ETV Bharat / state

ಯುಕೆಯಲ್ಲಿ ಕೊರೊನಾ 2ನೇ ಅಲೆ: ಏರ್​​ಪೋರ್ಟ್​​ನಲ್ಲಿ RT-PCR ಸೌಲಭ್ಯ ಆರಂಭ - RTPCR Facility Launched at KIL

ಯುಕೆಯಲ್ಲಿ ಕೊರೊನಾ ವೈರಸ್​ನ ಎರಡನೇ ಅಲೆ ಆರಂಭವಾಗಿರುವುದರಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೋವಿಡ್-19 ಟೆಸ್ಟ್​ಗಾಗಿ ಆರ್​ಟಿಪಿಸಿಆರ್​​ ಸೌಲಭ್ಯವನ್ನು ಆರಂಭಿಸಲಾಗಿದೆ.

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣನ ನಿಲ್ದಾಣ
author img

By

Published : Dec 22, 2020, 6:31 PM IST

Updated : Dec 22, 2020, 7:19 PM IST

ದೇವನಹಳ್ಳಿ: ಯುಕೆಯಲ್ಲಿ ಕೊರೊನಾ ವೈರಸ್​ನ ಎರಡನೇ ಅಲೆ ಪ್ರಾರಂಭವಾದ ಹಿನ್ನೆಲೆ ಮುನ್ನೆಚ್ಚರಿಕೆ ಕ್ರಮವಾಗಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿದೇಶದಿಂದ ಬರುವ ಪ್ರಯಾಣಿಕರನ್ನು ಕಡ್ಡಾಯವಾಗಿ ಲ್ಯಾಬ್​ ಟೆಸ್ಟ್​ಗೆ ಒಳಪಡಿಸಲಾಗುತ್ತಿದೆ. ದಿನದ 24 ಗಂಟೆಯೂ ಕಾರ್ಯ ನಿರ್ವಹಿಸುವ ಎನ್​​​​ಎಬಿಎಲ್ ಮತ್ತು ಐಸಿಎಂಆರ್ ಪ್ರಮಾಣೀಕೃತ ಪರೀಕ್ಷಾ ಸೌಲಭ್ಯವನ್ನು ಪ್ರಯಾಣಿಕರಿಗೆ ನೀಡಲಾಗುತ್ತಿದೆ.15 ನಿಮಿಷದಲ್ಲಿ ಟೆಸ್ಟ್​​ ವರದಿ ಪ್ರಯಾಣಿಕರಿಗೆ ಸಿಗಲಿದೆ.

ಕೆಐಎಲ್​ನಲ್ಲಿ ಆರ್.ಟಿ.ಪಿ.ಸಿ.ಆರ್ ಸೌಲಭ್ಯ ಆರಂಭ
ಕೆಐಎಎಲ್​ನಲ್ಲಿ ಆರ್.ಟಿ.ಪಿ.ಸಿ.ಆರ್ ಸೌಲಭ್ಯ ಆರಂಭ

ಯುಕೆಯಲ್ಲಿ ಕೊರೊನಾ ವೈರಸ್​ನ ಎರಡನೇ ಅಲೆ ಪ್ರಾರಂಭವಾಗಿದ್ದು, ಕರ್ನಾಟಕ ಸರ್ಕಾರದ ನಿರ್ದೇಶನದಂತೆ ವಿದೇಶದಿಂದ ಬರುವ ಪ್ರಯಾಣಿಕರನ್ನ ಕಡ್ಡಾಯವಾಗಿ ಕೋವಿಡ್​ ಟೆಸ್ಟ್​​ಗೆ ಒಳಪಡಿಸಲಾಗುತ್ತಿದೆ. ಇದಕ್ಕಾಗಿ ದಿನದ 24 ಗಂಟೆ ಕಾರ್ಯನಿರ್ವಹಿಸುವ ಕೋವಿಡ್-19 ಪರೀಕ್ಷಾ ಸೌಲಭ್ಯವನ್ನು ಏರ್ ಪೋರ್ಟ್​ನಲ್ಲಿ ಆರಂಭಿಸಲಾಗಿದೆ. ಟರ್ಮಿನಲ್​ನ ಒಳಗೆ ಮಾದರಿ ಸಂಗ್ರಹಿಸುವ ಕಿಯಾಸ್ಕ್ ಇರುತ್ತೆ, ಕೆಂಪೇಗೌಡ ವಿಮಾನ ನಿಲ್ದಾಣ ಟರ್ಮಿನಲ್ ಹೊರಗಡೆ ಅತ್ಯಾಧುನಿಕ ಮತ್ತು ಉತ್ತಮ ಗುಣಮಟ್ಟದ ಪ್ರಯೋಗಾಲಯ ಇರುತ್ತದೆ.

ವಿಮಾನ ನಿಲ್ದಾಣದಲ್ಲಿ ಕೋವಿಡ್-19 ಸುರಕ್ಷತಾ ಶಿಷ್ಟಾಚಾರಗಳನ್ನು ಕಟ್ಟುನಿಟ್ಟಾಗಿ ಪ್ರಯಾಣಿಕರು ಪಾಲಿಸಬೇಕಿದೆ. ಪ್ರಯಾಣಿಸುವ ಮುನ್ನ ಕೋವಿಡ್ ಟೆಸ್ಟ್​​ಗೆ ಒಳಗಾಗದ ಮತ್ತು ವಿದೇಶದಿಂದ ಬೆಂಗಳೂರಿಗೆ ಬರುವ ಪ್ರಯಾಣಿಕರು ವಿಮಾನ ನಿಲ್ದಾಣದಲ್ಲಿ ಪ್ರಾರಂಭವಾಗಿರುವ ಕೋವಿಡ್ -19 ಆರ್​ಟಿ -ಪಿಸಿಆರ್ ಟೆಸ್ಟ್​​ ಸೌಲಭ್ಯ ಪಡೆಯಬಹುದು. ಹಾಗೆಯೇ ಬೆಂಗಳೂರಿನಿಂದ ಪ್ರಯಾಣಿಸುವ ಮತ್ತು ಹೋಗುವ ಸ್ಥಳದಲ್ಲಿ ಆರ್​ಟಿ-ಪಿಸಿಆರ್​ ಟೆಸ್ಟ್​​ ಸೌಲಭ್ಯ ಇದ್ಲದವರು ಸಹ ಇದನ್ನು ಪಡೆಯಬಹುದಾಗಿದೆ.

15 ನಿಮಿಷದಲ್ಲಿ ಪ್ರಯಾಣಿಕರ ಕೈಗೆ ಸಿಗಲಿದೆ ಪರೀಕ್ಷಾ ವರದಿ:

ಭಾರತದಲ್ಲಿ ಮೊದಲ ಬಾರಿಗೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಜಾಗತಿಕವಾಗಿ ಮಾನ್ಯತೆ ಪಡೆದಿರುವ ಆ್ಯಬಾಟ್ ಐಡಿ ನೌ ಟೆಸ್ಟ್​​ ಸೌಲಭ್ಯ ಕೊಡಲಾಗಿದೆ. ಇದರಲ್ಲಿ ಕೇವಲ 15 ನಿಮಿಷದಲ್ಲಿ ಆರ್.ಟಿ.ಪಿ.ಸಿ.ಆರ್. ಪರೀಕ್ಷಾ ವರದಿಯನ್ನು ಪ್ರಯಾಣಿಕರಿಗೆ ನೀಡಲಾಗುತ್ತೆ.

ಓದಿ:ಕೊರೊನಾ ವ್ಯಾಕ್ಸಿನ್ ನೀಡಲು ಫೈನಲ್ ಲಿಸ್ಟ್ ಅಪ್​ಲೋಡ್ ಮಾಡುತ್ತಿದೆ ಬಿಬಿಎಂಪಿ

ಸಾಮಾನ್ಯ ಆರ್.ಟಿ.ಪಿ.ಸಿ.ಆರ್. ಪರೀಕ್ಷೆ ವರದಿ ಪಡೆಯಲು ಆರು ಗಂಟೆಗಳ ಸಮಯ ಬೇಕಾಗುತ್ತದೆ. ಪರೀಕ್ಷೆಯ ಫಲಿತಾಂಶಗಳು ಬರುವವರೆಗೆ ಈ ಪರೀಕ್ಷೆಗೆ ಒಳಗಾದ ಜನರು ವಿಶೇಷವಾಗಿ ಗುರುತಿಸಲಾದ ಪ್ರದೇಶದಲ್ಲಿ ಕಾಯ್ದುಕೊಂಡಿರಬೇಕಾಗುತ್ತದೆ. ಪರೀಕ್ಷೆಗೆ ಒಳಗಾದವರೊಂದಿಗೆ ನೇರವಾಗಿ ಪರೀಕ್ಷಾ ವರದಿಗಳನ್ನು ಡಿಜಿಟಲ್ ವೇದಿಕೆಗಳ ಮೂಲಕ ಹಂಚಿಕೊಳ್ಳಲಾಗುತ್ತದೆ. ಸರ್ಕಾರದ ಅವಶ್ಯಕತೆಗಳಿಗೆ ತಕ್ಕಂತೆ ಎಲ್ಲ ಮಾದರಿಗಳ ಫಲಿತಾಂಶಗಳನ್ನು ಐ.ಸಿ.ಎಂ.ಆರ್. ವೆಬ್‍ಸೈಟ್‍ನಲ್ಲಿ ನೋಂದಣಿ ಮಾಡಲಾಗುವುದು.

  • ಆರ್.ಟಿ.ಪಿ.ಸಿ.ಟಿ ಎಕ್ಸ್​​ಪ್ರೆಸ್ ಟೆಸ್ಟ್​​​ಗಾಗಿ 5000 ರೂಪಾಯಿ ಪಾವತಿಸಬೇಕು. ಇದರ ವರದಿ 13 ನಿಮಿಷದಲ್ಲಿ ಸಿಗಲಿದೆ.
  • ಆರ್.ಟಿ.ಪಿ.ಸಿ.ಆರ್. (ಸ್ಪೆಷಲ್ ಟರ್ನ್ ಅರೌಂಡ್) ಟೆಸ್ಟ್​​ಗೆ 2,500 ರೂ.- ವರದಿಗೆ 5 ರಿಂದ 6 ಗಂಟೆ ಕಾಯಬೇಕು.
  • ಆರ್.ಟಿ.ಪಿ.ಸಿ.ಆರ್ (ಸಾಮಾನ್ಯ) ಟೆಸ್ಟ್​​ಗಾಗಿ 800 ರೂ.- ವರದಿ ಸಿಗಲು 24 ಗಂಟೆ ಕಾಯಬೇಕು.
  • ಆ್ಯಸ್ಟರ್ ಏರ್‍ಪೋರ್ಟ್ ಮೆಡಿಕಲ್ ಸೆಂಟರ್​​ನಲ್ಲಿ ಆರ್.ಟಿ.ಪಿ.ಸಿ.ಆರ್ ಟೆಸ್ಟ್​​ಗಾಗಿ 1,200 ರೂಪಾಯಿ ಪಾವತಿಸಿದ್ರೆ, 24 ಗಂಟೆಯಲ್ಲಿ ವರದಿ ಸಿಗಲಿದೆ.

ಆರ್.ಟಿ.ಪಿ.ಸಿ.ಆರ್​​ ಟೆಸ್ಟ್​​ನಲ್ಲಿ ಪಾಸಿಟಿವ್ ಬಂದರೆ ಪ್ರಯಾಣಿಕರನ್ನು ಬೆಂಗಳೂರಿನ ನಿಮ್ಹಾನ್ಸ್​​ ಆಸ್ಪತ್ರೆಗೆ ಕಳಿಸಲಾಗುತ್ತದೆ ಮತ್ತು ವರದಿ ನೆಗೆಟಿವ್ ಬಂದರೆ 14 ದಿನಗಳ ಹೋಮ್ ಕ್ವಾರಂಟೈನ್​​ಗೆ ಒಳಗಾಗಬೇಕು.

Last Updated : Dec 22, 2020, 7:19 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.