ಬೆಂಗಳೂರು: ಕೊರೊನಾ ಸೋಂಕು ವ್ಯಾಪಕವಾಗಿ ಹಬ್ಬುತ್ತಿರುವ ಹಿನ್ನೆಲೆ ಏಪ್ರಿಲ್ 9 ರಂದು ನಡೆಯಬೇಕಾಗಿದ್ದ, ಷಬ್ - ಇ - ಬರಾತ್ ಸಾಮೂಹಿಕ ಪ್ರಾರ್ಥನೆಯನ್ನು ರದ್ದು ಪಡಿಸಲಾಗಿದೆ.
ಈ ಸಂಬಂಧ ಆದೇಶ ಹೊರಡಿಸಿರುವ ರಾಜ್ಯ ವಕ್ಫ್ ಮಂಡಳಿ, ಮಸೀದಿಗಳು, ಕಬರಸ್ತಾನ್ಗಳು, ಈದ್ಗಾ ಮೈದಾನ, ದರ್ಗಾಗಳಲ್ಲಿ ಷಬ್ - ಇ - ಬರಾತ್ ಸಾಮೂಹಿಕ ಪ್ರಾರ್ಥನೆ ಮಾಡಬಾರದೆಂದು ಸೂಚನೆ ನೀಡಿದೆ. ರಂಜಾನ್ ಪೂರ್ವ 15 ದಿನಗಳ ಮುನ್ನ ಈ ಹಬ್ಬ ಆಚರಿಸಲಾಗುತ್ತದೆ.
ಹಬ್ಬದ ನಿಮಿತ್ತ ಮುಸ್ಲಿಂ ಬಾಂಧವರು ಇಡೀ ರಾತ್ರಿ ಸಾಮೂಹಿಕ ಪ್ರಾರ್ಥನೆ ಕೈಗೊಳ್ಳುತ್ತಾರೆ. ಈ ಬಾರಿ ಕೊರೊನಾ ಹಿನ್ನೆಲೆಯಲ್ಲಿ ಸಾಮೂಹಿಕ ಪ್ರಾರ್ಥನೆ ರದ್ದು ಮಾಡಿ ಆದೇಶ ಹೊರಡಿಸಲಾಗಿದೆ. ಈಗಾಗಲೇ ಮಸೀದಿಗಳಲ್ಲಿ ಸಾಮೂಹಿಕ ಪ್ರಾರ್ಥನೆಗಳು ರದ್ದಾಗಿವೆ. ಈ ನಿಟ್ಟಿನಲ್ಲಿ ಪೊಲೀಸರು, ಮಸೀದಿಗಳ ಸಮಿತಿಗಳಿಗೆ ಸೂಚನೆ ನೀಡಲಾಗಿದೆ.