ETV Bharat / state

ಸಿಎಂ ಬೊಮ್ಮಾಯಿ ಅಭಿನಂದನಾ ಕಾರ್ಯಕ್ರಮದಲ್ಲಿ ಕೊರೊನಾ ರೂಲ್ಸ್​ ಬ್ರೇಕ್​ - ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಬೆಂಗಳೂರು ನಗರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಹೊಂದಿದೆ. ಮೊನ್ನೆ ಪ್ರಧಾನಿಗಳನ್ನು ಭೇಟಿ ಮಾಡಿದಾಗ ರಾಜ್ಯ ರಾಜಧಾನಿಯ ಬಗ್ಗೆ ಚರ್ಚೆ ಮಾಡಲಾಗಿದೆ. ಪ್ರಧಾನಿಯವರು ಸಹ ಬೆಂಗಳೂರು ನಗರ ಅಭಿವೃದ್ಧಿಗೆ ಅಗತ್ಯ ಕ್ರಮಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ. ಉದ್ಯಮ ಕೇಂದ್ರಗಳು, ಕಲೆ, ಸಂಸ್ಕೃತಿ, ಪ್ರವಾಸೋದ್ಯಮ ಎಲ್ಲವೂ ಬೆಂಗಳೂರಿಗೆ ಬರಬೇಕು..

corona-rules-break-at-cm-bommai-congratulation-program
ಸಿಎಂ ಬೊಮ್ಮಾಯಿ
author img

By

Published : Aug 17, 2021, 6:01 PM IST

ಬೆಂಗಳೂರು : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಿವಾಸದ ಎದುರು ನಡೆದ ಅಭಿನಂದನಾ ಕಾರ್ಯಕ್ರಮದಲ್ಲಿ ಸಂಪೂರ್ಣವಾಗಿ ಕೋವಿಡ್​ ಮಾರ್ಗಸೂಚಿ ಉಲ್ಲಂಘನೆಯಾಗಿದೆ. ನಿಯಮಗಳನ್ನು ರೂಪಿಸುವ ನಾಯಕರೇ ರೂಲ್ಸ್​ ಬ್ರೇಕ್​ ಮಾಡಿದ್ರೆ ಹೇಗೆ ಎಂಬ ಮಾತು ಸಾಮಾಜಿಕ ಮಾಧ್ಯಮಗಳಲ್ಲಿ ಕೇಳಿ ಬಂದಿವೆ.

ಹೆಬ್ಬಾಳ ಕ್ಷೇತ್ರದ ಬಿಜೆಪಿ ಮುಖಂಡರು ಹಾಗೂ ಮಾಜಿ ಸಚಿವ ಕಟ್ಟಾಸುಬ್ರಹ್ಮಣ್ಯ ನಾಯ್ಡು ಹಾಗೂ ಪರಿಷತ್ ಸದಸ್ಯ ವೈ ಎ ನಾರಾಯಣ ಸ್ವಾಮಿಯಿಂದ ಅಭಿನಂದನಾ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸಾಕಷ್ಟು ಕಾರ್ಯಕರ್ತರು ಕೂಡ ಭಾಗಿಯಾಗಿದ್ದರು. ಸಿಎಂ ಬೊಮ್ಮಾಯಿಗೆ ಶಾಲು ಹೊದಿಸಿ, ಕನ್ನಡ ಪುಸ್ತಕ ನೀಡಿ ಗೌರವಿಸಲಾಯಿತು.

ಸಿಎಂ ಬೊಮ್ಮಾಯಿ ಅಭಿನಂದನಾ ಕಾರ್ಯಕ್ರಮದಲ್ಲಿ ಕೊರೊನಾ ರೂಲ್ಸ್​ ಬ್ರೇಕ್​

ನಿನ್ನೆ ಕೇಂದ್ರ ಸಚಿವರಿಂದ ಕೋವಿಡ್ ರೂಲ್ಸ್ ಬ್ರೇಕ್ ಆಗಿತ್ತು. ಇಂದು ಸಿಎಂ ಕೋವಿಡ್ ರೂಲ್ಸ್ ಬ್ರೇಕ್​ ಮಾಡಿರುವ ಆರೋಪ ಕೇಳಿ ಬಂದಿದೆ. ಇದರಿಂದ ಜನರಿಗಷ್ಟೇ ನಿಯಮಗಳು ಅನ್ವಯವಾಗುತ್ತವಾ ಎಂದು ಸಾರ್ವಜನಿಕರು ಪ್ರಶ್ನಿಸುವಂತಾಗಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಸಿಎಂ, ಬೆಂಗಳೂರು ನಗರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಹೊಂದಿದೆ. ಮೊನ್ನೆ ಪ್ರಧಾನಿಗಳನ್ನು ಭೇಟಿ ಮಾಡಿದಾಗ ರಾಜ್ಯ ರಾಜಧಾನಿಯ ಬಗ್ಗೆ ಚರ್ಚೆ ಮಾಡಲಾಗಿದೆ.

