ETV Bharat / state

ಕಾಂಗ್ರೆಸ್​​ನ ಮೇಕೆದಾಟು ಪಾದಯಾತ್ರೆ ಚಾಲನೆಗೆ ಕ್ಷಣಗಣನೆ - ಮೇಕೆದಾಟು ಯೋಜನೆ ತ್ವರಿತ ಜಾರಿಗೆ ಆಗ್ರಹಿಸಿ ಪಾದಯಾತ್ರೆ

ಮೇಕೆದಾಟು ಯೋಜನೆಯ ತ್ವರಿತ ಜಾರಿಗೆ ಆಗ್ರಹಿಸಿ ಕಾಂಗ್ರೆಸ್ ಪಕ್ಷ ನಡೆಸುತ್ತಿರುವ ಹೋರಾಟಕ್ಕೆ ಇಂದು ಬೆಳಗ್ಗೆ 8.30ಕ್ಕೆ ಚಾಲನೆ ಸಿಗಲಿದೆ.

Countdown to Mekedatu Padayatra
ಕಾಂಗ್ರೆಸ್​​ನ ಮೇಕೆದಾಟು ಪಾದಯಾತ್ರೆ ಚಾಲನೆಗೆ ಕ್ಷಣಗಣನೆ
author img

By

Published : Jan 9, 2022, 7:20 AM IST

Updated : Jan 9, 2022, 7:28 AM IST

ರಾಮನಗರ/ಬೆಂಗಳೂರು: ಕಾಂಗ್ರೆಸ್​​ ಪಕ್ಷದ ಮೇಕೆದಾಟು ಪಾದಯಾತ್ರೆಗೆ ಕ್ಷಣಗಣನೆ ಆರಂಭವಾಗಿದ್ದು, ವಿಶೇಷ ಪೂಜಾ ವಿಧಿವಿಧಾನಗಳು ನೆರವೇರಲಿವೆ. ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಸಂಗಮದಿಂದ ಆರಂಭವಾಗಲಿರುವ 10 ದಿನಗಳ ಪಾದಯಾತ್ರೆಗೆ ಈ ಮೂಲಕ ಚಾಲನೆ ದೊರೆಯಲಿದೆ.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆಯುವ ಈ ಪಾದಯಾತ್ರೆಯಲ್ಲಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ.

ನಟ ಶಿವರಾಜ್ ಕುಮಾರ್ ಚಾಲನೆ?:

ಪಾದಯಾತ್ರೆಗೆ ನಟ ಶಿವರಾಜ್ ಕುಮಾರ್ ಚಾಲನೆ ನೀಡಲಿದ್ದಾರೆ ಎಂಬ ಮಾಹಿತಿ ಇದೆ. ಮೊದಲ ದಿನ 15 ಕಿ.ಮೀ ಪಾದಯಾತ್ರೆ ನಡೆಯಲಿದೆ. ಸಂಗಮದಿಂದ ದೊಡ್ಡ ಆಲಹಳ್ಳಿಯವರೆಗೂ ನಡೆಯಲಿರುವ ಪಾದಯಾತ್ರೆಗೆ ಸರ್ಕಾರ ಈಗಾಗಲೇ ಅನುಮತಿ ನಿರಾಕರಿಸಿದೆ. ರಾಮನಗರ ಜಿಲ್ಲೆಯಾದ್ಯಂತ 144ನೇ ಸೆಕ್ಷನ್ ಜಾರಿಗೊಳಿಸಲಾಗಿದ್ದು, ಪಾದಯಾತ್ರೆ ನಡೆಸಿದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಸ್​ಪಿ ಗಿರೀಶ್ ತಿಳಿಸಿದ್ದಾರೆ.

