ಬೆಂಗಳೂರು : ಅನುಮಾನಾಸ್ಪದವಾಗಿ ಯುವಕನ ಶವ ಹೊಸ ಗುಡ್ಡದಹಳ್ಳಿಯ ಪ್ರಿಯಾಂಕಾ ಗಾರ್ಡನ್ ಬಾರ್ ಬಳಿ ಪತ್ತೆಯಾಗಿದೆ. ಆರ್‌ಆರ್‌ನಗರದ ನವೀನ್(30) ಮೃತ ವ್ಯಕ್ತಿ. ಅಪಘಾತದಲ್ಲಿ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದ್ದು, ಮೈಸೂರು ರಸ್ತೆಯಲ್ಲಿ ಮೃತ ಯುವಕನ ಬೈಕ್ ಪತ್ತೆಯಾಗಿದೆ.
ಅಪರಿಚಿತರು ಪ್ರಿಯಾಂಕ್ ಗಾರ್ಡನ್ ಬಾರ್ ಬಳಿ ಶವ ತಂದಿರಿಸಿದ್ದಾರೆ. ಈ ಸಂಬಂಧ ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿದೆ.