.ಎಸ್.ಯಡಿಯೂರಪ್ಪ ಹಲವು ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳಲೇಬೇಕಾಗಿದೆ. ಇದು ಪ್ರತಿಪಕ್ಷಗಳ ತೀವ್ರ ಟೀಕೆಗೂ ಕಾರಣವಾಗುತ್ತಿದೆ.

ಏ.20 ರಿಂದ ಕೊರೊನಾ ಹರಡುವಿಕೆ ಕಡಿಮೆ ಇರುವ ಪ್ರದೇಶಗಳಲ್ಲಿ ಪಾಸ್ ರಹಿತವಾಗಿ ದ್ವಿಚಕ್ರ ವಾಹನ ಸಂಚಾರಕ್ಕೆ ಅನುವು ಮಾಡಿಕೊಡುವುದಾಗಿ ಸಿಎಂ ಇಂದು ಘೋಷಿಸಿದ್ದರು. ಆದರೆ, ಇದೀಗ ಆದೇಶ ವಾಪಸ್ ಪಡೆದಿದ್ದಾರೆ. ಆನ್​​ಲೈನ್​ ವಸ್ತುಗಳನ್ನು ಪೂರೈಸುವವರು, ಕೊರಿಯರ್ ವ್ಯವಸ್ಥೆ, ಆನ್​ಲೈನ್ ವ್ಯವಸ್ಥೆ ಅಡಿ ಆಹಾರ ಪೂರೈಸುವವರು, ಹೋಟೆಲ್​ಗಳಲ್ಲಿ ಆಹಾರ ಕೊಂಡೊಯ್ಯುವವರು, ಸಣ್ಣಪುಟ್ಟ ವ್ಯಾಪಾರಿಗಳು, ಗಾರ್ಮೆಂಟ್ಸ್ ನೌಕರರು, ಉದ್ಯೋಗಿಗಳು ಹೆಚ್ಚಾಗಿ ಅವಲಂಬಿಸಿರುವುದು ದ್ವಿಚಕ್ರವಾಹನವನ್ನು ಇವುಗಳ ಸಂಚಾರಕ್ಕೆ ಪಾಸ್ ನೀಡಲು ಮುಂದಾದರೆ ಅದಕ್ಕೆ ಸಾಕಷ್ಟು ಕಾಲಾವಧಿ ಹಿಡಿಯಲಿದೆ. ಅಲ್ಲದೇ ರಾಜ್ಯದಲ್ಲಿ ಪರಿಸ್ಥಿತಿ ಕೊಂಚ ಸುಧಾರಿಸುತ್ತಿದೆ. ಈ ಸಂದರ್ಭ ಒಂದಿಷ್ಟು ವಾಹನ ಸಂಚಾರಕ್ಕೆ ನಿಯಮ ಸಡಿಲಿಸಲು ಸಿಎಂ ಮುಂದಾಗಿದ್ದರು ಎನ್ನಲಾಗುತ್ತಿದೆ. ಇದರಿಂದ ಆರ್ಥಿಕ ಕುಸಿತಕ್ಕೆ ಒಂದಿಷ್ಟು ಪರಿಹಾರ ಸಿಗುವುದು ಎಂಬ ಭರವಸೆಯೊಂದಿಗೆ ಈ ನಿಲುವು ಕೈಗೊಳ್ಳಲಾಗಿತ್ತು.

ಹಲವು ಮಾಹಿತಿ ತಂತ್ರಜ್ಞಾನ ಸಂಸ್ಥೆಗಳು ತಮ್ಮ ಅರ್ಧ ಸಿಬ್ಬಂದಿ ಬಳಸಿ ಕಂಪನಿ ನಡೆಸಲು ನಿರ್ಧರಿಸಿದ್ದು, ಸಿಎಂಗೆ ಮನವಿ ಮಾಡಿವೆ. ಈ ಹಿನ್ನೆಲೆ ಇಂತಹದ್ದೊಂದು ಅವಕಾಶ ನೀಡಲಾಗಿದೆ ಎಂಬ ಮಾತಿದೆ. ಸುಮ್ಮನೆ ಕುಳಿತರೆ ರಾಜ್ಯಕ್ಕೆ ನಷ್ಟ ಇನ್ನಷ್ಟು ಹೆಚ್ಚಲಿದೆ. ಇದರಿಂದ ಕೆಲ ಪ್ರದೇಶಕ್ಕೆ ಪ್ರವೇಶವೇ ನಿಲ್ಲಿಸಿರುವ ಹಿನ್ನೆಲೆ ಉಳಿದೆಡೆ ತೆರಳಲು ಅವಕಾಶ ನೀಡಿ ಆರ್ಥಿಕ ಸದೃಢತೆ ಸಾಧಿಸುವ ಯತ್ನ ನಡೆದಿದೆ ಎನ್ನಲಾಗುತ್ತಿದೆ. ಆದರೆ ಇದಕ್ಕೆ ವಿರೋಧ ಬಂದ ಹಿನ್ನೆಲೆ ಸರ್ಕಾರ ನಿರ್ಧಾರ ವಾಪಸ್ ಪಡೆದಿದ್ದು, ಆರ್ಥಿಕ ಹಿಂಜರಿತ ತಡೆಯಲು ಬೇರೆ ಮಾರ್ಗ ಹುಡುಕಬೇಕಾಗಿದೆ.

