ಬೆಂಗಳೂರು: ನಗರದ ಕೃಷಿ ವಿಶ್ವವಿದ್ಯಾಲಯದ (University of Agriculture) ಆವರಣದಲ್ಲಿ ನಡೆಯುತ್ತಿರುವ ‘ಕೃಷಿ ಮೇಳ’ (Krishi Mele 2021)ದಲ್ಲಿ ಮಾಸ್ಕ್ ಹಾಗೂ ಸಾಮಾಜಿಕ ಅಂತರ ಮಾಯವಾಗಿದೆ. ಇಲ್ಲಿನ ಜಕ್ಕೂರು ಸಮೀಪದ ಕೃಷಿ ವಿಶ್ವವಿದ್ಯಾಲಯದಲ್ಲಿ ಕೃಷಿ ಮೇಳ ನಡೆಯುತ್ತಿದ್ದು, ಉತ್ತಮ ಜನಬೆಂಬಲ ಸಿಕ್ಕಿದೆ. ಆದರೆ, ಕೊರೊನಾ ಭೀತಿ ಆರಂಭವಾಗಿದೆ.
ಕೊರೊನಾ ಹೊಡೆತದಿಂದ ರಾಜ್ಯ ಈಗ ತಾನೇ ಚೇತರಿಸಿಕೊಳ್ಳುತ್ತಿದೆ. ಜೊತೆಗೆ ಕೊರೊನಾ ನಿಯಮಗಳಲ್ಲಿ ಬಹಳಷ್ಟು ಸಡಿಲಿಕೆ ನೀಡಲಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಅಂತರ ಕಾಪಾಡಿಕೊಳ್ಳುವುದು ಮತ್ತು ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ.
ಆದರೆ, ಕೃಷಿ ಮೇಳದಲ್ಲಿ ಭಾಗಿಯಾಗಿದ್ದ ಬಹುತೇಕರು ಈ ನಿಯಮ ಮರೆತಂತಿದ್ದರು. ಕೊರೊನಾ ಕಾರಣದಿಂದಾಗಿಯೇ ಕಳೆದೆರಡು ವರ್ಷದಿಂದ ಕೃಷಿ ಮೇಳಕ್ಕೆ ಬ್ರೇಕ್ ಹಾಕಲಾಗಿತ್ತು. ಈ ಬಾರಿ ಒತ್ತಡ ಹೆಚ್ಚಾದ ಬಳಿಕ ಕೃಷಿ ಮೇಳ ಆಯೋಜಿಸಲು ನಿರ್ಧರಿಸಲಾಗಿತ್ತು. ಈ ಕೃಷಿ ಮೇಳದಲ್ಲಿ ಕೋವಿಡ್ ನಿಯಮ ಉಲ್ಲಂಘನೆಯಾಗುತ್ತಿರುವುದು (Covid Rules violation) ಆತಂಕಕ್ಕೆ ಕಾರಣವಾಗಿದೆ.
ಅಕ್ಕಪಕ್ಕದ ರಾಜ್ಯಗಳಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿದ್ದ ಆ ರಾಜ್ಯದಿಂದಲೂ ವ್ಯಾಪಾರಸ್ಥರು, ಗ್ರಾಹಕರು ಕೃಷಿ ಮೇಳಕ್ಕೆ ಆಗಮಿಸಿದ್ದಾರೆ. ಈ ನಡುವೆ, ಕಳೆದ ಕೆಲ ದಿನಗಳಲ್ಲಿ ಕರ್ನಾಟಕದಲ್ಲಿಯೂ ಪ್ರಕರಣಗಳ (Karnataka Covid) ಸಂಖ್ಯೆ ಏರುತ್ತಾ ಸಾಗಿದೆ. ಈ ಸಂದರ್ಭದಲ್ಲಿ ಸಾವಿರಾರು ಜನ ಸೇರುವ ಸ್ಥಳದಲ್ಲಿ ಸಾಮಾಜಿಕ ಅಂತರ ಹಾಗೂ ಮಾಸ್ಕ್ ಹಾಕದಿರುವುದು ಆತಂಕಕ್ಕೆ ಕಾರಣವಾಗಿದೆ.
ನಾಳೆ ಇನ್ನಷ್ಟು ಜನ ಕೃಷಿ ಮೇಳಕ್ಕೆ ಹರಿದು ಬರುವ ನಿರೀಕ್ಷೆ ಇದೆ. ಈ ಹಿನ್ನೆಲೆಯಲ್ಲಿ ಕೊರೊನಾ ನಿಯಮಾವಳಿ (Covid Rules) ಬಗ್ಗೆಯೂ ಗಂಭೀರವಾಗಿ ಗನಹರಿಸಬೇಕಿದೆ. ಮೇಳದಲ್ಲಿ ಕೃಷಿ ಯಂತ್ರೋಪಕರಣಗಳು, ರಾಸಾಯನಿಕಗಳು, ನೂತನ ಆವಿಷ್ಕಾರ, ಜಾನುವಾರುಗಳು, ಗುಣಮಟ್ಟದ ಬಿತ್ತನೆ ಬೀಜ ಹಾಗೂ ಗೃಹ ಬಳಕೆ ವಸ್ತುಗಳ ಪ್ರದರ್ಶನ ಹಾಗೂ ಮಾರಾಟ ನಡೆಯುತ್ತಿದೆ. 750ಕ್ಕೂ ಹೆಚ್ಚಿನ ಮಳಿಗೆಗಳನ್ನು ತೆರೆಯಲಾಗಿದ್ದು, ಉತ್ತಮ ಬೆಂಬಲ ವ್ಯಕ್ತವಾಗಿದೆ.
ಇದನ್ನೂ ಓದಿ: India Covid Report: ದೇಶದಲ್ಲಿ ನಿನ್ನೆ 11,850 ಕೇಸ್ ಪತ್ತೆ..ಆದರೆ ಮೃತಪಟ್ಟಿದ್ದು 555 ಮಂದಿ