ETV Bharat / state

ಪರಿಷತ್ ಕಲಾಪದೊಳಗೆ ಪ್ಲೇ ಕಾರ್ಡ್ ತರುವುದನ್ನು ನಿಯಂತ್ರಿಸಲಾಗುವುದು : ಸಭಾಪತಿ ಹೊರಟ್ಟಿ - ವಿಧಾನಸೌಧದಲ್ಲಿ ಸಭಾಪತಿ ಬಸವರಾಜ ಹೊರಟ್ಟಿ ಸುದ್ದಿಗೋಷ್ಟಿ

ಮೇಲ್ಮನೆಗಳ ಬಗ್ಗೆ ಟೀಕೆ ಟಿಪ್ಪಣಿಗಳು ಕೇಳಿಬರುತ್ತಿದೆ. ಈ ಹಿಂದೆ ಡಿವಿಜಿ, ಸಿದ್ದಲಿಂಗಯ್ಯ, ಖಾದ್ರಿ ಶಾಮಣ್ಣ, ಎಕೆ ಸುಬ್ಬಯ್ಯ ಸೇರಿದಂತೆ ಹಲವು ಗಣ್ಯರು ಪರಿಷತ್​​ನಲ್ಲಿ ಇದ್ದರು. ಬೆಳಗ್ಗೆ 9.30ಕ್ಕೆ ಸದನ ಆರಂಭವಾದರೆ‌ ರಾತ್ರಿವರೆಗೂ ನಡೆಯುತ್ತಿತ್ತು. ಈ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಪ್ರಯತ್ನ ನಡೆಸಿ ಮೇಲ್ಮನೆ ಗೌರವವನ್ನು ಮತ್ತೆ ಹೆಚ್ಚಿಸಬೇಕಿದೆ ಎಂದು ಹೊರಟ್ಟಿ ಅಭಿಪ್ರಾಯ ಪಟ್ಟರು.

ಸಭಾಪತಿ ಬಸವರಾಜ ಹೊರಟ್ಟಿ
ಸಭಾಪತಿ ಬಸವರಾಜ ಹೊರಟ್ಟಿ
author img

By

Published : Feb 12, 2022, 5:40 PM IST

ಬೆಂಗಳೂರು : ಸದನದ ಒಳಗೆ ಪ್ಲೇ ಕಾರ್ಡ್, ಪೋಸ್ಟರ್ ತರುವುದನ್ನು ತಡೆಯುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಲಾಗುವುದು ಎಂದು ಸಭಾಪತಿ ಬಸವರಾಜ ಹೊರಟ್ಟಿ ತಿಳಿಸಿದರು.

ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ನಿಯಮ ಮೀರಿ ಪ್ರತಿಭಟನೆ ನಡೆಸಿದರೆ, ಪ್ರಜಾ ಪ್ತಭುತ್ವದಡಿ ಕಾನೂನು ಪ್ರಕಾರ ಕ್ರಮ ಕೈಗೊಳ್ಳುವುದಿಲ್ಲ. ಆದರೆ, ಪ್ಲೇ ಕಾರ್ಡ್ ಸದನದ ಒಳಗಡೆ ತರದಂತೆ ತಡೆಯುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು.

ವಿಧಾನಸೌಧದಲ್ಲಿ ಸಭಾಪತಿ ಬಸವರಾಜ ಹೊರಟ್ಟಿ ಮಾತನಾಡಿರುವುದು..

60 ದಿನ ಸದನ ನಡೆಸಬೇಕು ಎಂಬುದು ನಮ್ಮ ನಿಲುವಾಗಿದೆ. ಆದರೆ, 2017ರಲ್ಲಿ 40 ದಿನಗಳ ಕಾಲ ಸದನದ ನಡೆದಿದೆ. 2018- 29 ದಿನ, 2019-20, 2020- 33, 2021- 42 ದಿನ ಸದನ ನಡೆದಿದೆ. ಹೆಚ್ಚಿನ ದಿನಗಳ ಕಾಲ ಸದನ ನಡೆದರೆ ಸಾರ್ವಜನಿಕರ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಲು ಅನುಕೂಲ.

