ETV Bharat / state

ಶಾಸಕ ನಾರಾಯಣರಾವ್ ನಿಧನಕ್ಕೆ ವಿಧಾನ ಪರಿಷತ್​​ನಲ್ಲಿ ಸಂತಾಪ ಸೂಚಿಸಿದ ನಾಯಕರು - ಶಾಸಕ ನಾರಾಯಣರಾವ್ ನಿಧನ,

ಶಾಸಕ ನಾರಾಯಣರಾವ್ ನಿಧನಕ್ಕೆ ವಿಧಾನ ಪರಿಷತ್​ನಲ್ಲಿ ಬಿಜೆಪಿ, ಕಾಂಗ್ರೆಸ್​ ಸೇರಿದಂತೆ ಹಿರಿಯ ರಾಜಕಾರಣಿಗಳು ಸಂತಾಪ ಸೂಚಿಸಿದರು.

Council members condolence, Council members condolence on death of MLA Narayan Rao, MLA Narayan Rao no more, MLA Narayan Rao no more news, ಶಾಸಕ ನಾರಾಯಣರಾವ್ ನಿಧನಕ್ಕೆ ಸಂತಾಪ, ಶಾಸಕ ನಾರಾಯಣರಾವ್ ನಿಧನಕ್ಕೆ ಸಂತಾಪ ಸೂಚಿಸಿದ ವಿಧಾನ ಪರಿಷತ್, ಶಾಸಕ ನಾರಾಯಣರಾವ್ ನಿಧನ, ಶಾಸಕ ನಾರಾಯಣರಾವ್ ನಿಧನ ಸುದ್ದಿ,
ಶಾಸಕ ನಾರಾಯಣರಾವ್ ನಿಧನಕ್ಕೆ ಸಂತಾಪ ಸೂಚಿಸಿದ ವಿಧಾನ ಪರಿಷತ್
author img

By

Published : Sep 25, 2020, 3:14 PM IST

ಬೆಂಗಳೂರು: ಕಾಂಗ್ರೆಸ್ ಮತ್ತು ಬಿಜೆಪಿ ಸೇರಿದಂತೆ ಹಿರಿಯ ರಾಜಕಾರಣಿಗಳು ಶಾಸಕ ನಾರಾಯಣರಾವ್ ನಿಧ‌ಕ್ಕೆ ವಿಧಾನ ಪರಿಷತ್​ನಲ್ಲಿ ಸಂತಾಪ ಸೂಚಿಸಿ ಗೌರವ ಸಲ್ಲಿಕೆ ಮಾಡಿದರು.

ವಿಧಾನ ಪರಿಷತ್ ಬೆಳಗಿನ ಕಲಾಪ ಆರಂಭಗೊಳ್ಳುತ್ತಿದ್ದಂತೆ ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ಅವರು ನಾರಾಯಣರಾವ್ ನಿಧನಕ್ಕೆ ಸಂತಾಪ ಸೂಚಿಸಿದರು.

ಸಂತಾಪ ಸೂಚಿಸಿ ಮಾತನಾಡಿದ ಪ್ರತಿಪಕ್ಷ ನಾಯಕ ಎಸ್.ಆರ್.ಪಾಟೀಲ್, ನಾರಾಯಣರಾವ್ ಅವರು ಜನರಪರ ಕಾಳಜಿ ಇದ್ದ ಶಾಸಕರು. ಬೀದರ್​ನಲ್ಲಿ ಅನುಭವ ಮಂಟಪ ನಿರ್ಮಾಣ ಮಾಡವ ತನಕ ನಾನು ಸಾಯಲ್ಲ ಅಂತ ಹೇಳುತ್ತಾ ಇದ್ದರು. ಅನುಭವ ಮಂಟಪವನ್ನು ರಾಷ್ಟ್ರಪತಿಗಳಿಂದ ಉದ್ಘಾಟನೆ ಮಾಡಿಸಬೇಕು ಅಂದಿದ್ದರು. ಆದರೆ ಅದಕ್ಕೂ ಮೊದಲೇ ನಿಧನರಾಗಿದ್ದು, ಆಘಾತ ತಂದಿದೆ ಎಂದರು.