ದೇಶದ ಅರ್ಥ ವ್ಯವಸ್ಥೆ : 2021 ರಲ್ಲಿ ಭಾರತದ ಆರ್ಥಿಕ ಬೆಳವಣಿಗೆ ಶೇ.2.8 ರಷ್ಟು ಇರಲಿದೆ ಎಂದು ಅಂದಾಜಿಸಿರುವ ವಿಶ್ವ ಬ್ಯಾಂಕ್, ದೇಶೀಯ ಹೂಡಿಕೆಯಲ್ಲಾಗುವ ವಿಳಂಬದಿಂದಾಗಿ ಸೇವಾ ವಲಯದ ಬೆಳವಣಿಗೆ ಕುಂಠಿತಗೊಳ್ಳಲಿದೆ ಎಂದು ತಿಳಿಸಿದೆ. ಕೋವಿಡ್-19 ಪ್ರಭಾವದಿಂದಾಗಿ ಭಾರತದ ಆರ್ಥಿಕ ಸ್ಥಿತಿ ತೀರಾ ಹದಗೆಟ್ಟಿದೆ. ನಿರಂತರ 21 ದಿನಗಳ ಲಾಕ್​ಡೌನ್ ಹಾಗೂ ಲಾಕ್​ಡೌನ್ ಮುಂದುವರೆಸುವ ನಿರ್ಧಾರದಿಂದ, ಭಾರತ ಭವಿಷ್ಯದಲ್ಲಿ ಆರ್ಥಿಕ ಸಂಕಷ್ಟವನ್ನು ಎದುರಿಸಲಿದೆ ಎಂದು ಎಚ್ಚರಿಸಿದೆ.

ಕೊರೊನಾ ದೇಶದ ಆರ್ಥಿಕ ಬೆಳವಣಿಗೆಗೆ ನಕಾರಾತ್ಮಕ ಪರಿಣಾಮ ಬೀರುತ್ತಿದೆ. ವಿಶ್ವವೇ ಕೊರೊನಾ ವೈರಸ್​ನಿಂದಾಗಿ ತತ್ತರಿಸಿ ಹೋಗುತ್ತಿರುವಾಗ ಅಭಿವೃದ್ಧಿ ಹೊಂದುತ್ತಿರುವ ಭಾರತದ ಸ್ಥಿತಿ ಇನ್ನಷ್ಟು ದಯನೀಯವಾಗಲಿದೆ ಎಂದು ಹೇಳಲಾಗುತ್ತಿದೆ. 2022 ರಲ್ಲಿ ಭಾರತದ ಆರ್ಥಿಕ ಬೆಳವಣಿಗೆ ದರ ಶೇ. 5.0 ಕ್ಕೆ ಏರಲಿದೆ ಎಂದು ಅಭಿಪ್ರಾಯಪಟ್ಟಿರುವ ವಿಶ್ವ ಬ್ಯಾಂಕ್, ಸದ್ಯದ ಸವಾಲುಗಳು ಭಾರತಕ್ಕೆ ತನ್ನ ಆರ್ಥಿಕತೆಯನ್ನು ದೀರ್ಘಾವಧಿಯಲ್ಲಿ ಸುಸ್ಥಿರವಾಗಿ ಇಡಲು ಅವಕಾಶ ಒದಗಿಸಿದೆ ಎಂದು ಹೇಳಿದೆ.

ಇದೇ ಮಾತಿನಂತೆ ದೇಶ ಪ್ರಗತಿಯತ್ತ ಸಾಗಲು ಪ್ರತಿ ರಾಜ್ಯವೂ ಶ್ರಮಿಸಬೇಕಿದೆ. ಈ ನಿಟ್ಟಿನಲ್ಲಿ ಬಿಜೆಪಿ ಅಧಿಕಾರದಲ್ಲಿರುವ ಕರ್ನಾಟಕದ ಕೊಡುಗೆಯೂ ಅತ್ಯಂತ ಪ್ರಮುಖವಾಗಲಿದೆ.

Last Updated : Apr 18, 2020, 11:56 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.