ಈ‌ ನಿಟ್ಟಿನಲ್ಲಿ ಸದನದ ಸದುಪಯೋಗ ಮಾಡುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ನಡೆಸಲಾಗುವುದು. ರಾಜ್ಯಸಭೆ ಮಾದರಿಯಲ್ಲಿ ಪರಿಷತ್ ಕಲಾಪಗಳನ್ನು ನಡೆಸಲು ಚಿಂತನೆ ನಡೆದಿದೆ ಎಂದು ತಿಳಿಸಿದರು.

ಮೇಲ್ಮನೆಗಳ ಬಗ್ಗೆ ಟೀಕೆ-ಟಿಪ್ಪಣಿಗಳು ಕೇಳಿ ಬರುತ್ತಿವೆ. ಈ ಹಿಂದೆ ಡಿವಿಜಿ, ಸಿದ್ದಲಿಂಗಯ್ಯ, ಖಾದ್ರಿ ಶಾಮಣ್ಣ, ಎಕೆ ಸುಬ್ಬಯ್ಯ ಸೇರಿದಂತೆ ಹಲವು ಗಣ್ಯರು ಪರಿಷತ್​​ನಲ್ಲಿ ಇದ್ದರು. ಬೆಳಗ್ಗೆ 9.30ಕ್ಕೆ ಸದನ ಆರಂಭವಾದರೆ‌ ರಾತ್ರಿವರೆಗೂ ನಡೆಯುತ್ತಿತ್ತು. ಈ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಪ್ರಯತ್ನ ನಡೆಸಿ ಮೇಲ್ಮನೆ ಗೌರವವನ್ನು ಮತ್ತೆ ಹೆಚ್ಚಿಸಬೇಕಿದೆ ಎಂದು ಅಭಿಪ್ರಾಯ ಪಟ್ಟರು.

ಕಲೆ, ಸಾಹಿತ್ಯ, ರಂಗಭೂಮಿಗೆ ಮೀಸಲು ಇದ್ದ ಸ್ಥಾನಗಳಲ್ಲಿ ಸೋತ ರಾಜಕೀಯ ವ್ಯಕ್ತಿಗಳನ್ನು ತಂದು ಕೂರಿಸುತ್ತಾರೆ. ಸಾಹಿತಿ ಎಂದು ಹೇಳಿ ಯಾರೋ ಪುಸ್ತಕ ಬರೆದ ರಾಜಕಾರಣಿಯನ್ನು ತಂದು ಕೂರಿಸುತ್ತಾರೆ. ಇದು ಸರಿಯಾದ ಕ್ರಮವಲ್ಲ.

ಈಗ ಯಾರೋ ಸೋತವರನ್ನು ತಂದು ನಾಯಕರನ್ನಾಗಿ ಮಾಡಲಾಗುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಈ‌ ನಿಟ್ಟಿನಲ್ಲಿ ಎಲ್ಲ ಪಕ್ಷಗಳು ಆಯ್ಕೆ ಮಾಡುವಾಗ ಆಯಾ ಕ್ಷೇತ್ರದವರನ್ನು ಆಯ್ಕೆ ಮಾಡುವುದು ಸೂಕ್ತ ಎಂದು ಸಲಹೆ ನೀಡಿದರು.

ಇದೇ ಸಂದರ್ಭದಲ್ಲಿ ಹಿಜಾಬ್ ವಿವಾದದ ಬಗ್ಗೆ ಮಾತನಾಡಿ, ಮಕ್ಕಳನ್ನು ಅಡ್ಡದಾರಿ ಹಿಡಿಸುವ ಕೆಲಸವನ್ನು ಪೋಷಕರು ಮತ್ತು ರಾಜಕಾರಣಿಗಳು ಮಾಡುತ್ತಿದ್ದಾರೆ. ಇಂತಹ ಕೆಟ್ಟ ಸಂಪ್ರದಾಯಗಳನ್ನು ಶಾಲೆಗಳಲ್ಲಿ ತರಬಾರದು ಎಂದರು.

ಇದನ್ನೂ ಓದಿ : ಕೆಲ ಸಂಘಟನೆಗಳು ಎಳೆ ಮಕ್ಕಳಿಂದ ಅಶಾಂತಿ ಸೃಷ್ಟಿಸುತ್ತಿವೆ : ಮಾಜಿ ಸಚಿವ ಎಂಬಿಪಿ ವಿಷಾದ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.