ETV Bharat / state

ಕೊರೊನಾ ಅಸಲಿ ಆಟ ಶುರು: ಫೆಬ್ರವರಿ-ಮಾರ್ಚ್​ನಲ್ಲಿ ಕೊರೊನಾ ಅಲೆ ಮತ್ತೆ ಆರಂಭ... - corona news

ಈಗಾಗಲೇ ರಾಜ್ಯದಲ್ಲಿ ಎರಡನೇ ಹಂತದ ಕೊರೊನಾ ಫೆಬ್ರವರಿ ಮಾರ್ಚ್​ನಲ್ಲಿ ಬರುತ್ತದೆ ಅನ್ನುವ ಮಾಹಿತಿಯನ್ನು ತಜ್ಞ ವೈದ್ಯರು ನೀಡಿದ್ದಾರೆ.

Anjanappa
ಡಾ. ಅಂಜನಪ್ಪ
author img

By

Published : Nov 19, 2020, 10:01 PM IST

ಬೆಂಗಳೂರು: ಜನ ಸಾಮಾನ್ಯರಿಗೆ ಇತ್ತೀಚೆಗೆ ಬರ್ತಿರೋ ವರದಿಗಳ ಪ್ರಕಾರ ಕೊರೊನಾ ಬದಲಾಯಿಸಿಕೊಂಡು ಬಿಟ್ಟಿದೆ ಜೆನೆಟಿಕಲಿ ಚೇಂಜ್ ಆಗಿದೆ ಹಾಗಾಗಿ ಜನರಲ್ಲಿ ಫಾಲ್ಸ್ ಪಾಸಿಟಿವ್ ಟೆಸ್ಟ್ ರಿಪೋರ್ಟ್ ಬರ್ತಿದೆ ಅನ್ನೋ ಅನುಮಾನಗಳು ಕಾಡಲು ಆರಂಭಿಸಿದೆ.‌

ತಜ್ಞ ವೈದ್ಯ ಅಂಜನಪ್ಪ

ಕೊರೊನಾ ವಿಚಾರದಲ್ಲಿ ದಿನಕ್ಕೊಂದು ಹೊಸ ಹೊಸ ವಿಚಾರಗಳು ಬೆಳಕಿಗೆ ಬರುತ್ತಿದೆ. ಈಗ ಇವೆಲ್ಲದರ ನಡುವೆ ಆತಂಕಕಾರಿ ವಿಚಾರವನ್ನು ತಜ್ಞ ವೈದ್ಯರು ಬಯಲಿಗೆ ಎಳೆದಿದ್ದಾರೆ. ಕೊರೊನಾ ಹಲವಾರು ಬಗೆಯಲ್ಲಿ ರೂಪಾಂತರಗೊಂಡಿದ್ದು ಈಗ ಸದ್ಯ ಪತ್ತೆ ಹೆಚ್ಚುತ್ತಿರುವ ಯಾವುದೇ ಉಪಕರಣಗಳಿಂದ ಪತ್ತೆ ಹಚ್ಚಲಾಗದಂತೆ ಕೊರೊನಾ ಬದಲಾಗಿದೆ. ಕೊರೊನಾ ಪತ್ತೆ ಹಚ್ಚಲು ಆಗುತ್ತಿಲ್ಲ, ಶ್ವಾಸಕೋಶದ ಸಿಟಿ ಸ್ಕ್ಯಾನ್ ಮಾಡಿದ ಸಮಯದ ವೇಳೆ ಆಘಾತಕಾರಿ ಮಾಹಿತಿ ಬೆಳಕಿಗೆ ಬರ್ತಿದೆ. ಸದ್ಯ ಕೊರೊನಾ ಲಸಿಕೆ ಕಂಡು ಹಿಡಿಯುತ್ತಿರುವ ಹಂತದಲ್ಲಿ ಈಗ ಕೊರೊನಾಗೆ ಕಿಟ್ ತಯಾರಿಕೆ ಮಾಡುವಂತಹ ಸನ್ನಿವೇಶ ನಿರ್ಮಾಣವಾಗಿದೆ.

ಈಗ ಲಭ್ಯವಿರುವ ಯಾವುದೇ ಸಾಧನಗಳಲ್ಲಿಯೂ ಮತ್ತು ಆರ್​ಟಿಪಿಸಿಆರ್ ಟೆಸ್ಟ್ ಮಾಡಿದ್ರು ಕೂಡ ಕೊರೊನಾ ಪಾಸಿಟಿವ್ ಇದ್ರು ನೆಗೆಟಿವ್ ರಿಪೋರ್ಟ್ ಬಂದು ಆತಂಕ ಹುಟ್ಟಿಸಿದೆ. ಭಾರತದಲ್ಲಿ ಸದ್ಯ ಕೊರೊನಾ ನಿಯಂತ್ರಣಕ್ಕೆ ಬರ್ತಿದ್ದು, ಎರಡನೇ ಅಲೆಯ ಭೀತಿ ಎದುರಿಸುತ್ತಿರುವಾಗ ವೈದ್ಯರು ಈ ರೀತಿಯ ಆಘಾತಕಾರಿ ವಿಷಯವನ್ನು ಹೇಳಿರುವುದು ತಲ್ಲಣ ಮೂಡಿಸಿದೆ. ಈಗಾಗಲೇ ರಾಜ್ಯದಲ್ಲಿ ಎರಡನೇ ಹಂತದ ಕೊರೊನಾ ಫೆಬ್ರವರಿ ಮಾರ್ಚ್​ನಲ್ಲಿ ಬರುತ್ತದೆ ಅನ್ನುವ ಮಾಹಿತಿಯನ್ನು ತಜ್ಞ ವೈದ್ಯರು ನೀಡಿದ್ದಾರೆ.

ರೆಸ್ಪಿರೇಟರಿ ವೈರಸ್​ಗಳಲ್ಲಿ ಸಾಕಷ್ಟು ವಿಧಗಳಿವೆ. ಅದರಲ್ಲಿ ಈ ಕೊರೊನಾ ವೈರಸ್ ಕೂಡ ಒಂದು ಬಗೆಯ ರೆಸ್ಪರೆಟರಿ ವೈರಸ್ ಎಂದು ತಿಳಿಸಿದ್ದಾರೆ. ನೆಗಡಿ ಕೆಮ್ಮು ಉಸಿರಾಟದ ಸಮಸ್ಯೆಯನ್ನು ಈ ಸೀಸನ್​ನಲ್ಲಿ ತರುವಂತಹ ವೈರಸ್​ಗಳು ನೂರಕ್ಕಿಂತ ಹೆಚ್ಚು ಜಾಸ್ತಿ ಇದ್ದಾವೆ. ಅದನ್ನು ರೆಸ್ಪರೇಟರಿ ವೈರಸ್​ನ ಗ್ರೂಪ್ ಆಫ್ ವೈರಸ್ ಎನ್ನುತ್ತಾರೆ. ಈ ರೆಸ್ಪರೇಟರಿ ವೈರಸ್​ನಲ್ಲಿ ಪರ್ಮನೆಂಟ್ ಇಮ್ಯುನಿಟಿ ಇರೋದಿಲ್ಲ. ಈ‌ ಕೋವಿಡ್ ಮುಂದಿನ ದಿನಗಳಲ್ಲಿ ಬೇರೆ ರೂಪಾಂತರದಲ್ಲಿ ಬರಬಹುದು.

ಈ ಕೊರೊನಾ ಈಗಿನ ರೂಪದಲ್ಲಿ ಬರೋದಿಲ್ಲ ಜೆನೆಟಿಕಲಿ ಬೇರೆ ರೂಪದಲ್ಲಿ ಬರುತ್ತದೆ. ಈ ರೋಗಕ್ಕೆ ಮುಂದೆ ಬರುವ ವ್ಯಾಕ್ಸಿನ್ ಕೂಡ ಶಾಶ್ವತವಾಗಿ ಗುಣಪಡಿಸುತ್ತದೆ ಅಂತ ಹೇಳುವುದಕ್ಕೆ ಆಗೋದಿಲ್ಲ. ಆರ್​ಟಿಪಿಸಿಆರ್ ಟೆಸ್ಟ್ ಮಾಡೋದು ಕೋವಿಡ್​ನ ಜೀನ್ ಕಂಡು ಹಿಡಿಯಲು. ಮುಂದೆ ಬರುವಂತ ಕೋವಿಡ್ ಮನಷ್ಯನನ್ನು ಅಟ್ಯಾಕ್ ಮಾಡಬಹುದು. ಈಗಾಗಲೇ ಕೋವಿಡ್ ಪಾಸಿಟಿವ್ ಆಗಿರುವವರಿಗೆ ಆ ಸೋಂಕನ್ನು ತಡೆಗಟ್ಟುವ ಶಕ್ತಿ ಇದೆ ಅಂತ ಈಗಲೇ ಹೇಳುವುದಕ್ಕೆ ಆಗೋದಿಲ್ಲ. ಕಾರಣ ಆ ವೈರಸ್​ನಲ್ಲಿ ಜೆನೆಟಿಕ್ ಬದಲಾವಣೆ ಆಗಿರುತ್ತವೆ ಎಂದರು.

ಒಟ್ಟಿನಲ್ಲಿ ರಾಜ್ಯದಲ್ಲಿ ನಿರಂತರವಾಗಿ ಕೊರೊನಾ ಇಳಿಮುಖ ಕಾಣಿಸುತ್ತಿದೆ. ಆದರೆ ಇಳಿಮುಖ ಕಾಣೋದಕ್ಕೆ ರೂಪಾಂತರವಾಗಿ ನಮ್ಮ ದೇಹದೊಳಗೆ ಗುಪ್ತವಾಗಿ ಸದ್ದಿಲ್ಲದೆ ಅಡಗಿ ಕುಳಿತಿದೆ. ಕೊರೊನಾ ಕಳ್ಳಾಟ ಶುರು ಮಾಡಿದೆ ಅನ್ನುವಂತಹದ್ದು ಜನರಲ್ಲಿ ಆತಂಕ ಮೂಡಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.