ETV Bharat / state

ಕೊರೊನಾ ಬಂದರೂ ಕಾರ್ಪೊರೇಟರ್​ ರೋಡ್​ ಶೋ... ನೆಟ್ಟಿಗರಿಂದ ತರಾಟೆ

ಕೊರೊನಾ ಸಾಂಕ್ರಾಮಿಕ ವೈರಸ್ ಅಂತ ಗೊತ್ತಿದ್ರು, ನೂರಾರು ಜನರನ್ನು ಸೇರಿಸಿ ರೋಡ್ ಶೋ ಮಾಡುವ ಮೂಲಕ ಏನೋ ಸಾಧಿಸಿದವರಂತೆ ವರ್ತಿಸಿದ ಪಾದರಾಯನಪುರ ಕಾರ್ಪೊರೇಟರ್​ ಇಮ್ರಾನ್​ ಪಾಷಾ ನಡೆಗೆ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗಿದೆ.

Corona Positive found to Padarayanapura Policy Member
ಚಿಕಿತ್ಸೆಗೆ ಹೊರಟ ಕಾರ್ಪೋರೇಟರ್​ನಿಂದ ರೋಡ್​ ಶೋ.
author img

By

Published : May 31, 2020, 3:25 PM IST

ಬೆಂಗಳೂರು: ಪಾದರಾಯನಪುರ ಪಾಲಿಕೆ ಸದಸ್ಯರಿಗೆ ಕೊರೊನಾ ಪಾಸಿಟಿವ್ ಎಂದು ತಿಳಿದ ಬಳಿಕ ಆರೋಗ್ಯಾಧಿಕಾರಿಗಳ ಒತ್ತಾಯದ ಮೇರೆಗೆ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿದ್ದಾರೆ ಕಾರ್ಪೊರೇಟರ್​ ಇಮ್ರಾನ್​ ಪಾಷಾ. ಆದರೆ ಈತ ಚಿಕಿತ್ಸೆಗೆ ತೆರಳುವ ವೇಳೆ ನೂರಾರು ಜನರನ್ನು ಸೇರಿಸಿ ರೋಡ್ ಶೋ ನಡೆಸಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಚಿಕಿತ್ಸೆಗೆ ಹೊರಟ ಕಾರ್ಪೊರೇಟರ್​ನಿಂದ ರೋಡ್​ ಶೋ

ಕೊರೊನಾ ಸಾಂಕ್ರಾಮಿಕ ವೈರಸ್ ಅಂತ ಗೊತ್ತಿದ್ದರೂ ಸಹ ನೂರಾರು ಜನರನ್ನು ಸೇರಿಸಿ ರೋಡ್ ಶೋ ಮಾಡುವ ಮೂಲಕ ಏನೋ ಸಾಧಿಸಿದವರಂತೆ ವರ್ತಿಸಿದ್ದಾರೆ. ಅಲ್ಲದೇ ಆ ವಿಡಿಯೋವನ್ನು ಫೇಸ್​ಬುಕ್​​ನಲ್ಲೂ ಅಪ್ಲೋಡ್ ಮಾಡಿದ್ದಾರೆ. ಇದೀಗ ವಿಡಿಯೋ ನೋಡಿರುವ ನೆಟ್ಟಿಗರು ಕಾರ್ಪೊರೇಟರ್​ನ​ನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಸದ್ಯ ಪಾದರಾಯನಪುರ ಕಂಟೈನ್ಮೆಂಟ್ ಝೋನ್ ಆಗಿದೆ. ಇಂತಹ ಸಂದರ್ಭದಲ್ಲೂ ಅಷ್ಟು ಜನರನ್ನು ಸೇರಿಸುವ ಅವಶ್ಯಕತೆ ಏನಿತ್ತು.‌ ಜನಪ್ರತಿನಿಧಿಗಳೇ ಈ ರೀತಿ ವರ್ತಿಸಿದ್ರೆ ಜನಸಾಮಾನ್ಯರ ಕತೆ ಏನು ಎಂದು ಪ್ರಶ್ನಿಸಿದ್ದಾರೆ. ಅಲ್ಲದೇ ಅರೋಗ್ಯ ಇಲಾಖೆ ಅಧಿಕಾರಿಗಳಿಗೆ ಸಹಕರಿಸದೆ ಗಂಟೆಗಟ್ಟಲೆ ರಸ್ತೆಯಲ್ಲಿ ಕೊರೊನಾ ಯೋಧರನ್ನ ಕಾಯಿಸೋದು ಎಷ್ಟು ಸರಿ ಎಂಬುದು ಜನರ ಪ್ರಶ್ನೆಯಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.