ಬಿಜೆಪಿ ಸದಸ್ಯ ರಘುನಾಥ ಮಲ್ಕಾಪುರೆ ಮಾತನಾಡಿ, ನಾರಾಯಣ ರಾವ್ ಹೋರಾಟದಿಂದ ಬಂದವರು. ಬೀದರ್​ನಿಂದ ಸೈಕಲ್​ನಲ್ಲಿ ಬಂದು ಅಂದಿನ ಸಿಎಂ ದೇವರಾಜ ಅರಸು ಅವರಿಗೆ ಮನವಿ ಸಲ್ಲಿಸಿದ್ದರು. ವಿದ್ಯಾರ್ಥಿ ಜೀವನದಿಂದ ಹೋರಾಟ ಮಾಡಿಕೊಂಡು ಬಂದು, ದೇವರಾಜ ಅರಸು ಅವರ ರಾಜಕೀಯ ಪ್ರಭಾವ ಹೊಂದಿ ಮುಂದೇ ಅವರ ಜೊತೆಗೆ ರಾಜಕಾರಣದಲ್ಲಿ ಗುರುತಿಸಿಕೊಂಡರು ಎಂದು ನೆನಪಿಸಿಕೊಂಡರು.

ಬಿಜೆಪಿ ಸದಸ್ಯ ಶಾಂತರಾಮ್ ಸಿದ್ದಿ ಮಾತನಾಡಿ, ನಾರಾಯಣರಾವ್ ಬುಡಕಟ್ಟು ಜನಾಂಗದ ಏಳಿಗೆಗೆ ಶ್ರಮಿಸಿದ್ದರು. ಮುಂದೇ ನಾನು ಅವರನ್ನ ಭೇಟಿ ಮಾಡಬೇಕಾಗಿತ್ತು. ಆದರೆ ವಿಧಿ ಅಷ್ಟರಲ್ಲಿ ಬೇರೆ ಮಾಡಿದೆ. ಕಾಂಗ್ರೆಸ್ ಶಾಸಕ ನಾರಾಯಣ್ ರಾವ್ ಶೋಷಿತರ ಪರವಾಗಿ ಕೆಲಸ ಮಾಡ್ತಾಯಿದ್ರು. ಶೋಷಿತರ ಪರವಾಗಿ ಸಾಕಷ್ಟು ಕನಸು ಹೊಂದಿದ್ದು, ಶಿಕ್ಷಣ ಕ್ಷೇತ್ರಕ್ಕೆ ಒತ್ತು ಕೊಟ್ಟಿದ್ದರು. ಆ ಭಾಗದ ಜನರಿಗೆ ಉಚಿತವಾಗಿ ಶಿಕ್ಷಣ ಕೊಡ್ತಾಯಿದ್ದರು. ಕೊರೊನಾ ಸೋಂಕಿನಿಂದ ನಿಧನ ಹೊಂದಿದ್ದು, ನಮಗೆಲ್ಲರಿಗೂ ನೋವು ತಂದಿದೆ ಎಂದರು.

ಕಾಂಗ್ರೆಸ್ ಸದಸ್ಯ ಸಿಎಂ ಇಬ್ರಾಹಿಂ ಮಾತನಾಡಿ, ನಾರಾಯಣ್ ರಾವ್ ಜೆಪಿ ಚಳವಳಿಯಿಂದ ಬಂದವರು. ಜನಸ್ನೇಹಿಯಾಗಿದ್ದರು. ಬೀದರ್ ಭಾಗದಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿದ್ದರು ಎಂದು ತಿಳಿಸಿದರು.

ಬಿಜೆಪಿ ಸದಸ್ಯ ರವಿಕುಮಾರ್ ಮಾತನಾಡಿ, ನಾರಾಯಣ್ ರಾವ್ ಹೆಚ್ಚು ಪರಿಚಯ ಇರಲಿಲ್ಲ. ಶೋಷಿತರ ಪರವಾಗಿ ಇದ್ದರು. ಕೋಳಿ, ಗಂಗಾಮತ ಸಮುದಾಯಗಳನ್ನು ಎಸ್​ಸಿಗೆ ಸೇರಿಸಬೇಕು ಅಂತ ಹೋರಾಟ ಮಾಡುತ್ತಿದ್ದರು. ಆದರೆ ಇಂದು ಅವರಿಲ್ಲ. ನಾರಾಯಣ್ ರಾವ್ ಹೋರಾಟಗಳು ಜೀವಂತವಾಗಿವೆ. ಕೆಳಹಂತದ ಜನರ ಪರವಾಗಿ ಇದ್ದವರ ಸಾವು-ನೋವು ತಂದಿದೆ. ಅವರು ಅನುಭವ ಮಂಟಪದ ಕನಸು ಹೊಂದಿದ್ದರು. ಅದರ ನಿರ್ಮಾಣ ನೋಡಬೇಕಿತ್ತು ಎಂದು ಬೇಸರ ವ್ಯಕ್ತಪಡಿಸಿದರು.

