ಬೆಂಗಳೂರು : ನಾಡ ಬಂದೂಕುಗಳ ಮಾರಾಟದಲ್ಲಿ ತೊಡಗಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಕನಕಪುರ ಮೂಲದ ಲಿಂಗಾಚಾರಿ (58) ಎಂಬುವನನ್ನ ಶಸ್ತ್ರಾಸ್ತ್ರ ಕಾಯ್ದೆಯಡಿ ಸಿ ಕೆ ಅಚ್ಚುಕಟ್ಟು ಠಾಣಾ ಪೊಲೀಸರು ಬಂಧಿಸಿದ್ದಾರೆ. ನಾಡ ಬಂದೂಕುಗಳ ರಿಪೇರಿ ಲೈಸೆನ್ಸ್ ಪಡೆದಿದ್ದ ಆರೋಪಿ ಲಿಂಗಾಚಾರಿ, ಲಾಕ್ಡೌನ್ ಬಳಿಕ ಕೆಲಸವಿಲ್ಲದೇ ಆರ್ಥಿಕ ಸಂಕಷ್ಟ ಎದುರಿಸಿದ್ದ.
ಇದ್ದ ಬಂದೂಕು ರಿಪೇರಿ ಲೈಸೆನ್ಸ್ ಸಹ ನವೀಕರಿಸಿರಲಿಲ್ಲ. ಇದೇ ವೇಳೆ ಕೆಲ ಗ್ರಾಹಕರು ಬಂದೂಕು ತಯಾರಿಸುವಂತೆ ಆರೋಪಿಗೆ ಸಲಹೆ ನೀಡಿದ್ದರು. ಕುಡಿತದ ದಾಸನಾಗಿದ್ದ ಲಿಂಗಾಚಾರಿ ಸುಲಭವಾಗಿ ಹಣ ಮಾಡುವ ಉದ್ದೇಶದಿಂದ ತಾನೇ ನಾಡ ಬಂದೂಕು ತಯಾರಿಸಿ 15-20 ಸಾವಿರಕ್ಕೆ ಮಾರಾಟ ಮಾಡಲಾರಂಭಿಸಿದ್ದ.
ಸದ್ಯ ಆರೋಪಿಯನ್ನ ಬಂಧಿಸಿರುವ ಚೆನ್ನಮ್ಮನ ಕೆರೆ ಅಚ್ಚುಕಟ್ಟು ಠಾಣಾ ಪೊಲೀಸರು ಬಂಧಿತನಿಂದ ಒಟ್ಟು 11 ಸಿಂಗಲ್ ಬ್ಯಾರೆಲ್ ನಾಡ ಬಂದೂಕು, ಬಂದೂಕು ತಯಾರಿಗೆ ಬಳಸುವ ಸಲಕರಣೆಗಳನ್ನ ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ:ಮಂಗಳನ ಅಂಗಳದಲ್ಲಿ ರೋವರ್ ಲ್ಯಾಂಡಿಂಗ್... ನಾಸಾದಿಂದ ಮತ್ತೊಂದು ಮೈಲಿಗಲ್ಲು