ಇದನ್ನೂ ಓದಿ: ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ನೂರೆಂಟು ವಿಘ್ನ; ಮೇಕೆದಾಟು ಯೋಜನೆಯ ಕಾಲಾನುಕ್ರಮ ಪ್ರಗತಿ ಹೇಗಿದೆ ನೋಡಿ

ಆದರೆ, ಪಾದಯಾತ್ರೆ ಮಾಡೇ ಮಾಡುತ್ತೇವೆ ಎಂದಿರುವ ಕಾಂಗ್ರೆಸ್ ನಾಯಕರು ಯಾವುದೇ ಅಡ್ಡಿ-ಆತಂಕಗಳು ಎದುರಾದರೂ ಪಾದಯಾತ್ರೆ ನಿಲ್ಲಿಸುವುದಿಲ್ಲ ಎಂದು ತಿಳಿಸಿದ್ದಾರೆ. ಕಾಂಗ್ರೆಸ್ ಪಕ್ಷದ ಎಲ್ಲಾ ನಾಯಕರು ಈಗಾಗಲೇ ಕನಕಪುರ ತಲುಪಿದ್ದು, ಬೆಳಗ್ಗೆ ಸಂಗಮದತ್ತ ಪ್ರಯಾಣ ಬೆಳೆಸಿದರು.

ಮಧ್ಯರಾತ್ರಿ ಸ್ವಲ್ಪಕಾಲ ಸುತ್ತಾಡಿ ಸಂಗಮದಲ್ಲಿ ಉಳಿದ ಡಿಕೆಶಿ ಬೆಳಗ್ಗೆ ಅಲ್ಲಿ ನಡೆಯುವ ಪೂಜಾ ವಿಧಿವಿಧಾನಗಳಲ್ಲಿ ಪಾಲ್ಗೊಳ್ಳುವರು. ಪಾದಯಾತ್ರೆ ಚಾಲನೆ ಸಮಾರಂಭವನ್ನು ಯಶಸ್ವಿಗೊಳಿಸುವ ಸಲುವಾಗಿ ಸ್ಥಳೀಯ ಮುಖಂಡರ ಜತೆ ಸಭೆ ನಡೆಸಿದ್ದು, ನಿನ್ನೆ(ಶನಿವಾರ) ತಡರಾತ್ರಿವರೆಗೂ ಅಗತ್ಯ ಸಿದ್ಧತೆಗಳ ಪರಿಶೀಲನೆ ನಡೆಸಿದ್ದಾರೆ.

ಪಾದಯಾತ್ರೆ ಯಶಸ್ಸಿಗೆ ಹಾರೈಸಿ ಬೆಳಿಗ್ಗೆಯಿಂದ ನಡೆಯಲಿರುವ ಗಣಹೋಮ ಪೂಜೆಯಲ್ಲಿ ಸಹ ಡಿಕೆಶಿ ಪಾಲ್ಗೊಳ್ಳುತ್ತಿದ್ದಾರೆ. ಪಾದಯಾತ್ರೆ ನಿರ್ವಿಘ್ನವಾಗಿ ನೆರವೇರಲಿ ಎಂದು ಆಶಿಸಿ ನಿನ್ನೆ(ಶನಿವಾರ) ಡಿ.ಕೆ ಶಿವಕುಮಾರ್ ಕುಟುಂಬ ಸಮೇತರಾಗಿ ಕನಕಪುರದ ದೇವಾಲಯ, ಮಸೀದಿ ಹಾಗು ಚರ್ಚ್‌ಗೆ ಭೇಟಿ ನೀಡಿ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದರು.

ಇದನ್ನೂ ಓದಿ: ದೇವಸ್ಥಾನಗಳಲ್ಲಿ ನಗಾರಿ ಬಾರಿಸಿ, ಮಸೀದಿಗೆ ತೆರಳಿ ಪ್ರಾರ್ಥಿಸಿ.. ಪಾದಯಾತ್ರೆಗೂ ಮೊದಲು ದೇವರ ಮೊರೆ ಹೋದ ಡಿಕೆಶಿ..

Last Updated : Jan 9, 2022, 7:28 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.