ಬಿಜೆಪಿ ಸದಸ್ಯ ಹೆಚ್.ವಿಶ್ವನಾಥ್ ಮಾತನಾಡಿ, ನಾರಾಯಣ್ ರಾವ್ ಅಗಲಿಕೆ ನೋವು ತಂದಿದೆ. ದೇವರಾಜ ಅರಸು ಅವರ ಅನುಯಾಯಿ ಆಗಿದ್ದರು. ಶೋಷಿತರ ಪರವಾಗಿ ಹೋರಾಟ ಮಾಡುತ್ತಿದ್ದ ನಾಯಕ. ನಾರಾಯಣ್ ರಾವ್ ಸರಳ ಸಜ್ಜನ ರಾಜಕಾರಣಿ ಎಂದು ಸ್ಮರಿಸಿದರು.

ಡಿಸಿಎಂ ಲಕ್ಷ್ಮಣ ಸವದಿ ಮಾತನಾಡಿ, ನಿನ್ನೆ ನಾನು ದೆಹಲಿಯಲ್ಲಿ ಇದ್ದೆ. ಅಂಗಡಿ ಅವರ ಅಂತ್ಯಕ್ರಿಯೆಗೆ ಹೋಗಿದ್ದೆ. ಈ ಸಂದರ್ಭದಲ್ಲಿ ಶಾಸಕರ ನಿಧನದ ಸುದ್ದಿ ಬಂತು. ನಾರಾಯಣ್ ರಾವ್ ಹೋರಾಟದಿಂದ ಬಂದವರು. ಬಡವರು ಮತ್ತು ತುಳಿತಕ್ಕೆ ಒಳಗಾದವರ ಬಗ್ಗೆ ಕಾಳಜಿ ಹೊಂದಿದ್ದರು. ಅನುಭವ ಮಂಟಪ ನಿರ್ಮಾಣದ ಕನಸು ಹೊಂದಿದ್ದರು. ಈಗ ಯಡಿಯೂರಪ್ಪ ಅವರು ಹಣ ಬಿಡುಗಡೆ ಮಾಡಿದ್ದಾರೆ. ಅವರ ಕನಸು ನನಸಾಯ್ತು. ಆದರೆ ಅದನ್ನ ನೋಡಲು ಅವರಿಲ್ಲ ಎನ್ನುವುದೇ ಬೇಸರ ಎಂದರು.

ಕಾಂಗ್ರೆಸ್ ಸದಸ್ಯ ನಾರಾಯಣ್ ಸ್ವಾಮಿ ಮಾತನಾಡಿ, ನಮ್ಮ ಶಾಸಕರು ನಿಧನ ಹೊಂದಿದ್ದು, ಬಹಳ ನೋವು ತಂದಿದೆ. ಅವರ ಸಾವಿನಿಂದ ರಾಜ್ಯ ಬಡವಾಗಿದೆ. ಕಾಂಗ್ರೆಸ್ ಸಂಘಟನೆಯಲ್ಲಿ ಅವರ ಪಾತ್ರ ಮುಖ್ಯ. ಪಕ್ಷ ಕೊಟ್ಟ ಕೆಲಸವನ್ನು ಚಾಚು ತಪ್ಪದೆ ಪಾಲಿಸುತ್ತಾ ಇದ್ದರು ಎಂದರು.

ಬಿಜೆಪಿ ಸದಸ್ಯೆ ತೇಜಸ್ವಿನಿ ಮಾತನಾಡಿ, ನಾರಾಯಣ್ ರಾವ್ ಮೌಲ್ಯಯುತವಾದ ರಾಜಕಾರಣಿ. ಬುಡಕಟ್ಟ ಜನಾಂಗದ ಬಂದಿದ್ದ ನಾರಾಯಣ್ ರಾವ್ ಶಾಸಕರಾಗಿ ಆಗಿ ಬರಲು ಬಹಳ ಶ್ರಮ ಪಟ್ಟಿದ್ದರು ಎಂದರು.

