ETV Bharat / state

ಹೊಸ ವರ್ಷದ ಸಂಭ್ರಮಾಚರಣೆಗೆ ಕೌಂಟ್ ಡೌನ್; ಸಿಸಿಟಿವಿ ನಿಯಂತ್ರಣಕ್ಕೆ ಪ್ರತ್ಯೇಕ ವಾರ್ ರೂಮ್ - cctv war room

ಹೊಸ ವರ್ಷ ಸಂಭ್ರಮಾಚರಣೆಯಲ್ಲಿ ಸಿಲಿಕಾನ್​ ಸಿಟಿ - ಪಾರ್ಟಿ ಪ್ರಿಯರ ಮೇಲೆ ಖಾಕಿ ಹದ್ದಿನ ಕಣ್ಣು - ಅಹಿತಕರ ಘಟನೆ ನಡೆಯದಂತೆ ಕಟ್ಟೆಚ್ಚರ

ಹೊಸ ವರ್ಷದ ಸಂಭ್ರಮಾಚರಣೆಗೆ ಕೌಂಟ್ ಡೌನ್; ಸಿಸಿಟಿವಿ ನಿಯಂತ್ರಣಕ್ಕೆ ಪ್ರತ್ಯೇಕ ವಾರ್ ರೂಮ್
countdown-to-new-year-celebrations-separate-war-room-for-cctv-control
author img

By

Published : Dec 31, 2022, 10:01 AM IST

ಬೆಂಗಳೂರು: ಬರೋಬ್ಬರಿ ಎರಡು ವರ್ಷಗಳ ಬಳಿಕ ಹೊಸ ವರ್ಷದ ಸಂಭ್ರಮಾಚರಣೆಗೆ ಸಿಲಿಕಾನ್ ಸಿಟಿ‌ ಬೆಂಗಳೂರು ಸಿದ್ಧವಾಗಿದೆ. ಕೋವಿಡ್ ಕಾರಣದಿಂದ ಎರಡು ವರ್ಷ ಸಾಮೂಹಿಕ ಸಂಭ್ರಮಾಚರಣೆಗೆ ವಿಧಿಸಲಾಗಿದ್ದ ನಿರ್ಬಂಧ ಈ ವರ್ಷ ಇಲ್ಲ. ಇವತ್ತು ಸಂಜೆಯಿಂದಲೇ ನಗರದ ಪ್ರಮುಖ ಸ್ಥಳಗಳಲ್ಲಿ ಪಾರ್ಟಿ ಪ್ರಿಯರು ಕಿಕ್ಕಿರಿದು ಸೇರುವ ನಿರೀಕ್ಷೆಯಿದೆ. ಆದ್ದರಿಂದ ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ನೀಡದಂತೆ ಎಚ್ಚರ ವಹಿಸುವ ಜವಬ್ದಾರಿ ಬೆಂಗಳೂರು ಪೊಲೀಸರ ಮೇಲಿದೆ.

ಬೆಂಗಳೂರಿನಲ್ಲಿ ಹೊಸ ವರ್ಷದ ಸಂಭ್ರಮಾಚರಣೆ ಎಂದರೆ ಮೊದಲು ನೆನಪಾಗುವುದೇ ಬ್ರಿಗೇಡ್ ರೋಡ್, ಎಂ.ಜಿ.ರೋಡ್ ಹಾಗೂ ಚರ್ಚ್ ಸ್ಟ್ರೀಟ್. ಈ ಮೂರು ರಸ್ತೆಗಳಲ್ಲಿ ಪಾರ್ಟಿ ಪ್ರಿಯರ ಸಂಖ್ಯೆ ಅಧಿಕವಾಗಿರಲಿದ್ದು, ಭದ್ರತಾ ದೃಷ್ಟಿಯಿಂದ ರಸ್ತೆಯ ಮೂಲೆ ಮೂಲೆಯಲ್ಲಿ ಸಿಸಿಟಿವಿಗಳನ್ನ ಅಳವಡಿಸಲಾಗಿದೆ. ಎಲ್ಲ ಸಿಸಿಟಿವಿ ದೃಶ್ಯಗಳ ಮೇಲೆ ಕಣ್ಣಿಡಲು ಬ್ರಿಗೇಡ್ ರಸ್ತೆಯ ಖಾಸಗಿ ಹೋಟೆಲ್ ನಲ್ಲಿ ತಾತ್ಕಾಲಿಕ ವಾರ್ ರೂಮ್ ತೆರೆಯಲಾಗಿದ್ದು, 500ಕ್ಕೂ ಅಧಿಕ ಸಿಸಿಟಿವಿಗಳನ್ನ ಒಂದೇ ಕೊಠಡಿಯಿಂದ ನಿಯಂತ್ರಿಸುವ ವ್ಯವಸ್ಥೆ ಒದಗಿಸಲಾಗಿದೆ.

ಐದು ಮಂದಿ ಪೊಲೀಸ್ ಹಾಗೂ ಖಾಸಗಿ ಏಜೆನ್ಸಿ ಸಿಬ್ಬಂದಿ ಸಿಸಿಟಿವಿಯಲ್ಲಿ ಸೆರೆಯಾಗುವ ಪ್ರತಿ ಕ್ಷಣ ಕ್ಷಣದ ದೃಶ್ಯಾವಳಿಗಳ ಮೇಲೆ ಹದ್ದಿನ ಕಣ್ಣಿಡಲಿದ್ದಾರೆ‌. ಜನಸಂದಣಿಯಲ್ಲಿ ಅನುಚಿತ ವರ್ತನೆ, ಕಳ್ಳತನದಂತಹ ಕೃತ್ಯಗಳು ಕಂಡು ಬಂದರೆ ಸ್ಥಳದಲ್ಲಿ ನಿಯೋಜನೆಯಾಗಿರುವ ಪೊಲೀಸ್ ಸಿಬ್ಬಂದಿಗೆ ತಕ್ಷಣ ಮಾಹಿತಿ ರವಾನಿಸಲಿದ್ದಾರೆ‌. ಅಂತಹ ಆರೋಪಿಗಳನ್ನ ಸ್ಥಳದಲ್ಲಿರುವ ಸಿಬ್ಬಂದಿ ವಶಕ್ಕೆ ಪಡೆಯಲಿದ್ದಾರೆ.

ಇದನ್ನೂ ಓದಿ: ಜನವರಿ 1 ರಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನೂತನ ಗೈಡ್ ಲೈನ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.