ಬೆಂಗಳೂರು: ಇಷ್ಟು ದಿನ ವಿದೇಶಿ ಪ್ರಯಾಣಿಕರು ಹಾಗೂ ಸೋಂಕಿತರ ಸಂಪರ್ಕದಿಂದ ಕೊರೊನಾ ಲಕ್ಷಣಗಳು ಕಾಣಿಸಿಕೊಂಡವರನ್ನು ಪರೀಕ್ಷೆ ಮಾಡಲಾಗುತ್ತಿತ್ತು. ಅಚ್ಚರಿ ಅಂದ್ರೆ ಕೊರೊನಾ ರೋಗ ಲಕ್ಷಣ ಕಾಣಿಸಿಕೊಂಡವರಿಗಿಂತ, ಕೊರೊನಾ ರೋಗ ಲಕ್ಷಣ ಕಾಣಿಸಿಕೊಳ್ಳದೇ ಇರುವವರಲ್ಲಿ ಹೆಚ್ಚು ಕೊರೊನಾ ಪಾಸಿಟಿವ್ ವರದಿಗಳು ಬಂದಿವೆ. ರಾಜ್ಯದಲ್ಲಿ ರೋಗ ಲಕ್ಷಣ ಕಾಣಿಸಿಕೊಳ್ಳದೇ ಪರೀಕ್ಷೆಗೊಳಪಟ್ಟವರಲ್ಲೇ ಹೆಚ್ಚು ಪಾಸಿಟಿವ್ ಇದ್ದು, ಜಿಲ್ಲಾವಾರು ಲೆಕ್ಕಾಚಾರ ನೋಡಿದರೆ ಆತಂಕ ಮೂಡಿಸುವಂತಿದೆ.
- ಜಿಲ್ಲಾವಾರು ಪ್ರಕರಣಗಳ ಸಂಪೂರ್ಣ ಮಾಹಿತಿ:
ಜಿಲ್ಲೆ | ಲಕ್ಷಣಗಳಿದ್ದು ಸೋಂಕು ಪತ್ತೆ | ಲಕ್ಷಣಗಳು ಇಲ್ಲದೆ ಸೋಂಕು ಪತ್ತೆ | |
ಬೆಂಗಳೂರು | 56 | 39 | |
ಮೈಸೂರು | 21 | 54 | |
ಕಲಬುರಗಿ | 07 | 15 | |
ಬೆಳಗಾವಿ | 07 | 35 | |
ವಿಜಯಪುರ | 01 | 19 | |
ಮಂಡ್ಯ | 01 | 11 | |
ಬಾಗಲಕೋಟೆ | 02 | 14 | |
ಬಳ್ಳಾರಿ | 04 | 09 | |
ಬೀದರ್ | 02 | 12 | |
ಧಾರಾವಾಡ | 01 | 06 | |
ಚಿಕ್ಕಬಳ್ಳಾಪುರ | 05 | 11 | |
ಬೆಂಗಳೂರು ಗ್ರಾಂ | 00 | 04 | |
ದಕ್ಷಿಣ ಕನ್ನಡ | 08 | 03 | |
ಉತ್ತರ ಕನ್ನಡ | 06 | 05 |