ಬೆಂಗಳೂರು : ಕೋವಿಡ್ನಿಂದ ಜನಜೀವನವೇ ಅಸ್ತವ್ಯಸ್ತಗೊಂಡಿದ್ದು, ಮನಕಲಕುವ ಘಟನೆಯೊಂದರ ಬಗ್ಗೆ ಕಲಾವಿದ ದಂಪತಿ ಮಾತನಾಡಿದ್ದಾರೆ.
ಸುಮ್ಮನಳ್ಳಿ ಚಿತಾಗಾರದ ಬಳಿ ನಟಿ ಸುನೇತ್ರ ಪಂಡಿತ್ ಮತ್ತು ನಟ ರಮೇಶ್ ಪಂಡಿತ್ ಮಾಧ್ಯಮದವರೊಂದಿಗೆ ಮಾತನಾಡಿ, ಯಾರೋ ಒಬ್ಬ ಆಧಿಕಾರಿಯಿಂದ ನನ್ನ ಅತ್ತಿಗೆಯ ಸಾವಾಗಿದೆ. ಪಾಲಿಕೆ, ಆರೋಗ್ಯ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಈ ಘಟನೆಯಾಗಿದೆ ಎಂದು ದೂರಿದರು.
ಐಡಿ ಜನರೇಟ್ ಮಾಡಲು ಒಂದು ದಿನ ಬೇಕಾಯ್ತು. ಕೋವಿಡ್ ಇದ್ದರೂ ಐಸಿಯು ಇಲ್ಲದಿರುವ ಆಸ್ಪತ್ರೆಗೆ ಅಲರ್ಟ್ ಮಾಡಿ ಸರ್ಕಾರಿ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಹೇಳಿದರು.
ಮಾರ್ಕೆಟ್ನಲ್ಲಿ ಸಾವಿರಾರು ಜನ ಸೇರ್ತಾರೆ. ಎಲ್ಲರೂ ಎಲ್ಲಾದ್ರೂ ಹೋಗಿ ನೇಣುಹಾಕಿಕೊಂಡು ಸತ್ತೋಗಿ, ಯಾಕೆ ಹೀಗೆ ನಿರ್ಲಕ್ಷ್ಯ ಮಾಡಿ ಬೇರೆಯವರಿಗೂ ತೊಂದರೆ ಕೊಡುತ್ತೀರಾ ಎಂದು ಜೋರಾದ ಧ್ವನಿಯಲ್ಲಿ ಜನರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಯಾರ ಬಳಿಯೂ ದುಡ್ಡಿಲ್ಲ, ಯುವಕರು ದಾರಿ ತಪ್ಪುತ್ತಿದ್ದಾರೆ. ಯುವಕರು ಚಾಕು ತೋರಿಸಿ ದರೋಡೆ ಮಾಡುವುದಕ್ಕೆ ಶುರು ಮಾಡಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.
ದಯವಿಟ್ಟು ಎಲ್ಲರೂ ಮಾಸ್ಕ್ ಹಾಕಿಕೊಂಡು ಅಂತರ ಕಾಯ್ದುಕೊಳ್ಳಿ. ನಮ್ಮ ಜೀವನವನ್ನು ನಾವೇ ಕಾಪಾಡಿಕೊಳ್ಳಬೇಕು. ಮಾಧ್ಯಮಗಳು ಹೇಳೋದು ಅವರ ಕರ್ತವ್ಯ. ದಯವಿಟ್ಟು ಅಸಡ್ಡೆ ತೋರಿಸಬೇಡಿ ಎಂದು ಜನರ ಬಳಿ ವಿನಂತಿಸಿದರು.
ಪತ್ನಿ ಸುನೇತ್ರ ಪಂಡಿತ್ ಮಾತನಾಡಿ, ಕೋವಿಡ್ನಿಂದ ನಮ್ಮ ಅಕ್ಕ ಸಾವನ್ನಪ್ಪಿದ್ದಾರೆ. ಬಿಬಿಎಂಪಿ ಒಂದು ಬೆಡ್ ನೀಡುವಾಗ ಐಸಿಯು ಇರುವ ಆಸ್ಪತ್ರೆಗೆ ಅಲರ್ಟ್ ಮಾಡಿ ಎಂದು ವಿನಂತಿಸಿದರು. ಆದರೆ ಐಸಿಯು ಇಲ್ಲದ ಆಸ್ಪತ್ರೆಗೆ ನಮ್ಮ ಅಕ್ಕನಿಗೆ ಅಲರ್ಟ್ ಮಾಡಿದ್ದಾರೆ. ಕೊರೊನಾ ಇಲ್ಲ ಎನ್ನುವವರ ಕಪಾಳಕ್ಕೆ ಹೊಡಿಯಿರಿ. ಎಷ್ಟು ಸಿರೀಯಸ್ ಇದೆ ಅಂತ ಅನುಭವಿಸಿದವರಿಗೆ ಮಾತ್ರ ಗೊತ್ತು ಎಂದರು.
ಮಾಧ್ಯಮದಲ್ಲಿ ಕೊರೊನಾ ಅರಿವು ಮೂಡಿಸುತ್ತಿದ್ದರೆ. ಕೊರೊನಾ ಅಂತ ತೋರಿಸಿದರೆ ಅವರಿಗೆ ಕಿರೀಟ ಬರುವುದಿಲ್ಲ. ಇಂತಹ ಮನಸ್ಥಿತಿಯ ಜನರಿಂದ ಕೊರೊನಾ ಹರಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.