ETV Bharat / state

ಕೊರೊನಾಗಿಂತ ಹೃದ್ರೋಗ - ಕ್ಷಯ ರೋಗಗಳು ದೊಡ್ಡವು: ನಾಗೇಶ್ ಹೆಗಡೆ - ಶ್ವಾಸಕೋಶ ಸಂಬಂಧಿ ಕಾಯಿಲೆ ಸಂಬಂಧಿತ ಸುದ್ದಿ

ಕೊರೊನಾಗಿಂತ ಹೃದ್ರೋಗ ಹಾಗೂ ಕ್ಷಯದ ಬಗ್ಗೆ ಹೆಚ್ಚು ಗಮನಹರಿಸಬೇಕಾಗಿದೆ. ಕೊರೊನಾ ಬಗ್ಗೆ ಅನಗತ್ಯ ಭೀತಿ ಸೃಷ್ಟಿಸಲಾಗಿದ್ದು, ಅದು ಅತಿ ದೊಡ್ಡ ಖಾಯಿಲೆ ಅಲ್ಲ ಎಂದು ಅಂಕಣಕಾರ ನಾಗೇಶ್ ಹೆಗಡೆ ಹೇಳಿದ್ದಾರೆ.

ಅಂಕಣಕಾರ ನಾಗೇಶ್ ಹೆಗಡೆ
ಅಂಕಣಕಾರ ನಾಗೇಶ್ ಹೆಗಡೆ
author img

By

Published : Dec 3, 2020, 7:43 PM IST

ಬೆಂಗಳೂರು: ಕೊರೊನಾ ಬಗ್ಗೆ ಅನಗತ್ಯ ಭೀತಿಯನ್ನು ಸೃಷ್ಟಿಸಲಾಗಿದ್ದು, ಅದು ಅತಿ ದೊಡ್ಡ ಖಾಯಿಲೆ ಎನ್ನುವುದು ಶುದ್ಧ ಸುಳ್ಳು ಎಂದು ಹಿರಿಯ ಪತ್ರಕರ್ತ, ಅಂಕಣಕಾರ ನಾಗೇಶ್ ಹೆಗಡೆ ಹೇಳಿದ್ದಾರೆ.

'ಅವಧಿ' ಅಂತರ್ಜಾಲ ತಾಣ ಹಮ್ಮಿಕೊಂಡಿದ್ದ ಸಂವಾದದಲ್ಲಿ ಮಾತನಾಡಿದ ಅವರು, ಕೊರೊನಾಗಿಂತ ನಾವು ಹೆಚ್ಚಾಗಿ ತಲೆಕೆಡಿಸಿಕೊಳ್ಳಬೇಕಾಗಿರುವುದು ಹೃದ್ರೋಗ ಹಾಗೂ ಕ್ಷಯದ ಬಗ್ಗೆ. ನಿತ್ಯ ಭಾರತದಲ್ಲಿ ಹೃದ್ರೋಗಕ್ಕೆ 9,500 ಮಂದಿ ಬಲಿಯಾಗುತ್ತಿದ್ದಾರೆ. ಶ್ವಾಸಕೋಶ ಸಂಬಂಧಿ ಕಾಯಿಲೆಗಳಿಗೆ ನಿತ್ಯ 7 ಸಾವಿರ ಜನ ಸಾವನ್ನಪ್ಪುತ್ತಿದ್ದಾರೆ. ಆದರೆ, ಕೊರೊನಾದಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ಒಂದು ಲಕ್ಷಕ್ಕೆ 8 ಜನ ಮಾತ್ರ ಎಂದರು.

ಹೃದ್ರೋಗ ಹಾಗೂ ಕ್ಷಯದಿಂದ ಸಾವನ್ನಪ್ಪುತ್ತಿರುವವರ ಪೈಕಿ ಭಾರತ ಜಗತ್ತಿನಲ್ಲೇ ಮೊದಲ ಸ್ಥಾನದಲ್ಲಿದೆ. ಪರಿಸ್ಥಿತಿ ಹೀಗಿರುವಾಗ ಅದಾವ ಶಕ್ತಿಗಳು ಕೊರೊನಾ ಬಗ್ಗೆ ಇಷ್ಟು ಉತ್ಸಾಹ ತಾಳಿದೆ ಎಂದು ಗೊತ್ತಾಗುತ್ತಿಲ್ಲ. ಹಾಗಂದ ಮಾತ್ರಕ್ಕೆ ಕೊರೊನಾವನ್ನು ಲಘುವಾಗಿ ತೆಗೆದುಕೊಂಡು ಬೇಕಾದಂತೆ ಗುಂಪುಗೂಡಿ, ಅಲಕ್ಷ್ಯ ಮಾಡಿ ಎಂದು ಹೇಳುತ್ತಿಲ್ಲ. ಮುಖ ಗವಸು ಧರಿಸುವುದು ಮುಖ್ಯ ಎಂದು ಕಿವಿಮಾತು ಹೇಳಿದರು.

ಮಲೆನಾಡಿನ ಕಣಿವೆಯಲ್ಲಿದ್ದ ನಾನು ಕಣಿವೆಯ ಆಳಕ್ಕೂ, ಹಿಮಾಲಯದ ಪರ್ವತದ ಎತ್ತರಕ್ಕೂ, ವಿದೇಶದ ಗಗನಚುಂಬಿ ಕಟ್ಟಡಗಳಿಗೂ ಮುಟ್ಟುವಂತಾಗಿದ್ದು, ನನ್ನ ಅದೃಷ್ಟ. ಇದರಿಂದ ನನಗೆ ಅಪಾರ ಸ್ನೇಹಿತ ವರ್ಗ ದಕ್ಕಿದೆ ಎಂದು ನೆನಪು ಮೆಲುಕು ಹಾಕಿದ ಅವರು, ಪರಿಸರ ಚಳವಳಿಗಳು ನನ್ನನ್ನು ರೂಪಿಸಿವೆ. ಹಾಗೆಯೇ ನಾನು ಬರೆದ ಲೇಖನಗಳ ಸುತ್ತಲೂ ಪರಿಸರ ಚಳವಳಿಗಳು ಹುಟ್ಟಿಕೊಂಡವು ಎಂದರು.

ಪತ್ರಕರ್ತನಾದವನು ಪ್ರಜಾಪ್ರಭುತ್ವದ ಪರ ವಾಲಿರಬೇಕು. ಪ್ರಜಾಪ್ರಭುತ್ವದ ಮೌಲ್ಯಗಳ ಪರ ವಾಲುವುದೂ ಸಹ ವೃತ್ತಿಪರ ಪತ್ರಿಕೋದ್ಯಮವೇ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.