ಕಾಂಗ್ರೆಸ್​ನ ಪ್ರಕಾಶ್ ರಾಥೋಡ್ ಮಾತನಾಡಿ, ನಾರಾಯಣರಾವ್ ಪಕ್ಷದ ಶಿಸ್ತಿನ ಸಿಪಾಯಿ ಆಗಿದ್ದರು. ಸಾಮಾಜಿಕ ನ್ಯಾಯ ಪರವಾಗಿದ್ದ ಅವರಿಗೆ ವಿಶೇಷವಾಗಿ ಕೋಳಿ ಸಮಾಜ ಪರಿಶಿಷ್ಟ ಜಾತಿಗೆ ಸೇರಿಸುವ ಆಸೆಯಿತ್ತು. ಅನುಭವ ಮಂಟಪ ನಿರ್ಮಾಣದ ಅವರ ಕನಸ್ಸಾಗಿತ್ತು ಎಂದರು.

ಕಾಂಗ್ರೆಸ್ ಸದಸ್ಯ ಅಲ್ಲಂ ವೀರಭದ್ರಪ್ಪ ಮಾತನಾಡಿ, ರಾಜಕಾರಣದಲ್ಲಿ ಬಡವರು ರಾಜಕೀಯ ಮಾಡಬಹುದು ಅಂತ ತೋರಿಸಿಕೊಟ್ಟವರು. ಜನರ ಜೊತೆಗೆ ಇದ್ದು, ಕೆಲಸ ಮಾಡಿದರೆ ಹಣ ಇಲ್ಲದೆ ಚುನಾವಣೆ ಗೆಲ್ಲಬಹುದು ಎನ್ನುವುದಕ್ಕೆ ಅವರು ಉದಾಹರಣೆ. ಕೋಳಿ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರಿಸಬೇಕು ಎನ್ನುವ ಕನಸು ಕಂಡಿದ್ದರು. ಮೋದಿ ಕೂಡ ಚುನಾವಣೆ ವೇಳೆ ಕಲಬುರಗಿಯಲ್ಲೂ ‌ಆಶ್ವಾಸನೆ ನೀಡಿದ್ದರು. ಈಗ‌ ನಾವೆಲ್ಲರೂ ಸೇರಿ ಆ ಪ್ರಯತ್ನ ನಡೆಸಿದರೆ ಆತ್ಮಕ್ಕೆ ಶಾಂತಿ ಸಿಗಲಿದೆ ಎಂದು ತಿಳಿಸಿದರು.

ಕಾಂಗ್ರೆಸ್​ನ ಆರ್​ಬಿ ತಿಮ್ಮಪುರ ಮಾತನಾಡಿ, ನಾರಾಯಣ್ ರಾವ್ ನಿಧನ ಆಘಾತ ತಂದಿದೆ. ಶೋಷಿತರ ಪರವಾದ ಹೋರಾಟಕ್ಕೆ ತಮ್ಮ ಜೀವವನ್ನು ಪಣಕ್ಕಿಟ್ಟಿದ್ದರು. ಅವರನ್ನ ಕಳೆದುಕೊಂಡಿದ್ದು ಕಾಂಗ್ರೆಸ್ ಪಕ್ಷಕ್ಕೆ ನಷ್ಟವಾಗಿದೆ. ನಂತರ ಒಂದು ನಿಮಿಷ ಮೌನ ಆಚರಿಸುವ ಮೂಲಕ ನಾರಾಯಣರಾವ್ ಆತ್ಮಕ್ಕೆ ಶಾಂತಿ ಕೋರಿ ಶ್ರದ್ದಾಂಜಲಿ ಸಲ್ಲಿಕೆ ಮಾಡಲಾಯಿತು. ಮೃತರ ಗೌರವಾರ್ಥವಾಗಿ 15 ನಿಮಿಷಗಳ ಕಾಲ ಕಲಾಪವನ್ನು ಮುಂದೂಡಲಾಯಿತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.