ಪ್ರಧಾನಿಯವರು ಸಹ ಬೆಂಗಳೂರು ನಗರ ಅಭಿವೃದ್ಧಿಗೆ ಅಗತ್ಯ ಕ್ರಮಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ. ಉದ್ಯಮ ಕೇಂದ್ರಗಳು, ಕಲೆ, ಸಂಸ್ಕೃತಿ, ಪ್ರವಾಸೋದ್ಯಮ ಎಲ್ಲವೂ ಬೆಂಗಳೂರಿಗೆ ಬರಬೇಕು ಎಂದರು. ‌

ತಮಿಳುನಾಡಿನಲ್ಲಿ ಪೆಟ್ರೋಲ್ 3 ರೂ. ಕಡಿತ : ತಮಿಳುನಾಡಿನಲ್ಲಿ ಪೆಟ್ರೋಲ್ ಮೇಲೆ 3 ರೂಪಾಯಿ ಕಡಿತ ಮಾಡಿರುವ ವಿಚಾರವಾಗಿ ಪ್ರತಿಕ್ರಿಯಿಸಿ, ನಮ್ಮ ರಾಜ್ಯದಲ್ಲಿ ಆ ರೀತಿಯ ಪಸ್ತಾಪ ಇಲ್ಲ ಎಂದು ಸಿಎಂ ಸ್ಪಷ್ಟಪಡಿಸಿದರು.

ಮೂರು ಇಲಾಖೆಗಳ ಸಭೆ : ಇಂದು ಉನ್ನತ ಶಿಕ್ಷಣ, ವಸತಿ ಸೇರಿ ಮೂರು ಇಲಾಖೆಗಳ ಸಚಿವರ, ಅಧಿಕಾರಿಗಳ ಸಭೆ ನೆಡೆಯಲಿದೆ ಎಂದು ಮಾಹಿತಿ ನೀಡಿದರು.

ಕೋವಿಡ್ ನೆಗೆಟಿವ್ ಟೆಸ್ಟ್ ದಂಧೆ : ನೆಗೆಟಿವ್ ಟೆಸ್ಟಿಂಗ್ ದಂಧೆ ವಿಚಾರ ನಮ್ಮ ಗಮನಕ್ಕೆ ಬಂದಿದೆ. ಈ ಸಂಬಂಧ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ. ಬಸ್ ಹಾಗೂ ರೈಲು‌ ನಿಲ್ದಾಣ ಸೇರಿದಂತೆ ಮುಂತಾದ ಕಡೆ ಟೆಸ್ಟ್ ದಂಧೆ ನಡೀತಿದೆ. ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಸಿಎಂ ಭರವಸೆ ನೀಡಿದರು.

ರಾಜ್ಯದ ಅಭಿವೃದ್ಧಿಗೆ ವೇಗ : ರಾಜ್ಯದ ಅಭಿವೃದ್ಧಿಯ ವೇಗ ಹೆಚ್ಚಿಸುತ್ತೇನೆ. ಆರ್ಥಿಕ, ಸಾಮಾಜಿಕ ಸ್ಥಿತಿ ಸುಧಾರಣೆ ಮಾಡಬೇಕು. ಸ್ವಾತಂತ್ರ್ಯದ ದಿನ ಘೋಷಣೆ ಮಾಡಿದ ಯೋಜನೆಗಳು ಬೇಗ ಅನುಷ್ಠಾನಕ್ಕೆ ಬರಲಿವೆ. ಜನರ ಪರವಾಗಿ ಅಧಿಕಾರಿ ವರ್ಗ ಕೆಲಸ ಮಾಡಲಿದೆ ಎಂದು ಸಿಎಂ ಬೊಮ್ಮಾಯಿ ಆಶ್ವಾಸನೆ ನೀಡಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.